ಕೆನರಾ ಬ್ಯಾಂಕ್ ನಲ್ಲಿ 220 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು
ದೇಶದ ಪ್ರಮುಖ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕಿನಲ್ಲಿ 220 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 2020 ರ ಡಿಸೆಂಬರ್ 15 ರ ವರೆಗೆ ಅವಧಿ ನೀಡಲಾಗಿದೆ. ಸದರಿ ಉದ್ಯೋಗದ ಕುರಿತಾದ ಸಮಗ್ರ ಮಾಹಿತಿಯನ್ನು EduTube Kannada ನಿಮಗಾಗಿ ನೀಡುತ್ತಿದೆ.
💥 ಒಟ್ಟು ಹುದ್ದೆಗಳು : ಸ್ಪೆಷಲಿಸ್ಟ್ ಆಫೀಸರ್ ಒಟ್ಟು 220 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
💥ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ನಿರ್ದಿಷ್ಟ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ/ ಬಿಇ, ಬಿಟೆಕ್, ಬಿಎಸ್ಸಿ, ಎಂಎಸ್ಸಿ ಪದವಿಯನ್ನು ಪಡೆದಿರಬೇಕು. ವಿವಿಧ ಹುದ್ದೆಗಳಿಗೆ ನಿಗದಿಪಡಿಸಿದ ನಿರ್ದಿಷ್ಟ ವಿದ್ಯಾರ್ಹತೆಯ ಕುರಿತಾದ ಮಾಹಿತಿ ತಿಳಿಯಲು ಕೆಳಗಡೆ ನೀಡಿರುವ ಅಧಿಕೃತ ಜಾಲತಾಣದ ವಿಳಾಸದ ಮೇಲೆ ಕ್ಲಿಕ್ ಮಾಡಿ...!!
💥ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 20 ಹಾಗೂ ಗರಿಷ್ಠ 38 ರ ವಯೋಮಿತಿಯನ್ನು ಮೀರಿರಬಾರದು. ಕೆಲವೊಂದು ಹುದ್ದೆಗಳಿಗೆ 30, 35 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಈ ಬಗ್ಗೆ ಅಧಿಕೃತ ನೋಟಿಫಿಕೇಶನ್‌ನಲ್ಲಿ ಸಂಪೂರ್ಣವಾಗಿ ಓದಿ ತಿಳಿಯಬಹುದು.
💥ವಯೋಮಿತಿ ಸಡಿಲಿಕೆ : ಸರಕಾರದ ನಿಯಮಗಳನ್ವಯ SC/ST/OBC/PWD/PH ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆಯನ್ನು ಪಡೆದುಕೊಳ್ಳುತ್ತಾರೆ.
💥ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600 ಹಾಗೂ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100 ಶುಲ್ಕವನ್ನು ನಿಗದಿಪಡಿಸಿದ್ದಾರೆ.
ಅರ್ಜಿ ಶುಲ್ಕವನ್ನು ಡಿಮಂಡ್‌ಡ್ರ್ಯಾಫ್ಟ್ / ಚೆಕ್ / ಮನಿ ಆರ್ಡರ್ / ಪೋಸ್ಟಲ್ ಆರ್ಡರ್ ಮೂಲಕವೂ ಪಾವತಿಸಬಹುದು.
💥 ವೇತನ ಶ್ರೇಣಿ : 42020/- ₹ ದಿಂದ 51490/-₹
💥 ಆಯ್ಕೆ ವಿಧಾನ : 200 ಅಂಕಗಳಿಗೆ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ.
💥 ವಿಶೇಷ ಸೂಚನೆ : ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕ ಇರುತ್ತದೆ.
💥 ಪರೀಕ್ಷಾ ಕೇಂದ್ರ : ಬೆಂಗಳೂರು ಮಾತ್ರ
💥 ಉದ್ಯೋಗ ಎಲ್ಲಿ : ಇಡೀ ಭಾರತದಾದ್ಯಂತ
💥 ಅರ್ಜಿ ಸಲ್ಲಿಸುವುದು ಹೇಗೆ : ಆನ್ಲೈನ್ ಮೂಲಕ
💢 ಪ್ರಮುಖ ದಿನಾಂಕಗಳು 💢
💥ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 25 ನವೆಂಬರ್ 2020
💥ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಡಿಸೆಂಬರ್ 2020
ಕೆನರಾ ಬ್ಯಾಂಕ್ ನ ಅಧಿಕೃತ ವೆಬ್‌ಸೈಟ್ : https://www.canarabank.com/
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ
💥 ನಮ್ಮ ಎಲ್ಲಾ Social Media links 💥
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ...
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know