ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

01-11-2021 Daily Top-10 General Knowledge Question Answers in Kannada for All Competitive Exams

01-11-2021 Daily Top-10 General Knowledge Question Answers in Kannada for All Competitive Exams


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಟೋಕಿಯೊ ಪ್ಯಾರಾಓಲಿಂಪಿಕ್ಸ್ 2020ಗಾಗಿ ಭಾರತದ ಧೈಯ ಗೀತೆಯನ್ನು ಯಾರು ರಚಿಸಿದರು?
ಎ) ವರುಣ್ ಮಿಶ್ರ
ಬಿ) ಸಂಜೀವ್ ಸಿಂಗ್
ಸಿ) ಮಾಧವಿದಾಸ್
ಡಿ) ಹೃದಯ್ ಭಾಟಿಯ 

ಸರಿಯಾದ ಉತ್ತರ: ಡಿ) ಹೃದಯ್ ಭಾಟಿಯ 



2. ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಯಾವುದು?
ಎ) ಕೇರಳ
ಬಿ) ತಮಿಳುನಾಡು
ಸಿ) ಕರ್ನಾಟಕ
ಡಿ) ತೆಲಂಗಾಣ

ಸರಿಯಾದ ಉತ್ತರ: ಸಿ) ಕರ್ನಾಟಕ  




3. ಉಪಗ್ರಹ ಟೆಲಿಫೋನ್‌ಗಳನ್ನು ಹೊಂದಿರುವ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವು ಯಾವುದು?
ಎ) ಬಂಡೀಪುರ
ಬಿ) ಸೈಲೆಂಟ್ ವ್ಯಾಲಿ
ಸಿ) ಪೆಂಚ್
ಡಿ) ಕಾಜಿರಂಗ 

ಸರಿಯಾದ ಉತ್ತರ: ಡಿ) ಕಾಜಿರಂಗ 



4. 'ಸೊನ್ ಚಿರೈಯ' ಬಗ್ಗೆಯ ಹೇಳಿಕೆಗಳನ್ನು ಗಮನಿಸಿ ಮತ್ತು ಸರಿಯಾದ ಉತ್ತರವನ್ನು ಆರಿಸಿ:
1. “ಸೊನ್ ಚಿರೈಯ' ನಗರ ಸ್ವಸಹಾಯ ಗುಂಪು ಉತ್ಪನ್ನಗಳ ಮಾರುಕಟ್ಟೆಗಾಗಿ ಆರಂಭಿಸಲಾಗಿದೆ.
2. ಇದನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆರಂಭಿಸಿದೆ.
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2 ಎರಡೂ ಸರಿ
ಡಿ) 1 ಮತ್ತು 2 ಅಲ್ಲ

ಸರಿಯಾದ ಉತ್ತರ: ಎ) 1 ಮಾತ್ರ 



5. ಭಾರತದ ಅತ್ಯುನ್ನತ ಗಿಡಮೂಲಿಕೆ ಉದ್ಯಾನವನವನ್ನು ಎಲ್ಲಿ ಉದ್ಘಾಟಿಸಲಾಗಿದೆ?
ಎ) ಅರುಣಾಚಲ ಪ್ರದೇಶ
ಬಿ) ಸಿಕ್ಕಿಂ
ಸಿ) ಉತ್ತರಾಖಂಡ
ಡಿ) ಹಿಮಾಚಲ ಪ್ರದೇಶ

ಸರಿಯಾದ ಉತ್ತರ: ಸಿ) ಉತ್ತರಾಖಂಡ 



6. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಸರಾಸರಿ ಸಾಕ್ಷರತಾ ದರ ಶೇಕಡಾವಾರು ಎಷ್ಟು?
ಎ) 66.65 % 
ಬಿ) 81.14 %
ಸಿ) 57.63 % 
ಡಿ) 75.36 % 

ಸರಿಯಾದ ಉತ್ತರ: ಡಿ) 75.36 % 




7. ಯಾವ ಕಾರಣಗಳಿಂದ ಸಾಗರ ಮತ್ತು ಸಮುದ್ರಗಳಲ್ಲಿ ಅಲೆಗಳು ಸಂಭವಿಸುತ್ತವೆ?
ಎ) ಸೂರ್ಯನ ಗುರುತ್ವಾಕರ್ಷಣೆಯ ಶಕ್ತಿ
ಬಿ) ಚಂದ್ರನ ಗುರುತ್ವಾಕರ್ಷಣೆಯ ಶಕ್ತಿ
ಸಿ) ಭೂಮಿಯ ಕೇಂದ್ರಾಪಗಾಮಿಯ ಶಕ್ತಿ
ಡಿ) ಮೇಲಿನ ಎಲ್ಲವೂ 

ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ 



8. ಈ ಕೆಳಗಿನವುಗಳಲ್ಲಿ ಯಾವುದು ಒಂದು ತಪ್ಪಾದ ಜೋಡಣೆಯಾಗಿದೆ?
         ರಾಷ್ಟ್ರ  ರಾಜಧಾನಿ
ಎ) ಸಿರಿಯಾ - ಡಮಾಸ್ಕಸ್
ಬಿ) ಉಜ್ಬೇಕಿಸ್ತಾನ - ತಾಷ್ಕೆಂಟ್
ಸಿ) ಅಫಘಾನಿಸ್ತಾನ - ಕಂದಹಾರ್ 
ಡಿ) ಸೊಮಾಲಿಯಾ - ಮೊಗಡಿಸು


ಸರಿಯಾದ ಉತ್ತರ: ಸಿ) ಅಫಘಾನಿಸ್ತಾನ ಕಂದಹಾರ್ 



9. 'ಮೆಡಿಟರೇನಿಯನ್ ಪ್ರದೇಶದ ಬೆಳಕಿನ ಮನೆ' ಎಂದು ಪ್ರಸಿದ್ಧವಾದ ಜ್ವಾಲಾಮುಖಿ ಯಾವುದು?
ಎ) ವೆಸುವಿಯನ್ 
ಬಿ) ಮೆರುಪ್ಪಿ
ಸಿ) ಎಟ್ನಾ
ಡಿ) ಸ್ಟ್ರಾಂಬೊಲಿ 


ಸರಿಯಾದ ಉತ್ತರ: ಡಿ) ಸ್ಟ್ರಾಂಬೊಲಿ 



10.  'ನಾರ್ಮನ್ ಬೋರ್ಲಾಗ್' ರವರಿಗೆ ಯಾವ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು?
ಎ) ಕೃಷಿ
ಬಿ) ಶಾಂತಿ
ಸಿ) ಅರ್ಥಶಾಸ್ತ್ರ 
ಡಿ) ವೈದ್ಯಕೀಯ


ಸರಿಯಾದ ಉತ್ತರ: ಬಿ) ಶಾಂತಿ 


Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area