KARTET ಕನ್ನಡ ಮಾದರಿ ಪರೀಕ್ಷೆ (ಭಾಷೆ-I): ಅತಿ ಮುಖ್ಯ ಸಿದ್ಧತಾ ಸೂತ್ರ
KARTET-ಕನ್ನಡ ಮಾದರಿ ಪರೀಕ್ಷೆ (Paper-01 and 02)
PART - I : ಕನ್ನಡ
ಸೂಚನೆ : ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು 1 ರಿಂದ 8 ಪ್ರಶ್ನೆಗಳಿಗೆ ಉತ್ತರಿಸಿರಿ.
ಗದ್ಯಭಾಗ – 1 (ಪ್ರಶ್ನೆಗಳು 1–8)
1: ಕನ್ನಡದ ಪ್ರಥಮ ಮಹಾಕಾವ್ಯ ಹೊಂದಿರುವುದು –
(1) ಕನ್ನಡ ನಾಡು-ನುಡಿ ಹಾಗೂ ಆ ಕಾಲಮಾನದ ಜೀವನ ಚಿತ್ರಣ
(2) ಎಲ್ಲಾ ಕನ್ನಡ ಕಾವ್ಯಗಳಿಗೆ ಮೂಲ ಆಕರ
(3) ಭಾಷೆ ಸ್ವರೂಪ ಮತ್ತು ಬಳಸುವ ವಿಧಾನ ತಿಳಿಸುವುದು
(4) ಭಾಷೆಯ ಪ್ರಾವೀಣ್ಯತೆ, ಕವಿಯ ಅನುಭವ ಹಾಗೂ ಆ ಕಾಲಮಾನದ ಜೀವನದ ವಿಧಾನ
2: ಪಂಪನು ತನ್ನ ಕಾವ್ಯಕ್ಕೆ ಮಾದರಿಯಾಗಿ ಪಡೆದುದು -
(1) ಸಂಸ್ಕೃತ ಕಾವ್ಯಗಳನ್ನು ಮಾದರಿಯಾಗಿ ಸ್ವೀಕರಿಸಿದ
(2) ವರ್ತಮಾನದ ಚಿತ್ರಣವನ್ನು ಕಾಲ್ಪನಿಕವಾಗಿ ಪಡೆದು ಕಾವ್ಯ ರಚಿಸಿದ
(3) ವ್ಯಾಸ ಮುನಿಗಳ ಕಥೆಯನ್ನು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದನು
(4) ಬೇರೆಯವರ ಕೃತಿಗಳನ್ನು ಅವಲೋಕಿಸದೆ ಸ್ವಂತ ಕಾವ್ಯ ರಚಿಸಿದ
3: "ಮುನೀಂದ್ರ" ಈ ಪದ
ಹೊಂದಿರುವ ಸಂಧಿ –
(1) ಗುಣಸಂಧಿ
(2) ಸವರ್ಣದೀರ್ಘಸಂಧಿ
(3) ಯಣ್‌ಸಂಧಿ
(4) ಆದೇಶಸಂಧಿ
4: ಪಂಪನು ರಚಿಸಿದ ಕಾವ್ಯವು –
(1) ವ್ಯಾಸರಿಗೆ ಗೌರವ ತರುವುದು ಮತ್ತು ಸಮಸ್ತ ಭಾರತವನ್ನು ಹೇಳುವುದು
(2) ರಾಜ ಮಹಾರಾಜರ ಜೀವನ ಚರಿತ್ರೆಯನ್ನು ತಿಳಿಸುವುದು
(3) ರಾಜಧರ್ಮ ಮತ್ತು ಕರ್ತವ್ಯನಿಷ್ಠೆಯನ್ನು ವಿವರಿಸುವುದು
(4) ಸಮಸ್ತ ಮಹಾಭಾರತವನ್ನು ಸಂಕ್ಷಿಪ್ತವಾಗಿ ಹೇಳುವುದು
5: ಪಂಪನು ಅನ್ವಯಿಸಿಕೊಂಡಿದ್ದು –
(1) ಜೈನ ಮತ್ತು ವೈದಿಕ ಸಂಸ್ಕಾರಗಳ ಸಮನ್ವಯ
(2) ಪ್ರಾಚೀನ ಕವಿಗಳ ಕೃತಿಗಳನ್ನು ಅನುಸರಿಸಿದನು
(3) ಸ್ವ ಸಾಮರ್ಥ್ಯದಿಂದ ಕಾವ್ಯಗಳ ರಚನೆ
(4) ಕಾವ್ಯದಲ್ಲಿ ಹೋಲಿಕೆ ಮತ್ತು ವ್ಯತ್ಯಾಸ
6: ಪಂಪನಲ್ಲಿ ಕಂಡುಬರುವ ಕಾವ್ಯಪ್ರಜ್ಞೆ –
(1) ಲೌಕಿಕ ಮತ್ತು ಆರ್ಥಿಕ
(2) ಅಲೌಕಿಕ ಮತ್ತು ಪ್ರಾಚೀನ
(3) ಸ್ನೇಹನಿಷ್ಠೆ ಮತ್ತು ಗೌರವ
(4) ಲೌಕಿಕ ಮತ್ತು ಆಗಮಿಕ
7: ಪಂಪನು ಉಭಯ ಬದ್ಧತೆಗೆ ಒಳಗಾಗಿದ್ದನು ಎಂದರೆ –
(1) ವ್ಯಕ್ತಿನಿಷ್ಠ ಸ್ವಾತಂತ್ರ್ಯ ಹೊಂದಿದ್ದನು
(2) ಜನಪರ ಮತ್ತು ಸಮಾಜಮುಖಿಯಾಗಿದ್ದನು
(3) ದಾನ ಮತ್ತು ಧರ್ಮನಿಷ್ಠೆ ಹೊಂದಿದ್ದನು
(4) ರಾಜನ ಬಗ್ಗೆ ಸ್ನೇಹನಿಷ್ಠೆ ಮತ್ತು ಧರ್ಮನಿಷ್ಠೆ
8: "ಧರ್ಮದಲ್ಲಿ" ಈ
ಪದದಲ್ಲಿರುವ ವಿಭಕ್ತಿ ಪ್ರತ್ಯಯ –
(1) ತೃತೀಯಾ ವಿಭಕ್ತಿ ಪ್ರತ್ಯಯ
(2) ಸಪ್ತಮೀ ವಿಭಕ್ತಿ ಪ್ರತ್ಯಯ
(3) ದ್ವಿತೀಯಾ ವಿಭಕ್ತಿ ಪ್ರತ್ಯಯ
(4) ಚತುರ್ಥೀ ವಿಭಕ್ತಿ ಪ್ರತ್ಯಯ
ಸೂಚನೆ : ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು 9 ರಿಂದ 15 ಪ್ರಶ್ನೆಗಳಿಗೆ ಉತ್ತರಿಸಿರಿ.
ಇಂದು ನಮ್ಮ ದೇಶದ ಮನಸ್ಸನ್ನು ಕುದಿಸುತ್ತಿರುವ ಸಮಸ್ಯೆಗಳಲ್ಲಿ ಭಾಷಾ ಸಮಸ್ಯೆಯೂ ಒಂದು ಪ್ರಮುಖಸ್ಥಾನ ಪಡೆದಿದೆ. ಪ್ರಾದೇಶಿಕ ದೃಷ್ಟಿಯಿಂದ, ಅಖಿಲ ಭಾರತೀಯ ದೃಷ್ಟಿಯಿಂದ, ಅಂತರರಾಷ್ಟ್ರೀಯ ದೃಷ್ಟಿಯಿಂದ, ಜ್ಞಾನಾರ್ಜನೆಯ ದೃಷ್ಟಿಯಿಂದ, ವಿದ್ಯಾಪ್ರಸಾರದ ದೃಷ್ಟಿಯಿಂದ, ಸಂಸ್ಕೃತಿಯ ದೃಷ್ಟಿಯಿಂದ, ನಾನಾ ದೃಷ್ಟಿಗಳಿಂದ ವಿವಿಧಾಭಿಪ್ರಾಯಗಳು ರಣರಂಗದಲ್ಲಿ ತುಮುಲಯುದ್ಧ ಹೂಡಿದಂತಿದೆ. ಆಯಾ ಪ್ರದೇಶದ ದೇಶಭಾಷೆಗೆ ಅಲ್ಲಲ್ಲಿ ಪ್ರಾಧಾನ್ಯವಿರಬೇಕೆನ್ನುವವರು ಕೆಲವರು; ಅಖಿಲ ಭಾರತೀಯವೆಂದು ಒಪ್ಪಿಕೊಂಡಿರುವ ಸಂಯುಕ್ತಭಾಷೆಗೆ ಪ್ರಥಮ ಸ್ಥಾನವಿರಬೇಕು ಎನ್ನುವವರು ಕೆಲವರು. ಸರ್ವ ವಿದ್ಯಾಶಾಸ್ತ್ರಗಳಿಗೂ ಆಗರವಾಗಿ, ವ್ಯಾವಹಾರಿಕ ದೃಷ್ಟಿಯಿಂದಲೂ ಅಂತರರಾಷ್ಟ್ರೀಯವಾಗಿರುವ ಇಂಗ್ಲಿಷ್ ಭಾಷೆಗೆ ಪ್ರಥಮ ಸ್ಥಾನವಿರಬೇಕೆಂದು ಕೆಲವರು.
ಸ್ವಯಂ ಗಾಂಧೀಜಿಯೆ ಇವುಗಳನ್ನು ಕೂಲಂಕಷವಾಗಿ ಚರ್ಚಿಸಿ, ತಮ್ಮ ನಿರ್ಧಾರಗಳನ್ನು ಸಕಾರಣವಾಗಿ ವಾದಿಸಿ, ನಾಡಿನ ಮುಂದೆ ಇಟ್ಟು ಹೋಗಿದ್ದಾರೆ. ಈ ಸಮಸ್ಯೆ ವಾದ ಪ್ರತಿವಾದದ ಎಲ್ಲೆಯನ್ನು ದಾಟಿ ಇತ್ಯರ್ಥದ ಸೀಮೆಯನ್ನು ಮುಟ್ಟಿದೆ ಎಂದು ಹೇಳಬಹುದು. ಒಟ್ಟಿನಲ್ಲಿ ಈ ಇತ್ಯರ್ಥವನ್ನು ಹೀಗೆ ವಿವರಿಸಬಹುದು. ಆಯಾ ಪ್ರಾಂತಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಪ್ರಥಮಸ್ಥಾನ ಸಲ್ಲಬೇಕು. ಅಂತರ ಪ್ರಾಂತೀಯ ವ್ಯವಹಾರ ದೃಷ್ಟಿಯಿಂದ ಮತ್ತು ಕೇಂದ್ರದ ಆಡಳಿತ ದೃಷ್ಟಿಯಿಂದ ಅಖಿಲ ಭಾರತೀಯವಾದ ಸಂಯುಕ್ತ ಭಾಷೆಗೆ ಎರಡನೇ ಸ್ಥಾನ ಕೊಡಬೇಕು. ಅಂತರರಾಷ್ಟ್ರೀಯವಾದ ಭಾಷೆಗೆ ಅಥವಾ ಭಾಷೆಗಳಿಗೆ ಐಚ್ಛಿಕ ಸ್ಥಾನ ಕೊಡಬೇಕು. ಆಯಾ ಪ್ರಾಂತಗಳಲ್ಲಿ ಆಯಾ ದೇಶಭಾಷೆಗಳು ಆಡಳಿತ ಭಾಷೆಗಳಾಗಿರಬೇಕು.
ಇಂಡಿಯಾಕ್ಕೆ ಇಂಗ್ಲಿಷ್ ಬಂದದ್ದು ಮುಖ್ಯವಾಗಿ ರಾಜಕೀಯ ಕಾರಣಗಳಿಂದಾಗಿ, ಅದನ್ನು ಅಧಿಕಾರಿ ಭಾಷೆಯೆಂದು ಘೋಷಿಸಿ ಕಡ್ಡಾಯವಾಗಿ ಅದನ್ನೆಲ್ಲರೂ ಕಲಿಯಬೇಕೆಂದು ವಿಧಿಸಿದುದೂ ಅದೇ ಕಾರಣಕ್ಕಾಗಿ. ಬಹು ಜನರು ನಮ್ಮ ದೇಶದಲ್ಲಿ ಇಂಗ್ಲಿಷನ್ನು ಕಲಿತುದಕ್ಕೆ ಕಾರಣವೂ ರಾಜಕೀಯವೆ. ಆದರೆ ಈಗ ನಮ್ಮ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಸ್ವತಂತ್ರ ಭಾರತ ಬೇರೊಂದು ಭಾಷೆಯನ್ನು ತನ್ನ ಅಧಿಕಾರಿ ಭಾಷೆಯನ್ನಾಗಿ ಆರಿಸಿದೆ. ಈ ಹೊಸ ಪರಿಸ್ಥಿತಿಯಲ್ಲಿ ಇಂಗ್ಲಿಷಿಗೆ ಸಲ್ಲಬೇಕಾದ ಸ್ಥಾನ ಯಾವುದು? ಇಂಗ್ಲಿಷನ್ನು ಬಿಡುವಂತಿಲ್ಲ; ಆದರೆ ಅದಕ್ಕೆ ಹಿಂದಿದ್ದ ಸ್ಥಾನವನ್ನು ಕೊಡುವಂತೆಯೂ ಇಲ್ಲ.
ಗದ್ಯಭಾಗ –
2 (ಪ್ರಶ್ನೆಗಳು 9–15)
9: ದೇಶದ ಅನೇಕ ಸಮಸ್ಯೆಗಳಲ್ಲಿ ಅತಿ ಮುಖ್ಯವಾಗಿ ಇದು ಸಹ
ಒಂದು –
(1) ದೇಶದ ಪ್ರಗತಿಯಲ್ಲಿ ಹೊಂದಾಣಿಕೆ ಸಮಸ್ಯೆ
(2) ಭಾಷಾಸಮಸ್ಯೆ
(3) ವಿವಿಧ ಜನಾಂಗದವರು ವಾಸಿಸುತ್ತಿರುವುದು
(4) ಏಕತೆಯ ಸಮಸ್ಯೆ
10: ವ್ಯಾವಹಾರಿಕವಾಗಿ ಮತ್ತು ಅಂತರರಾಷ್ಟ್ರೀಯ ದೃಷ್ಟಿಯಿಂದ
ಆದ್ಯತೆ ನೀಡಬೇಕಾಗಿರುವ ಭಾಷೆ –
(1) ಹಿಂದಿ
(2) ಸಂಯುಕ್ತ ಭಾಷೆ
(3) ಕನ್ನಡ
(4) ಇಂಗ್ಲಿಷ್
11: ಭಾಷೆಯ ವಿಚಾರವಾಗಿ ರಾಷ್ಟ್ರನಾಯಕರ ಅಭಿಪ್ರಾಯ –
(1) ಸ್ಪಷ್ಟವಾಗಿ ಚರ್ಚಿಸಿ, ತಮ್ಮ ನಿರ್ಧಾರಗಳನ್ನು ಸಕಾರಣದ
ಸಹಿತ ಜನತೆಗೆ ಬಿಟ್ಟು ಹೋಗಿದ್ದಾರೆ
(2) ಭಾಷೆ ಬಗ್ಗೆ ಅಭಿಮಾನ ಹೊಂದಿರಬೇಕೆಂದು ತಿಳಿಸಿದ್ದಾರೆ
(3) ಜನರು ತಮಗೆ ಇಷ್ಟವಾದ ಭಾಷೆಯನ್ನು ಆಡಬೇಕೆಂಬ ಅಭಿಪ್ರಾಯ ಹೊಂದಿದ್ದರು
(4) ಆಯಾ ಪ್ರಾಂತಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಪ್ರಥಮ ಸ್ಥಾನ
ಸಲ್ಲಬೇಕು
12: ಮೊದಲ ಸ್ಥಾನ ನೀಡಬೇಕಾಗಿರುವ ಭಾಷೆ –
(1) ಪ್ರಾಂತೀಯ ಮತ್ತು ವ್ಯಾವಹಾರಿಕ ಭಾಷೆಗೆ ಪ್ರಥಮ ಆದ್ಯತೆ
(2) ಆಯಾ ಪ್ರಾಂತ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗೆ
(3) ಜನರಿಗೆ ಇಷ್ಟವಾದ ಭಾಷೆ
(4) ಅಂತರರಾಷ್ಟ್ರೀಯ ಮಾನ್ಯತೆ ಹೊಂದಿರುವ ಭಾಷೆ
13: ಇಂಗ್ಲಿಷನ್ನು ಅಧಿಕಾರಯುಕ್ತ ಭಾಷೆ ಎನ್ನಲು ಕಾರಣ –
(1) ಇಂಗ್ಲಿಷ್ ಭಾಷೆ ಮಾತನಾಡಿದರೆ ಸಮಾಜದಲ್ಲಿ ಗೌರವ ಎಂಬ ಭಾವನೆ
(2) ರಾಜಕೀಯವಾಗಿ ಮತ್ತು ಕಡ್ಡಾಯವಾಗಿ ಎಲ್ಲರೂ ಆಂಗ್ಲಭಾಷೆ ಕಲಿಯಲೇಬೇಕು
ಎಂಬ ನಿಯಮ ಜಾರಿಗೆ ತರಲಾಯಿತು
(3) ಸುಲಭವಾಗಿ ಮತ್ತು ಸರಳವಾಗಿ ಕಲಿಯಲು ಅವಕಾಶ ನೀಡಲಾಯಿತು
(4) ಎಲ್ಲಾ ಜನರು ಇಷ್ಟಪಟ್ಟು ಕಲಿಯಲಿ ಎಂಬ ಆಲೋಚನೆ
14: "ಭಾಷೆಯನ್ನು" ಈ ಪದ ಹೊಂದಿರುವ ಸಂಧಿ –
(1) ಆಗಮ ಸಂಧಿ
(2) ಸವರ್ಣದೀರ್ಘ ಸಂಧಿ
(3) ಗುಣ ಸಂಧಿ
(4) ಲೋಪ ಸಂಧಿ
15: "ದೃಷ್ಟಿಗೆ" ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ –
(1) ಪ್ರಥಮಾ ವಿಭಕ್ತಿ ಪ್ರತ್ಯಯ
(2) ತೃತೀಯಾ ವಿಭಕ್ತಿ ಪ್ರತ್ಯಯ
(3) ಚತುರ್ಥೀ ವಿಭಕ್ತಿ ಪ್ರತ್ಯಯ
(4) ಸಪ್ತಮೀ ವಿಭಕ್ತಿ ಪ್ರತ್ಯಯ
ಸಾಮಾನ್ಯ ಕನ್ನಡ ಮತ್ತು ಬೋಧನಾ ಪ್ರಶ್ನೆಗಳು (ಪ್ರಶ್ನೆಗಳು 16–30)
16: "ಸಮಾಜದ ಸಂಪರ್ಕಕ್ಕಾಗಿ ಇರುವ ಯಾದೃಚ್ಛಿಕ ಮೌಖಿಕ ಧ್ವನಿ ಸಂಕೇತಗಳ ವ್ಯವಸ್ಥೆಯೇ ಭಾಷೆ"
ಎಂದು ಹೇಳಿದವರು –
(1) ಡಿ. ಸಸೂರ
(2) ಬ್ಲಾಕ್ ಮತ್ತು ಟ್ರೇಗರ್
(3) ವೆನ್ರಿಜ್
(4) ಸಫೀರ್
17: ಮಕ್ಕಳ ಭಾಷಾ ಕಲಿಕೆಯ ಮೂಲ ಕೌಶಲ –
(1) ಆಲಿಸುವಿಕೆ
(2) ಓದುಗಾರಿಕೆ
(3) ಬರೆಯುವಿಕೆ
(4) ಮಾತು
18: ಬಾಯ್ದೆರೆ ವಾಚನದಲ್ಲಿ ಪಾಲಿಸಬೇಕಾದ ಅತಿ ಮುಖ್ಯ ಅಂಶ –
(1) ಪಠ್ಯ ವಿಷಯವನ್ನು ವೇಗವಾಗಿ ಮತ್ತು ನಿರರ್ಗಳವಾಗಿ ಓದುವುದು
(2) ಪುಸ್ತಕವನ್ನು ನೇರವಾಗಿ ಹಿಡಿದು ವಾಚಿಸುವುದು
(3) ವಾಕ್ಯ ಮತ್ತು ವೃಂದದಲ್ಲಿ ನಿಲುಗಡೆ ಸ್ಥಳಗಳನ್ನು ಅನುಸರಿಸಿ ಓದುವುದು
(4) ಸ್ಪಷ್ಟ ಉಚ್ಚಾರ ಮತ್ತು ಧ್ವನಿ ಏರಿಳಿತಗಳನ್ನು ಅಳವಡಿಸಿಕೊಂಡು
ಓದುವುದು
19: "ಕೆಂಗದಿರ" ಪದದ ಅರ್ಥ –
(1) ಚಂದ್ರ
(2) ಸೂರ್ಯ
(3) ಆಕಾಶ
(4) ನಕ್ಷತ್ರಗಳು
20: ಭಾಷಾ ಬೋಧಕನಿಗೆ ಅವಶ್ಯವಿರುವ ಸಾಮರ್ಥ್ಯಗಳಲ್ಲಿ
ಮುಖ್ಯವಾಗಿ ಇದು ಸಹ ಒಂದು –
(1) ಉತ್ತಮ ಮಾತುಗಾರಿಕೆ ಮತ್ತು ಹಾಡುಗಾರಿಕೆ ಹೊಂದಿರಬೇಕು
(2) ಭಾಷಾ ಪ್ರೇಮಿಯಾಗಿದ್ದು, ವಿಮರ್ಶಾತ್ಮಕ ಚಿಂತನೆಯ
ಗುಣವಿರಬೇಕು
(3) ಹಾಸ್ಯ ಪ್ರವೃತ್ತಿಯುಳ್ಳವನಾಗಿದ್ದು, ವಿಶಾಲದೃಷ್ಟಿಕೋನ
ಹೊಂದಿರಬೇಕು
(4) ಸ್ಪಷ್ಟ ಉಚ್ಚಾರ, ಧ್ವನಿ ಏರಿಳಿತ, ಹಾವಭಾವ
ಹಾಗೂ ಹಾಸ್ಯ ಪ್ರವೃತ್ತಿ ಹೊಂದಿರಬೇಕು
21: "ಅಶೋಕನು ತನ್ನ ಶಿಲಾಶಾಸನಗಳಲ್ಲಿ ಮತ ದ್ವೇಷವು ಮಹಾಪಾಪವೆಂದು ಅನ್ಯಮತದವರ ವಿಷಯದಲ್ಲಿ
ಸಹನೆಯಿಂದ ಇರಬೇಕೆಂದು ಬೋಧಿಸಿದ್ದಾನೆ" –
ಇದು ಕೆಳಗಿನ ಯಾವ ವಾಕ್ಯಕ್ಕೆ ಉದಾಹರಣೆ?
(1) ಸಾಮಾನ್ಯ ವಾಕ್ಯ
(2) ಸಂಯೋಜಕ ವಾಕ್ಯ
(3) ಮಿಶ್ರವಾಕ್ಯ
(4) ವಾಕ್ಯ ಪರಿವರ್ತನೆ
22: ಮಾತುಗಾರಿಕೆ ಕಲಿಸುವ ಸಂದರ್ಭಗಳಲ್ಲಿ ಹೆಚ್ಚು ಒತ್ತು
ನೀಡಬೇಕಾಗಿರುವುದು –
(1) ಸಹಜವಾಗಿ ಮಾತನಾಡುವುದು
(2) ಸ್ಪಷ್ಟ ಉಚ್ಚಾರ ಮತ್ತು ಧ್ವನಿ ಏರಿಳಿತವಿರಬೇಕು
(3) ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು
(4) ಸೃಜನಶೀಲ ಮತ್ತು ತರ್ಕಬದ್ಧ ನಿರೂಪಣೆ
23: "ಮಾಡಿರಲಿ", "ಆಡಿರಲಿ" ಎಂಬ ತತ್ವವನ್ನು ಆಧರಿಸಿದ ಬೋಧನಾ
ಪದ್ಧತಿ –
(1) ಕ್ರೀಡಾ ಪದ್ಧತಿ
(2) ಉಪನ್ಯಾಸ ಪದ್ಧತಿ
(3) ಪಠ್ಯಪುಸ್ತಕ ಪದ್ಧತಿ
(4) ನಾಟಕೀಕರಣ ಪದ್ಧತಿ
24: ಆಲಿಸುವಿಕೆಯಲ್ಲಿ ಕಂಡುಬರುವ ವ್ಯಕ್ತಿನಿಷ್ಠ ದೋಷ –
(1) ವಿಷಯಗಳನ್ನು ಊಹಿಸುತ್ತಾ ಆಲಿಸುವುದು
(2) ಶಬ್ದಮಾಲಿನ್ಯ ಸಂದರ್ಭದಲ್ಲಿಯೂ ಆಲಿಸುವುದು
(3) ಆಲಿಸುವ ಮುಖ್ಯಾಂಶಗಳ ಟಿಪ್ಪಣಿ ಮಾಡಿಕೊಳ್ಳುವುದು
(4) ಪೂರ್ವಾಗ್ರಹ ಮನಸ್ಥಿತಿಯಿಂದ ಆಲಿಸುವುದು
25: ವಿದ್ಯಾರ್ಥಿಗಳ ಮಾತುಗಾರಿಕೆಯಲ್ಲಿ ಸಾಮಾನ್ಯವಾಗಿ
ಕಂಡುಬರುವ ದೋಷ –
(1) ಉಚ್ಚಾರಣೆ ದೋಷ
(2) ಉಗ್ಗುವಿಕೆ ಮತ್ತು ತೊದಲು ಮಾತು
(3) ನಿರರ್ಗಳ ಮಾತು
(4) ಧ್ವನ್ಯಾಂಗಗಳಿಗೆ ಸಂಬಂಧಿಸಿದ ದೋಷಗಳು
26: ಅಕ್ಷರಗಳು ಮತ್ತು ಪದಗಳ ರೇಖಾ ವಿನ್ಯಾಸಗಳನ್ನು
ಗುರುತಿಸುವ ಕೌಶಲ –
(1) ಧ್ವನಿ ಕೌಶಲ
(2) ಮಾನಸಿಕ ಕೌಶಲ
(3) ಶ್ರವಣ ಕೌಶಲ
(4) ಚಾಕ್ಷುಷ ಕೌಶಲ
27: ಪರಿಹಾರ ಬೋಧನೆಯ ಸೂಕ್ತ ಅರ್ಥ –
(1) ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಕೈಗೊಳ್ಳುವ ಬೋಧನೆ
(2) ತರಗತಿಯ ಎಲ್ಲಾ ಮಕ್ಕಳಿಗೆ ಕೈಗೊಳ್ಳುವ ಸ್ಕೂಲರೂಪದ ಬೋಧನೆ
(3) ಕಲಿಕೆಯನ್ನು ಸ್ಥಿರಗೊಳಿಸಲು ಕೈಗೊಳ್ಳುವ ಪುನರ್‌ಬೋಧನೆ
(4) ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಪುನರ್‌ಬೋಧಿಸುವುದು
28: ಮಾತೃಭಾಷಾ ಬೋಧನಾ ಪದ್ಧತಿಯಲ್ಲಿ "ಮೂರ್ತದಿಂದ
ಅಮೂರ್ತದ ಕಡೆಗೆ ಮತ್ತು ನಿರ್ದಿಷ್ಟದಿಂದ ಸಾಮಾನ್ಯದ ಕಡೆಗೆ" ಸಾಗುವ ಪದ್ಧತಿ –
(1) ನಿಗಮನ ಪದ್ಧತಿ
(2) ಅನುಗಮನ ಪದ್ಧತಿ
(3) ಪಠ್ಯಪುಸ್ತಕ ಪದ್ಧತಿ
(4) ಸಮಗ್ರ ಪದ್ಧತಿ
29: ಭಾಷಾ ಕಲಿಕೆಯ ಪ್ರಾರಂಭ ಮತ್ತು ಅದು ಬಲಗೊಳ್ಳುವುದು
ಭಾಷಾ ಬೋಧನೆಯ ಈ ತತ್ವಗಳಿಂದ –
(1) ಸಿದ್ಧತಾತತ್ವ, ಅನುಕರಣತತ್ವ
(2) ಅನುಕರಣತತ್ವ, ಅಭ್ಯಾಸತತ್ವ
(3) ಪುನರ್ಬಲನತತ್ವ, ಅನುಕರಣತತ್ವ
(4) ಸಿದ್ಧತಾತತ್ವ, ಅಭ್ಯಾಸತತ್ವ
30: ರೂಪಣಾತ್ಮಕ ಮೌಲ್ಯಮಾಪನವೆಂದರೆ –
(1) ಮಗುವಿನಲ್ಲಿ ಕಲಿಕಾ ವಾತಾವರಣವನ್ನು ಸೃಷ್ಟಿಸಿ, ಹಂತ
ಹಂತವಾಗಿ ಪರೀಕ್ಷೆಗೊಳಪಡಿಸುವುದು
(2) ವಿದ್ಯಾರ್ಥಿಗಳ ಕಲಿಕಾ ಆಸಕ್ತಿ, ಅಭಿರುಚಿಗಳನ್ನು ಮಾಪನ
ಮಾಡುವುದು
(3) ಮಗುವಿನ ಪಠ್ಯ, ಸಹಪಠ್ಯ ಮತ್ತು ಸಹಜ
ವರ್ತನೆಗಳನ್ನು ನಿರಂತರ ಹಾಗೂ ವಿವಿಧ ಆಯಾಮಗಳಲ್ಲಿ ಅರ್ಥೈಸುವುದು
(4) ವಿದ್ಯಾರ್ಥಿಗಳಿಗೆ ನಿರಂತರ ಪರೀಕ್ಷೆಗಳನ್ನು ನಡೆಸಿ ಕಲಿಕೆಗೆ
ಪ್ರೋತ್ಸಾಹಿಸುವುದು
🏆 KARTET-2019 ಕನ್ನಡ ಮಾದರಿ ರಸಪ್ರಶ್ನೆ (ಸಂಪೂರ್ಣ 30 ಪ್ರಶ್ನೆಗಳು)
ಮಾಹಿತಿ ಮೂಲ ಮತ್ತು ಅಭಿವೃದ್ಧಿ: www.edutubekannada.com
%20%E0%B2%85%E0%B2%A4%E0%B2%BF%20%E0%B2%AE%E0%B3%81%E0%B2%96%E0%B3%8D%E0%B2%AF%20%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%A4%E0%B2%BE%20%E0%B2%B8%E0%B3%82%E0%B2%A4%E0%B3%8D%E0%B2%B0.webp)
No comments:
Post a Comment
If you have any doubts please let me know