ಕೆಪಿಎಸ್‍ಸಿ ಪರಿಷ್ಕøತ ವೇಳಾಪಟ್ಟಿ ಪ್ರಕಟ
ಸ್ನೇಹಿತರೇ ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕøತ ವೇಳಾಪಟ್ಟಿ ಪ್ರಕಟಗೊಂಡಿದೆ. ಸದರಿ ವೇಳಾಪಟ್ಟಿಯನ್ನು ರಾಜ್ಯ ಲೋಕಸೇವಾ ಆಯೋಗದ ಅಧಿಕೃತ ವೆಬ್‍ಸೈಟ್‍ನಲ್ಲಿಯೂ ಪ್ರಕಟಿಸಲಾಗಿದೆ.
ಕೆಪಿಎಸ್‍ಸಿ ಈಗಾಗಲೇ ದಿನಾಂಕ 02 ಮತ್ತು 05 ನೇ ಜನೆವರಿ 2021 ರಂದು ನಡೆಸಲು ತೀರ್ಮಾನಿಸಲಾಗಿದ್ದ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆ ( ಕೆಎಎಸ್ ಮೇನ್ಸ್) ಯನ್ನು ಅಧಿಕೃತವಾಗಿ ಮುಂದೂಡಿ ಪರಿಷ್ಕøತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಧಿಕೃತ ಪರಿಷ್ಕøತ ವೇಳಾಪಟ್ಟಿಯ ಪ್ರಕಾರ ಕೆಎಎಸ್ ಮೇನ್ಸ್ ಪರೀಕ್ಷೆಯನ್ನು ದಿನಾಂಕ :13-02-2021 ರಿಂದ 16-02-2021 ರವರೆಗೆ ನಡೆಸಲು ತೀರ್ಮಾನಿಸಿದೆ.
ಇನ್ನು ಪ್ರಥಮ ದರ್ಜೆ ಸಹಾಯಕ (ಎಫ್‍ಡಿಎ) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯು ದಿನಾಂಕ:24-01-2021 ರಂದು ಭಾನುವಾರ ನಡೆಯಲಿದೆ.
ಹಾಗೆಯೇ ದ್ವಿತೀಯ/ಕಿರಿಯ ದರ್ಜೆ ಸಹಾಯಕರು (ಎಸ್‍ಡಿಎ) ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯು ದಿನಾಂಕ: 21-03-2021 ರಂದು ಭಾನುವಾರ ನಡೆಯಲಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯ ಮುಖ್ಯ ಪರೀಕ್ಷೆಯು ದಿನಾಂಕ:27-01-2020 ರಿಂದ 30-01-2021 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಸಹಾಯಕ ನಿಯಂತ್ರಕರ ಹುದ್ದೆಯ ಮುಖ್ಯ ಪರೀಕ್ಷೆಯು ದಿನಾಂಕ:21-12-2020 ರಿಂದ 24-12-2020 ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
For More Details See This Official Revised Timetable Here
No comments:
Post a Comment
If you have any doubts please let me know