ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

14-11-2021 Daily Top-10 General Knowledge Question Answers in Kannada for All Competitive Exams

14-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ನೀಲಿ ಆಧಾರ್ ಕಾರ್ಡ್ (BlueAdhar Card) ಎಂದರೆ
ಎ) 5 ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ನೀಡಲಾಗುತ್ತದೆ
ಬಿ) ಪಟ್ಟಣದಲ್ಲಿರುವ ಕಾರ್ಮಿಕರಿಗೆ ನೀಡಲಾಗುತ್ತದೆ
ಸಿ) MGNREGA ದಡಿಯಲ್ಲಿ ನೋಂದಾಯಿತ ಕೆಲಸಗಾರರಿಗೆ
ಡಿ) ವಿದೇಶದಿಂದ ಬಂದು ನೆಲೆಸಿದವರಿಗೆ ನೀಡಲಾಗುತ್ತದೆ


ಸರಿಯಾದ ಉತ್ತರ: ಎ) 5 ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ನೀಡಲಾಗುತ್ತದೆ 



2. ಕೆಳಗಿನ ರಾಜ್ಯಗಳನ್ನು ರಾಜ್ಯಗಳಾಗಿ ರಚಿಸಿದ ವರ್ಷದ ಆಧಾರದ ಮೇಲೆ ಕಾಲಾನುಕ್ರಮದಲ್ಲಿ ಜೋಡಿಸಿ
1) ನಾಗಾಲ್ಯಾಂಡ್
2) ಮೇಘಾಲಯ
3) ಮಿಜೋರಾಂ
4) ಸಿಕ್ಕಿಂ
ಆಯ್ಕೆಗಳು
ಎ) 1-2-4-3
ಬಿ) 1-2-3-4
ಸಿ) 1-3-2-4
ಡಿ) 2-1-3-4


ಸರಿಯಾದ ಉತ್ತರ: ಎ) 1-2-4-3 



03. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿ ಉತ್ತರವನ್ನು ಆರಿಸಿರಿ.
1) ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ರಾಷ್ಟ್ರಪತಿಯವರು ಯಾವುದೇ ವಿಟೋ ಅಧಿಕಾರವನ್ನು ಹೊಂದಿಲ್ಲ
2) ಹಣಕಾಸು ಮಸೂದೆಯನ್ನು ರಾಷ್ಟ್ರಪತಿಯವರು ತಿರಸ್ಕರಿಸಬಹುದು ಆದರೆ ಮರುಪರಿಶೀಲನೆಗೆ ಕಳುಹಿಸುವಂತಿಲ್ಲ
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಸಿ) 1 ಮತ್ತು 2





4. ಕೆಳಗಿನವುಗಳಲ್ಲಿ ಯಾವ ಕ್ಯಾಬಿನೆಟ್ ಸಮಿತಿಯನ್ನು ಸಾಮಾನ್ಯವಾಗಿ ಸೂಪರ್ ಕ್ಯಾಬಿನೆಟ್ ಎಂದು ಪರಿಗಣಿಸಲಾಗುತ್ತದೆ ?
ಎ) ರಾಜಕೀಯ ವ್ಯವಹಾರಗಳ ಸಮಿತಿ
ಬಿ) ಆರ್ಥಿಕ ವ್ಯವಹಾರಗಳ ಸಮಿತಿ
ಸಿ) ನೇಮಕಾತಿ ಸಮಿತಿ
ಡಿ) ಸಂಸದೀಯ ವ್ಯವಹಾರಗಳ ಸಮಿತಿ

ಸರಿಯಾದ ಉತ್ತರ: ಎ) ರಾಜಕೀಯ ವ್ಯವಹಾರಗಳ ಸಮಿತಿ 





5. ಈ ಕೆಳಗಿನ ಯಾವ ಸಮಿತಿಗಳು ಚುನಾವಣಾ ಸುಧಾರಣೆಗೆ ಸಂಬಂಧಿಸಿವೆ ?
1) ತರ್ಕುಂಡೆ ಸಮಿತಿ (1974)
2) ಇಂದ್ರಜಿತ್ ಗುಪ್ತಾ ಸಮಿತಿ
3) ದಿನೇಶ ಗೋಸ್ವಾಮಿ ಸಮಿತಿ
4) ತಂಖಾ ಸಮಿತಿ
ಎ) 1 ಮತ್ತು 2
ಬಿ) 3 ಮತ್ತು 4
ಸಿ) 2, 3 ಮತ್ತು 4
ಡಿ) 1, 2, 3 ಮತ್ತು 4 


ಸರಿಯಾದ ಉತ್ತರ: ಡಿ) 1, 2, 3 ಮತ್ತು 4




6. ನುಸಿ ಉಂಡೆಗಳ ಘಟಕಗಳೇನು ?
ಎ) ಸುಣ್ಣ
ಬಿ) ಕ್ಲೋರಿನ್
ಸಿ) ನ್ಯಾಫ್ರಲಿನ್
ಡಿ) ಅಯೋಡಿನ್


ಸರಿಯಾದ ಉತ್ತರ: ಸಿ) ನ್ಯಾಫ್ರಲಿನ್  




7. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಪ್ರಕಾರ ಕುಡಿಯುವ ನೀರಿನಲ್ಲಿ ಅನುಮತಿಸಲಾದ 'pH ಮೌಲ್ಯದ ವ್ಯಾಪ್ತಿ
ಎ) 4.5 - 6.5
ಬಿ) 5.5 - 7.5
ಸಿ) 6.5 - 8.5 
ಡಿ) 7.5 - 9.5


ಸರಿಯಾದ ಉತ್ತರ: ಸಿ)  6.5 - 8.5




8. ಉಸಿರಾಟದ ಸಮಯದಲ್ಲಿ ಗಾಳಿಯ ಗಾತ್ರವನ್ನು ಹೀಗೆ ಕರೆಯುತ್ತಾರೆ ?
ಎ) ವೈಟಲ್ ಗಾತ್ರ
ಬಿ) ಟೈಡಲ್ ಗಾತ್ರ
ಸಿ) ವೈಟಲ್ ಕ್ಷಮತೆ
ಡಿ) ಐಡಿಯಲ್ ಗಾತ್ರ


ಸರಿಯಾದ ಉತ್ತರ: ಬಿ) ಟೈಡಲ್ ಗಾತ್ರ 




9. ಚೇಳು ಯಾವ ಅಂಗದ ಮೂಲಕ ಉಸಿರಾಡುತ್ತದೆ ?
ಎ) ಶ್ವಾಸಕೋಶಗಳು
ಬಿ) ಕಿವಿರುಗಳು
ಸಿ) ಬುಕ್ ಲಂಗ್ಸ್
ಡಿ) ಶ್ವಾಸನಾಳ


ಸರಿಯಾದ ಉತ್ತರ: ಸಿ) ಬುಕ್ ಲಂಗ್ಸ್ 




10.  ಕೆನಾಯಿನ್ ಡಿಸ್ಟಂಪರ್ ವೈರಸ್ ಯಾವ ಸಂತತಿಯ ನಾಶಕ್ಕೆ ಕಾರಣವಾಗುತ್ತದೆ ?
ಎ) ಹುಲಿ
ಬಿ) ಜಿಂಕೆ
ಸಿ) ಸಿಂಹ
ಡಿ) ಘೇಂಡಾಮೃಗ


ಸರಿಯಾದ ಉತ್ತರ: ಸಿ) ಸಿಂಹ 


 ಇವುಗಳನ್ನೂ ಓದಿ 











Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area