ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​27-11-2021 Daily Top-10 General Knowledge Question Answers in Kannada for All Competitive Exams

27-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಆರ್ಥಿಕ ವಲಯಗಳನ್ನು ಸಾರ್ವಜನಿಕ ಮತ್ತು ಖಾಸಗಿ ವಲಯಗಳೆಂದು ವರ್ಗೀಕರಿಸಿದ ಆಧಾರ
ಎ) ಔದ್ಯೋಗಿಕ ಸ್ಥಿತಿಗತಿಗಳು
ಬಿ) ಆರ್ಥಿಕ ಚಟುವಟಿಕೆಗಳು ಸ್ವರೂಪ
ಸಿ) ಸಂಘಟನೆಯ ಮಾಲಿಕತ್ವ
ಡಿ) ಸಂಘಟನೆಯಲ್ಲಿ ತೊಡಗಿರುವವರ ಕೆಲಸಗಾರರ ಸಂಖ್ಯೆ

ಸರಿಯಾದ ಉತ್ತರ: ಸಿ) ಸಂಘಟನೆಯ ಮಾಲಿಕತ್ವ 



2. ಈ ಕೆಳಗಿನವುಗಳಲ್ಲಿ ಯಾವುದು ಪರೋಕ್ಷ ತೆರಿಗೆಗಳ ಗುಂಪಾಗಿದೆ?
ಎ) ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ 
ಬಿ) ವರಮಾನ ತೆರಿಗೆ, ಆಮದು-ರಫ್ತು ತೆರಿಗೆ, ಉದ್ಯೋಗ ಸ್ಟಾಂಪ್ ಶುಲ್ಕ
ಸಿ) ಕಂಪನಿ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಸಂಪತ್ತಿನ ತೆರಿಗೆ
ಡಿ) ಸಂಪತ್ತಿನ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಆಮದು- ರಪ್ತು ತೆರಿಗೆ

ಸರಿಯಾದ ಉತ್ತರ: ಎ) ಅಬಕಾರಿ ತೆರಿಗೆ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ   



03. ಜಿಡಿಪಿ ಎನ್ನುವುದು ಇವುಗಳ ಒಟ್ಟು ಮೌಲ್ಯವಾಗಿದೆ.
ಎ) ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಎಲ್ಲಾ ಸರಕು ಮತ್ತು ಸೇವೆಗಳು
ಬಿ) ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಂತಿಮ ಸರಕು ಮತ್ತು ಸೇವೆಗಳು
ಸಿ) ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಮಧ್ಯವರ್ತಿ ಸರಕು ಮತ್ತು ಸೇವೆಗಳು
ಡಿ) ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಂತಿಮ ಮತ್ತು ಮಧ್ಯವರ್ತಿ ಸರಕು ಮತ್ತು ಸೇವೆಗಳು

ಸರಿಯಾದ ಉತ್ತರ: ಬಿ) ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದನೆಯಾದ ಅಂತಿಮ ಸರಕು ಮತ್ತು ಸೇವೆಗಳು 




4. “ಡಿಮ್ಯಾಟ್” ಎನ್ನುವುದು
ಎ) ಹಣ ಉಳಿತಾಯ ಮಾಡಲು ಗ್ರಾಮೀಣ ಜನರು ಅಂಚೆ ಕಚೇರಿಯಲ್ಲಿ ತೆರೆಯುವ ಖಾತೆ
ಬಿ) ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯುವ ಸಲುವಾಗಿ ಬ್ಯಾಂಕಿನಲ್ಲಿ ತೆರೆಯುವ ಖಾತೆ
ಸಿ) ಕೈಗಾರಿಕೋದ್ಯಮಿಗಳು ತಮ್ಮ ವ್ಯವಹಾರಕ್ಕಾಗಿ ಬ್ಯಾಂಕಿನಲ್ಲಿ ತೆರೆಯುವ ವಿಶೇಷ ಖಾತೆ
ಡಿ) ಷೇರುಗಳನ್ನು ಮಾರಲು ಮತ್ತು ಕೊಳ್ಳಲು ಬ್ಯಾಂಕಿನಲ್ಲಿ ತೆರೆಯುವ ಖಾತೆ

ಸರಿಯಾದ ಉತ್ತರ: ಡಿ) ಷೇರುಗಳನ್ನು ಮಾರಲು ಮತ್ತು ಕೊಳ್ಳಲು ಬ್ಯಾಂಕಿನಲ್ಲಿ ತೆರೆಯುವ ಖಾತೆ 





5. ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಇದೊಂದು ಪರೋಕ್ಷ ತೆರಿಗೆ ಪದ್ಧತಿಯಾಗಿದೆ.
ಬಿ. ಏಪ್ರಿಲ್ 01, 2017 ರಿಂದ ಇದು ಜಾರಿಗೆ ಬಂದಿದೆ.
ಸಿ. ಐದು ಹಂತಗಳ ತೆರಿಗೆಯ ಶ್ರೇಣಿಯನ್ನು ಹೊಂದಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು
ಎ) ಎ ಮತ್ತು ಬಿ 
ಬಿ) ಬಿ ಮತ್ತು ಸಿ
ಸಿ) ಎ ಮತ್ತು ಸಿ 
ಡಿ) ಎ, ಬಿ ಮತ್ತು ಸಿ

ಸರಿಯಾದ ಉತ್ತರ: ಸಿ) ಎ ಮತ್ತು ಸಿ




6. ರವೀಂದ್ರನಾಥ ಟ್ಯಾಗೋರ್‌ರವರು ಗಾಂಧೀಜಿಯವರಿಗೆ 'ಮಹಾತ್ಮ' ಎಂಬ ಬಿರುದನ್ನು ನೀಡಿದರೆ, ಗಾಂಧೀಜಿಯವರಿಗೆ 'ಹಾಫ್ ನೇಕೆಡ್ ಫಕೀರ್' ಎಂಬ ಬಿರುದನ್ನು ನೀಡಿದವರು ಯಾರು?
ಎ) ಗೋಪಾಲಕೃಷ್ಣ ಗೋಖಲೆ
ಬಿ) ಸರ್, ವಿನ್‌ಸ್ಟನ್ ಚರ್ಚಿಲ್
ಸಿ) ಪ್ರೆಸಿಡೆಂಟ್ ರೂಸವೆಲ್ಟ್
ಡಿ) ಸುಭಾಷ್ ಚಂದ್ರಬೋಸ್

ಸರಿಯಾದ ಉತ್ತರ: ಬಿ) ಸರ್, ವಿನ್‌ಸ್ಟನ್ ಚರ್ಚಿಲ್ 




7. ಭಾರತೀಯ ಸಂವಿಧಾನದ ಕೆಳಗಿನ ಯಾವ ಅನುಸೂಚಿಯು ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರಗಳ ಹಂಚಿಕೆಗೆ ಸಂಬಂಧಿಸಿದೆ?
ಎ) 8ನೇ ಅನುಸೂಚಿ 
ಬಿ) 11ನೇ ಅನುಸೂಚಿ
ಸಿ) 7ನೇ ಅನುಸೂಚಿ
ಡಿ) 4ನೇ ಅನುಸೂಚಿ

ಸರಿಯಾದ ಉತ್ತರ: ಸಿ) 7ನೇ ಅನುಸೂಚಿ  




8. ಗ್ರಾಮೀಣ ಸಾಲ ಮತ್ತು ಕೃಷಿ ಅಭಿವೃದ್ಧಿಗೆ ಅನುಕೂಲವಾಗುವಂತೆ ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವೆಲಪ್‌ಮೆಂಟ್ (ನಬಾರ್ಡ್) ಅನ್ನು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪಿಸಲಾಯಿತು?
ಎ) 5ನೇ
ಬಿ) 6ನೇ
ಸಿ) 3ನೇ
ಡಿ) 8ನೇ

ಸರಿಯಾದ ಉತ್ತರ: ಬಿ) 6ನೇ




9. ಮಳೆಗಾಲದಲ್ಲಿ ಮರದ ಬಾಗಿಲುಗಳು ಹೆಚ್ಚಾಗಿ ಉಬ್ಬುತ್ತವೆ ಮತ್ತು ಅಂಟಿಕೊಳ್ಳುತ್ತವೆ, ಇದಕ್ಕೆ ಈ ವಿದ್ಯಮಾನ ಕಾರಣವಾಗಿದೆ.
ಎ) ಎಂಡೋಸ್ಮೋಸಿಸ್
ಬಿ) ಇಂಬಿಬಿಷನ್
ಸಿ) ಎಂಡೋ ಸೈಟೋಸಿಸ್
ಡಿ) ಕ್ಯಾಪಿಲ್ಯಾರಿಟಿ

ಸರಿಯಾದ ಉತ್ತರ: ಬಿ) ಇಂಬಿಬಿಷನ್ 




10.  ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
ಎ) ಭಾರತವು ಒಟ್ಟು ಸಿ)28 ಮಿಲಿಯನ್ ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.
ಬಿ) ಭಾರತದ ಮುಖ್ಯ ಭೂಭಾಗವು 6100 ಕಿ.ಮೀ ಕರಾವಳಿ ತೀರವನ್ನು ಹೊಂದಿದೆ
ಸಿ) ಭಾರತವು ದ್ವೀಪಗಳನ್ನು ಒಳಗೊಂಡಂತೆ ಒಟ್ಟು 7,516 ಕಿ.ಮೀ ಕರಾವಳಿ ತೀರವನ್ನು ಹೊಂದಿದೆ.
ಡಿ) ಭಾರತವು ಪೂರ್ವದಿಂದ ಪಶ್ಚಿಮಕ್ಕೆ 3,214 ಕಿ.ಮೀ ಮತ್ತು ಉತ್ತರದಿಂದ ದಕ್ಷಿಣಕ್ಕೆ 2,933 ಕಿ.ಮೀ ಹೊಂದಿದೆ.

ಸರಿಯಾದ ಉತ್ತರ: ಡಿ) ಭಾರತವು ಪೂರ್ವದಿಂದ ಪಶ್ಚಿಮಕ್ಕೆ 3,214 ಕಿ.ಮೀ ಮತ್ತು ಉತ್ತರದಿಂದ ದಕ್ಷಿಣಕ್ಕೆ 2,933 ಕಿ.ಮೀ ಹೊಂದಿದೆ. 


 ಇವುಗಳನ್ನೂ ಓದಿ 




















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area