Most Important Notes

Breaking

Ads

Download Edutube Kannada Android App Now

Click Here to Join our Telegram Channel

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Wednesday, 3 November 2021

03-11-2021 Daily Top-10 General Knowledge Question Answers in Kannada for All Competitive Exams

03-11-2021 Daily Top-10 General Knowledge Question Answers in Kannada for All Competitive Exams


Daily Top-10 General Knowledge Question Answers in Kannada for All Competitive Exams www.edutubekannada.com💥💥💥💥
01.  ವಿಕೇಂದ್ರಿಕರಣ ಕ್ರಮಗಳಿಗೆ ಕೆಳಗಿನ ವರದಿ ಸಂಬಂಧಿಸಿಲ್ಲ.
ಎ) ಅಶೋಕ್ ಮೆಹ್ತಾ ಸಮಿತಿಯ ವರದಿ
ಬಿ) ಬಲವಂತ್‌ರಾಯ್ ಮೆಹ್ತಾ ಸಮಿತಿಯ ವರದಿ
ಸಿ) ಸೆನ್ ಸಮಿತಿಯ ವರದಿ
ಡಿ) ರಾಜಮನ್ನಾರ್ ಸಮಿತಿಯ ವರದಿ


ಸರಿಯಾದ ಉತ್ತರ : ಡಿ) ರಾಜಮನ್ನಾರ್ ಸಮಿತಿಯ ವರದಿ

ವಿವರಣೆ :

1. ಬಲವಂತರಾಯ್ ಮೆಹ್ತಾ ಸಮಿತಿ - 1957 : ಪ್ರಮುಖ ಶಿಫಾರಸ್ಸುಗಳು

* ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ದೇಶದಲ್ಲಿ ಪ್ರಾರಂಭಿಸಲು ಸಲಹೆ

# ಮೂರು ಹಂತದ ಹಳ್ಳಿಯಿಂದ ಜಿಲ್ಲೆಯವರೆಗಿನ ಸ್ಥಳೀಯ ಸ್ವಾಯತ್ತ ಸರಕಾರಗಳ ರಚನೆಗೆ ಶಿಫಾರಸ್ಸು ಮಾಡಿತು.

2. ಅಶೋಕ್ ಮೆಹ್ತಾ ಸಮಿತಿ - 1977 ಪ್ರಮುಖ ಶಿಫಾರಸ್ಸುಗಳು

* ಎರಡು ಹಂತದ ಜಿಲ್ಲಾ ಪಂಚಾಯತ್ ಮತ್ತು ಮಂಡಲ ಪಂಚಾಯತ್ ವ್ಯವಸ್ಥೆಗೆ ಶಿಫಾರಸ್ಸು ಮಾಡಿತು.

3. ಪ್ರಣಬ್ ಸೆನ್ ಸಮಿತಿ : ಕೊಳಚೆ ಪ್ರದೇಶಗಳ ಬಗ್ಗೆ

4. ಡಾ. ಪಿ.ವಿ. ರಾಜಮನ್ನಾರ್ ಸಮಿತಿ 1969 : 4ನೇ

ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರು, ಮದ್ರಾಸ್ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಮೂರ್ತಿಗಳು ರಾಜ್ಯಗಳ ಸ್ವಾಯತ್ತತೆ ಹಾಗೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಬಗ್ಗೆ ವರದಿ.

 2. ಸುಮಾರು ಎಷ್ಟು ವರ್ಷಗಳ ಹಿಂದೆ ವಿಶ್ವವು ಅಸ್ತಿತ್ವಕ್ಕೆ ಬಂದಿತು.
ಎ) 15 ಮಿಲಿಯನ್ ವರ್ಷಗಳ ಹಿಂದೆ
ಬಿ) 15 ಬಿಲಿಯನ್ ವರ್ಷಗಳ ಹಿಂದೆ
ಸಿ) 5 ಮಿಲಿಯನ್ ವರ್ಷಗಳ ಹಿಂದೆ
ಡಿ) 5 ಬಿಲಿಯನ್ ವರ್ಷಗಳ ಹಿಂದೆ

ಸರಿಯಾದ ಉತ್ತರ: ಡಿ) 5 ಬಿಲಿಯನ್ ವರ್ಷಗಳ ಹಿಂದೆ

ವಿವರಣೆ : ಸುಮಾರು 4.8 ಬಿಲಿಯನ್ ವರ್ಷಗಳ ಹಿಂದೆ ಭೂಮಿಯು ಉಗಮವಾಯಿತು. ಆಗ ಇದು ಅತ್ಯಧಿಕ ತಾಪಮಾನದಿಂದ ಸುತ್ತುತ್ತಿದ್ದ ಉಂಡೆಯ ರೂಪದಲ್ಲಿತ್ತು. ಅಧಿಕ ತಾಪಮಾನದಿಂದಾಗಿ ಅಲ್ಲಿ ಯಾವ ಜೀವಿಗಳು ಇರಲಿಲ್ಲ. ಭೂಮಿಯ ಮೇಲೆ ಮೊದಲ ಜೀವಿಯ ಉಗಮದ ಬಗ್ಗೆ ರಾಸಾಯನಿಕ ವಿಕಾಸದ ಸಿದ್ಧಾಂತವು ವಿವರಿಸುತ್ತದೆ. ಇದನ್ನು ಒಪ್ಯಾರಿಸ್ ಮತ್ತು ಹಾಲ್ಡೇನ್ ಎಂಬ ವಿಜ್ಞಾನಿಗಳು ಸ್ವತಂತ್ರವಾಗಿ ನಿರೂಪಿಸಿದರು. ಭೂಮಿಯ ಮೊದಲ ವಾತಾವರಣದಲ್ಲಿ ಆಕ್ಸಿಜನ್ ಅನಿಲ ಇರಲಿಲ್ಲ.
03. ವಾತಾವರಣದಲ್ಲಿ ಕೆಳಗಿನ ಯಾವುದು ಹೆಚ್ಚಿನ ಅಂಶವನ್ನು ಹೊಂದಿದೆ.
ಎ) ಆಮ್ಲಜನಕ
ಬಿ) ಸಾರಜನಕ
ಸಿ) ಕಾರ್ಬನ್‌ಡಯಾಕ್ಸೆಡ್
ಡಿ) ನೀರಿನ ಭಾಷ್ಪ 


ಸರಿಯಾದ ಉತ್ತರ: ಬಿ) ಸಾರಜನಕ

ವಿವರಣೆ : ಭೂಮಿಯ ವಾತಾವರಣ ಸಂಯೋಜನೆ

1. ಸಾರಜನಕ - 78, 08%

2. ಆಮ್ಲಜನಕ - 20.94%

3, ಆರ್ಗಾನ್ - 0.93%

4. ಇಂಗಾಲದ ಡೈ ಆಕ್ಸೈಡ್ - 0.03%

5. ಓರೋನ್ 0.00005%

6. ಹೀಲಿಯಂ 0.0005%4. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು?
ಎ) ಸಿರಸ್ ಮೋಡಗಳು
ಬಿ) ಸ್ಪ್ರಾಟಸ್ ಮೋಡಗಳು
ಸಿ) ಕ್ಯುಮಲಸ್ ಮೋಡಗಳು
ಡಿ) ನಿಂಬೋಸ್ಟ್ರಾಟಸ್ ಮೋಡಗಳು

ಸರಿಯಾದ ಉತ್ತರ: ಎ) ಸಿರಸ್ ಮೋಡಗಳು

ವಿವರಣೆ :

ಮೋಡಗಳ ವಿಧಗಳು

1. ಪದರು ಮೋಡಗಳು (Stratus clouds)

* ವಾಯುಮಂಡಲದಲ್ಲಿ ಅತ್ಯಂತ ಕೆಳಮಟ್ಟದಲ್ಲಿರುತ್ತವೆ.

ಭೂಮೇಲ್ಮನಿಂದ 2 ಕಿ.ಮೀ. ಗಳಷ್ಟು ಎತ್ತರದವರೆಗೆ ಕಂಡು ಬರುತ್ತವೆ.

* ಅಲ್ಪ ಮಳೆಯನ್ನು ತರುತ್ತವೆ.

2. ರಾಶಿ ಮೋಡಗಳು (Cumulus clouds)

* ಇವು ಮಳೆ ತರುವ ಮೋಡಗಳು

* ಇವು ಉಣ್ಣೆಯ ಮುದ್ದೆಯಂತೆ ಕಂಡುಬರುವುದರಿಂದ ಇವುಗಳನ್ನು 'ಉಣ್ಣೆಯ ಗುಡ್ಡೆ' ಎನ್ನುವುದು.

* ಇವು ಬಿಳಿಯ ಬಣ್ಣದಿಂದ ಕಪ್ಪು ಬಣ್ಣದವರೆಗೂ ಕಂಡು ಬರುತ್ತವೆ.

* ಇವು ಸಂಪೂರಿತಗೊಂಡಾಗ ಮಳೆಯನ್ನು ನೀಡುತ್ತವೆ.

3. ಹಿಮಕಣ ಮೋಡಗಳು (Cirrus clouds)

* ಇವು ವಾಯುಮಂಡಲದಲ್ಲಿ ಅತಿ ಹೆಚ್ಚು ಎತ್ತರದಲ್ಲಿ ಅಂದರೆ 6 ಕಿ.ಮೀ.ಗಳಿಗಿಂತ ಎತ್ತರದಲ್ಲಿರುತ್ತದೆ.

* ಇವು 'ಗುಂಗುರು ಕೂದಲನ್ನು ಹೋಲುತ್ತಿದ್ದು ರೆಕ್ಕೆ ಅಥವಾ ನಾರನ್ನು ಹೊಂದಿರುವಂತೆ ಕಾಣುತ್ತವೆ.

* ಇವುಗಳನ್ನು 'ಕುದುರೆ ಬಾಲ' ಎಂತಲೂ ಕರೆಯುತ್ತಾರೆ.

4, ರಾಶಿವೃಷ್ಟಿ ಮೋಡಗಳು (Nimbus clouds)

* ಇವು ಮಳೆ ತರುವ ಮೋಡಗಳಾಗಿದ್ದು ಕೆಳಮಟ್ಟದಲ್ಲಿರುತ್ತವೆ.

* ಇವು ಹೆಚ್ಚು ಮಳೆ ಮತ್ತು ಹಿಮಮಳೆಯನ್ನು ಸುರಿಸುತ್ತವೆ.

* ಇವು ದಪ್ಪನಾಗಿದ್ದು ಅಧಿಕ ಮಳೆ ತರುತ್ತವೆ.5. ಅಂತರಾಷ್ಟ್ರೀಯ ಡೇಟ್‌ಲೈನ್ ಯಾವುದಕ್ಕೆ ಸಮೀಪವಿದೆ?
ಎ) 0° ರೇಖಾಂಶ
ಬಿ) 90° ರೇಖಾಂಶ
ಸಿ) 90° ಪಶ್ಚಿಮ ರೇಖಾಂಶ
ಡಿ) 180° ರೇಖಾಂಶ

ಸರಿಯಾದ ಉತ್ತರ: ಡಿ) 180° ರೇಖಾಂಶ

ವಿವರಣೆ :

ಲಂಡನ್‌ನ ಗ್ರೀನ್‌ವಿಚ್ ಬಳಿಯ ರಾಯಲ್ ವೀಕ್ಷಣಾಲಯದ ಮೇರೆ ಹಾದುಹೋಗುವ 0° ರೇಖಾಂಶವನ್ನು ಗ್ರೀನ್‌ವಿಚ್ ರೇಖೆ ಮತ್ತು ಪ್ರಧಾನ ರೇಖಾಂಶವೆಂದು ಗುರುಸಿಸುವುದು. 180° ರೇಖಾಂಶವನ್ನು ಅಂತರಾಷ್ಟ್ರೀಯ ಡೇಟ್‌ಲೈನ್ ಎಂದು ಗುರುತಿಸಲಾಗಿದೆ. ಇದು ಫೆಸಿಫಿಕ್ ಸಾಗರದಲ್ಲಿದ್ದು ಬೇರಿಂಗ್ ಸಮುದ್ರವನ್ನು ಎರಡು ಸಮಭಾಗಗಳಾಗಿ ವಿಭಾಗಿಸುವುದು. ನಾವು ಪೂರ್ವ ಅಥವಾ ಪಶ್ಚಿಮಕ್ಕೆ 180° ದಾಟುವಾಗ ಒಂದು ದಿನ ವ್ಯತ್ಯಾಸವಾಗುತ್ತದೆ. ಪೂರ್ವಕ್ಕೆ ಪ್ರಯಾಣ ಮಾಡುವಾಗ ಒಂದು ದಿನ ಕಡಿಮೆಯಾಗುತ್ತದೆ. ಪಶ್ಚಿಮಕ್ಕೆ ಪ್ರಯಾಣ ಮಾಡುವಾಗ ಒಂದು ದಿನ ಹೆಚ್ಚಾಗುತ್ತದೆ.6. ಮೊಘಲರ ಮನ್ಸಬ್ದಾರಿ ವ್ಯವಸ್ಥೆಯು
ಎ) ನಾಗರೀಕ ಹಾಗೂ ಸೇನಾ ವ್ಯವಹಾರಗಳ ಶ್ರೇಣಿ ಪದ್ಧತಿ
ಬಿ) ಭೂಮಿಯ ಕೊಡುಗೆ, ಇದರಿಂದಾಗಿ ಜಮೀನ್ದಾರ ವ್ಯವಸ್ಥೆಯ ನಿರ್ಮಾಣ
ಸಿ) ರಾಜ ಕುಟುಂಬದ ಸದಸ್ಯರು ಆಚರಿಸುತಿದ್ದ ಒಂದು ಉತ್ಸವ
ಡಿ) ಅಕ್ಟರನು ಧಾರ್ಮಿಕ ಕ್ಷೇತ್ರದಲ್ಲಿ ಜಾರಿಗೆ ತಂದ ಸುಧಾರಣೆಗಳು


ಸರಿಯಾದ ಉತ್ತರ: ಎ) ನಾಗರೀಕ ಹಾಗೂ ಸೇನಾ ವ್ಯವಹಾರಗಳ ಶ್ರೇಣಿ ಪದ್ಧತಿ 

ವಿವರಣೆ : 

ಮನ್ಸಬಾದಾರ್ ಪದ್ಧತಿ ಎಂದರೆ ಸೈನಿಕ ಶ್ರೀಮಂತ ಪ್ರಭುತ್ವ ಅಥವಾ ಸೈನಿಕ ದರ್ಜೆ, ಹುದ್ದೆ ಎಂತಲೂ ಕರೆಯಬಹುದು. ಈ ಪದ್ಧತಿಯ ಮೂಲ ಮಧ್ಯ ಏಷ್ಯಾ ಮಂಗೋಲರ ದಾಳಿಯಿಂದಾಗಿ ಇದು ಭಾರತದಲ್ಲಿ ಬೆಳೆಯಲು ಸಹಾಯಕವಾಯಿತು. ಇದನ್ನು ಮೊದಲು ಬಾಬರ್ ಜಾರಿಗೆ ತಂದನು. ನಂತರ ಅಕ್ಟರ್‌ ತನ್ನ ಸೈನ್ಯದಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಂಡನು. ಈ ಪದ್ಧತಿಗೆ ಔಟ್ ಎಂದೂ ಸಹ ಕರೆಯಲಾಗಿದೆ. ಮನ್ಸಬ್‌ದಾರರು ಶ್ರೀಮಂತ ವರ್ಗಕ್ಕೆ ಸೇರಿದವರಾಗಿದ್ದರು. ಮೊಘಲರ ಈ ಶ್ರೀಮಂತ ಪ್ರಭುತ್ವದಲ್ಲಿ 4 ವರ್ಗಗಳನ್ನು ಕಾಣಬಹುದು. ಮೊದಲನೆಯ ದರ್ಜೆ ರಾಜಕುಮಾರರು, ಎರಡನೆಯ ದರ್ಜೆ ನೋಬಲರು, ಮೂರನೆಯ ದರ್ಜೆ - ಸವಾರರು, ನಾಲ್ಕನೆಯ ದರ್ಜೆ ಮನ್ಸಬ್ದಾರರು. ಮೊಘಲರ ಶ್ರೀಮಂತ ಮನ್ಸಬ್‌ದಾರ್ ಪದ್ಧತಿಯಲ್ಲಿ ಮನ್ಸಬ್‌ದಾರರು ಅತ್ಯಂತ ಕೆಳ ದರ್ಜೆಗೆ ಸೇರಿದ್ದರು.
7. ಭಾರತೀಯ ಸಂವಿಧಾನದ 86ನೇ ತಿದ್ದುಪಡಿಯು ಯಾವುದಕ್ಕೆ ಸಂಬಂಧಿಸಿದೆ?
ಎ) ಪೀಸಾ ಕಾಯಿದೆ
ಬಿ) ಪ್ರಾಥಮಿಕ ಶಿಕ್ಷಣ
ಸಿ) ಆಸ್ತಿ
ಡಿ) ಪಂಚಾಯತ್ ರಾಜ್ 

ಸರಿಯಾದ ಉತ್ತರ: ಬಿ) ಪ್ರಾಥಮಿಕ ಶಿಕ್ಷಣ

ವಿವರಣೆ : 

ಸಂವಿಧಾನದ 86ನೇ ತಿದ್ದುಪಡಿಯನ್ನು 2002ರಲ್ಲಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮಾಡಲಾಯಿತು. ಈ ತಿದ್ದುಪಡಿಯು 6 ರಿಂದ 14 ವರ್ಷದವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕನ್ನಾಗಿ ಮಾಡಲಾಯಿತು. ಇದನ್ನು ಒದಗಿಸುವುದು ತಂದೆ ತಾಯಿ, ಪೋಷಕರ ಕರ್ತವ್ಯವಾಗಿದೆ. ಅನುಚ್ಛೇದ 51 (ಎ) ಯನ್ನು ತಿದ್ದುಪಡಿ ಮಾಡಿ ಉಪಖಂಡ 'ಜೆ' ನಂತರ ಒಂದು ಹೊಸ ಉಪಖಂಡ (ಕೆ)ಯನ್ನು ಸೇರಿಸಲಾಯಿತು. ಇದು ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದೆ.8. ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಈ ಕೆಳಕಂಡುದರ ಅನ್ವಯ ಸ್ಥಾಪಿಸಲಾಗಿದೆ.
ಎ) ಮೂಲಭೂತಹಕ್ಕುಗಳು
ಬಿ) ಮೂಲಭೂತ ಕರ್ತವ್ಯಗಳು
ಸಿ) ಚುನಾವಣಾ ಆಯೋಗದ ಕಾಯಿದೆ
ಡಿ) ರಾಜ್ಯನೀತಿಯ ನಿರ್ದೇಶಕ ತತ್ವಗಳು


ಸರಿಯಾದ ಉತ್ತರ: ಡಿ) ರಾಜ್ಯನೀತಿಯ ನಿರ್ದೇಶಕ ತತ್ವಗಳು

ವಿವರಣೆ : 

ಸಂವಿಧಾನದ ನಾಲ್ಕನೇ ಭಾಗವು ರಾಜ್ಯ ನೀತಿಯ ನಿರ್ದೆಶಕ ತತ್ವಗಳ ಬಗ್ಗೆ ವಿವರಿಸುತ್ತದೆ. ಸಂವಿಧಾನದ 36 ರಿಂದ 51ರವರೆಗಿನ ಅನುಚ್ಛೇದಗಳು ರಾಜ್ಯನೀತಿಯ ನಿರ್ದೇಶಕ ತತ್ವಗಳ ಬಗ್ಗೆ ವಿವರಿಸುತ್ತದೆ. ಸುಖೀ ರಾಜ್ಯದ ಕಲ್ಪನೆಯಲ್ಲಿ ಇವುಗಳನ್ನು ರೂಪಿಸಲಾಗಿದೆ. ಸಂವಿಧಾನದ 40ನೇ ಅನುಚ್ಛೇದವು ಗ್ರಾಮ ಪಂಚಾಯತಿಗಳ ಸ್ಥಾಪನೆ ಅವುಗಳ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸುತ್ತದೆ.9. 1893 ರಲ್ಲಿ “New Lamps for Old”ಎಂಬ ಶೀರ್ಷಿಕೆಯಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುವ ಮೂಲಕ ಸೌಮ್ಯವಾದಿ ರಾಜಕೀಯ ಧೋರಣೆಯನ್ನು ಟೀಕಿಸುತ್ತಿದ್ದ ನಾಯಕ ಯಾರು?
ಎ) ಬಿಪಿನ್ ಚಂದ್ರ ಪಾಲ್
ಬಿ) ಬಾಲ ಗಂಗಾಧರ ತಿಲಕ್
ಸಿ) ಅಶ್ವನಿ ಕುಮಾರ ದತ್
ಡಿ) ಅರಬಿಂದೋ ಘೋಷ್

ಸರಿಯಾದ ಉತ್ತರ: ಡಿ) ಅರಬಿಂದೋ ಘೋಷ್

ವಿವರಣೆ : ಅರಬಿಂದೋ ಘೋಷ್ ಭಾರತದ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ, ಯೋಗಿ, ಗುರು ಹಾಗೂ ಕವಿಯಾಗಿದ್ದವರು.

ಜನನ : ಆಗಸ್ಟ್ 15, 1872, ಕಲ್ಕತ್ತಾದಲ್ಲಿ

ಮರಣ : ಡಿಸೆಂಬರ್ 5, 1950, ಪಾಂಡಿಚೆರಿ ಮೊದಲು ಇವರು ಕೇಂಬ್ರಿಡ್ಜ್‌ನ ಕಿಂಗ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಭಾರತದ ಸಿವಿಲ್ ಸರ್ವಿಸ್‌ನಲ್ಲಿ ಬರೋಡದ ಮಹಾರಾಜರ ಬಳಿ ಅನೇಕ ಕಾರ್ಯಗಳನ್ನು ಮಾಡಿದರು. ನಂತರ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಜೈಲು ಸೇರಿ ಆಧ್ಯಾತ್ಮದತ್ತ ವಾಲಿದರು. ಕೊನೆಗೆ ಪಾಂಡಿಚೆರಿಯಲ್ಲಿ ಆಶ್ರಮ ಸ್ಥಾಪಿಸಿದರು.10.  ಅತ್ಯಂತ ಶಕ್ತಿಯುತವಾದ ರೇಡಿಯೋ ಟೆಲಿಸ್ಕೋಪ್ Gaint Meterwave Radio Telescope (GMRT) ಎಲ್ಲಿದೆ?
ಎ) ತಿರುವನಂತಪುರಂ
ಬಿ) ಪುಣೆಯ ಬಳಿ ನಾರಾಯಣಗಾಂವ್
ಸಿ) ಊಟಿ
ಡಿ) ನೈನಿತಾಲ್

ಸರಿಯಾದ ಉತ್ತರ: ಬಿ) ಪುಣೆಯ ಬಳಿ ನಾರಾಯಣಗಾಂವ್

ವಿವರಣೆ: ಅತ್ಯಂತ ಶಕ್ತಿಯುತವಾದ ರೇಡಿಯೋ ಟೆಲಿಸ್ಕೋಪ್‌ನ್ನು 1995ರಲ್ಲಿ ಪುಣೆಯ ಬಳಿ ನಾರಾಯಣಗಾಂವ್ ಎಂಬಲ್ಲಿ ಸ್ಥಾಪಿಸಲಾಯಿತು. ಇದನ್ನು National centre for Radio astrophysics WOW ಸಂಸ್ಥೆಯು ನಿರ್ವಹಿಸುತ್ತಿದೆ. ಇದು ಸುಮಾರು 45 ಮೀ ನಷ್ಟು, ವ್ಯಾಸ ಹೊಂದಿದೆ. 50 ರಿಂದ 1500 ಮೆಗಾಹರ್ಟ್ಸ್‌ನಷ್ಟು ಆವೃತ್ತಿಯನ್ನು ಹೊಂದಿದೆ. ಇದನ್ನು ನಿರ್ಮಾಣ ಮಾಡಿದಾಗ ಏಷ್ಯಾದ ಅತ್ಯಂತ ದೊಡ್ಡ ಟೆಲಿಸ್ಕೋಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

  

No comments:

Post a Comment

If you have any doubts please let me know

Popular Posts

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Buy Products

Most Useful Notes

Recent Posts

Useful PDF Notes

Important PDF Notes

Ads