ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಡ್ರ್ಯಾಗನ್ ಗೆ ಶಾಕ್ : ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; 43 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ!.

ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; 43 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ..!



ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಭದ್ರತೆಯ ಕಾರಣ ನೀಡಿ, ಕೇಂದ್ರ ಸರ್ಕಾರ ಮತ್ತೆ 43 ಮೊಬೈಲ್ ಆ್ಯಪ್ಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಬಹುತೇಕ ಮೊಬೈಲ್ ಆ್ಯಪ್ಗಳು ಚೀನಾ ಮೂಲದ್ದಾಗಿದ್ದು, ಇವುಗಳ ಪೈಕಿ 4 ಚೀನಾದ ದೈತ್ಯ ಅಲಿಬಾಬಾ ಕಂಪನಿಯ ಒಡೆತನದ ಮೊಬೈಲ್ ಆ್ಯಪ್ಗಳೂ ಸೇರಿವೆ.


ಇತ್ತೀಚೆಗೆ ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್ ನಿಷೇಧಿಸೋ ಮೂಲಕ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಆಲಿಬಾಬ್ ಮ್ಯಾಂಗೋ ಟಿವಿ ಸೇರಿದಂತೆ 43 ಮೊಬೈಲ್ ಆ್ಯಪ್ ಭಾರತದಲ್ಲಿ ನಿಷೇಧಿಸಲಾಗಿದೆ.


ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್; 43 ಚೀನಾ ಆ್ಯಪ್ ಬ್ಯಾನ್ ಮಾಡಿದ ಭಾರತ!.


ಕೇಂದ್ರ ಸರ್ಕಾರ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ಮುಂದುವರಿಸಿದೆ. ಜೂನ್ ತಿಂಗಳಲ್ಲಿ ಚೀನಾದ 59 ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ ಇದೀಗ 43 ಮೊಬೈಲ್ ಆ್ಯಪ್ ಬ್ಯಾನ್ ಮಾಡಿದೆ.  ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆ ಧಕ್ಕೆ ತರುವ ಕಾರಣದಿಂದ ಚೀನಾ ಮೂಲಕ 43 ಮೊಬೈಲ್ ಆ್ಯಪ್ ಬ್ಯಾನ್ ಮಾಡಲಾಗಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸ್ಪಷ್ಟಪಡಿಸಿದೆ.



ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ. ಭಾರತದ ರಕ್ಷಣೆ, ರಾಜ್ಯದ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾಗುತ್ತಿರುವ ಆ್ಯಪ್ ಬ್ಯಾನ್ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.



ಆಲಿಬಾಬ, ಮ್ಯಾಂಗೋ ಟಿವಿ, ವಿ ಟಿವಿ, ವಿ ವರ್ಕ್ ಫಾರ್ ಚೀನಾ, ಆಲಿ ಎಕ್ಸ್ಪ್ರೆಸ್, ಸ್ನಾಕ್ ವಿಡಿಯೋ, ಕ್ಯಾಮ್ ಕಾರ್ಡ್, ವಿ ಡೇಟ್, ಡಿಂಗ್ ಟಾಕ್, ಹ್ಯಾಪಿ ಫಿಶ್ ಸೇರಿದಂತೆ ಚೀನಾದ 43 ಆ್ಯಪ್ ಬ್ಯಾನ್ ಮಾಡಲಾಗಿದೆ.  


ಜೂನ್ 29 ರಂದು ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್ ಬ್ಯಾನ್ ಮಾಡಿತ್ತು. ಟಿಕ್ಟಾಕ್, ಯುಸಿ ಬ್ರೌಸರ್, ವಿ ಚಾಟ್, ಕ್ಯಾಮ್ ಸ್ಕಾನರ್ ಸೇರಿದಂತೆ ಪ್ರಮುಖ ಆ್ಯಪ್ಗಳು ಬ್ಯಾನ್ ಆಗಿತ್ತು. ಇನ್ನು ಸೆಪ್ಟೆಂಬರ್ 2 ರಂದು 118 ಆ್ಯಪ್ ಬ್ಯಾನ್ ಮಾಡಿತ್ತು. ಈ ಮೂಲಕ ಹಂತ ಹಂತವಾಗಿ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ನಡೆಸಿತ್ತು. ಇದೀಗ ಮತ್ತೆ ಚೀನಾ ಮೇಲೆ ಕೇಂದ್ರ ಸರ್ಕಾರ ಡಿಜಿಟಲ್ ಸ್ಟ್ರೈಕ್ ನಡೆಸಿದೆ.


ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಭದ್ರತೆಯ ಕಾರಣ ನೀಡಿ, ಕೇಂದ್ರ ಸರ್ಕಾರ ಮತ್ತೆ 43 ಮೊಬೈಲ್ ಆ್ಯಪ್ಗಳ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಿದೆ.



ಬಹುತೇಕ ಮೊಬೈಲ್ ಆ್ಯಪ್ಗಳು ಚೀನಾ ಮೂಲದ್ದಾಗಿದ್ದು, ಇವುಗಳ ಪೈಕಿ 4 ಚೀನಾದ ದೈತ್ಯ ಅಲಿಬಾಬಾ ಕಂಪನಿಯ ಒಡೆತನದ ಮೊಬೈಲ್ ಆ್ಯಪ್ಗಳೂ ಸೇರಿವೆ.


ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

:: ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ






Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area