Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Thursday 19 November 2020

ಭಾರತದ ಇತಿಹಾಸ : ಸಂಗಮ ಯುಗ, ಚೋಳರು, ಪಾಂಡ್ಯರು, ಚೇರರ ಇತಿಹಾಸ

ಸಂಗಂ ಯುಗ





ಪ್ರಿಯ ಮಿತ್ರರೇ ಮುಂಬರುವ ಎಫ್ಡಿಎ ಹಾಗೂ ಎಸ್ಡಿಎ ಹಾಗೂ ಇನ್ನಿತರೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಸಂಗಂ ಯುಗ ಎಂಬ ಇತಿಹಾಸದ ಅಧ್ಯಾಯವನ್ನು ತಿಳಿದುಕೊಳ್ಳೋಣ.. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ಸಹ ಈ ಬಗ್ಗೆ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಅದಕ್ಕೆಂದೇ ಎಜ್ಯುಟ್ಯೂಬ್ ಕನ್ನಡ ಟೀಮ್ ಇವತ್ತು ಇತಿಹಾಸಕ್ಕೆ ಸಂಬಂಧಿಸಿದ ಒಂದು ಮಹತ್ವದ ಅಧ್ಯಾಯದೊಂದಿಗೆ ನಿಮ್ಮೊಡನೆ ಬಂದಿದೆ. ಸ್ನೇಹಿತರೇ ಈ ಅಧ್ಯಾಯವು ನಿಮ್ಮ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲಬಲ್ಲುದು. ಆದ್ದರಿಂದ ಈ ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ಈ ಲೇಖನವನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳುವುದಕ್ಕೆ ಮರೆಯಬೇಡಿ.

1.“ ಸಂಗಂ “ ಎಂಬ ಪದದ ಅರ್ಥ “ ಒಟ್ಟು ಗೂಡುವುದು “ ಅಥವಾ “ ಸಂಘಟನೆ “
2. ಸಂಗಂ ಎಂಬುದು ಭೌದ್ಧರ “ ಸಂಘ “ ಎಂಬ ಪದದಿಂದ ಬಂದಿದೆ .
3. ಸಂಗಂ ಗಳು ಪಾಂಡ್ಯ ರಾಜಧಾನಿಯಾದ ವೇಗೈ ನದಿಯ ದಡದ ಮೇಲಿರು ಮಧುರೇಯಲ್ಲಿ ರಾಜಾಶ್ರಯ ಪಡೆದಿತ್ತು .
4. ತಮಿಳು ಸಂಪ್ರಾದಾಯದಂತೆ ಮೂರು ಸಂಘಗಳಿದ್ದವು .
5. ಈ ಸಂಘ ಕ್ರಿ.ಶ. ಆರಂಭದ ಕಾಲದಲ್ಲಿತ್ತು .
6. ಸಂಗಂ ಸಾಹಿತ್ಯ - ತಮಿಳುನಾಡಿನ ಪ್ರಾಚೀನ ಇತಿಹಾಸದ ಮೂಲ ಆಧಾರವಾಗಿದೆ .
7. ಈ ಕಾಲದ ಪ್ರಸಿದ್ಧ ಕೃತಿಗಳು - “ ಪತ್ ಪಾಟ್ಟ್ “ ಹಾಗೂ “ ಎಟ್ಟುತ್ತೊಗೈ “
8. ಈ ಕಾಲದ ಮಹತ್ವದ ವ್ಯಾಕರಣ ಗ್ರಂಥ - “ ತೋಳ್ ಕಾಪ್ಫಿಯಂ “
9. ದಕ್ಷಿಣ ಬಾರತದ ಚರಿತ್ರೆಯು - ಪಾಂಡ್ಯರು , ಚೇರ ಹಾಗೂ ಚೋಳ ರೆಂಬ ಮೂರು ತಮಿಳು ರಾಜ ವಂಶಗಳಿಂದ ಪ್ರಾರಂಭವಾಗುತ್ತದೆ .
10. ದಕ್ಷಿಣ ಬಾರತದ ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನ ಭಾಷೆ “ ತಮಿಳು “ ಈ ರಾಜಮನೆತನದ ಭಾಷೆಯಾಗಿತ್ತು .
11. ತಮಿಳು ಭಾಷೆಯ ಪಿತಾಮಹಾ - “ ಅಗಸ್ತ್ಯ “ .
12. ತಮಿಳು ಭಾಷೆಯ ಪ್ರಥಮ ವೈಯಾಕರಣಿ - “ ಅಗಸ್ತ್ಯ “
13. ಅಗಸ್ತ್ಯ ಈ ಪ್ರದೇಶದಲ್ಲಿ ನೆಲೆಸಿದ್ದ - ಉತ್ತರದಿಂದ ಬಂದು ದಕ್ಷಿಣದ “ ಪೋಟಿಯಲ್ “ ಎಂಬಲ್ಲಿ ನೆಲೆಸಿದ್ದ .
14 ತಮಿಳು ಭಾಷೆಯ ಪ್ರಾರಂಭದ ಕಾಲವನ್ನು - “ ಸಂಗಂ ಯುಗ “ ಎಂದು ಕರೆಯಲಾಗಿದೆ .
15 ದಕ್ಷಿಣ ಭಾರತದ ತಮಿಳ್ ಗಮ್ ಅಥವಾ ತಮಿಳ್ ಹಮ್ ನ ಮಧುರೆಯಲ್ಲಿ ಸೇರಿ ಸಾಹಿತ್ಯದ ಸುತ್ತ ಹೆಣೆದ ಕವಿ ಕವಿ ಕೂಟವೆ - “ ಸಂಗಂ “
16. ಸಂಗಂ - ಎಂದರೆ ಮಧುರೆಯಲ್ಲಿದ್ದ ಒಂದು ಸಾಹಿತ್ಯ ಒಕ್ಕೂಟ ಅಥವಾ ದಾರ್ಶನಿಕ ಸಂಸ್ಥೆ ಎಂದರ್ಥ .

ರಾಜಕೀಯ ಇತಿಹಾಸ

( ಪಾಂಡ್ಯರು )





  • ತಮಿಳು ಸಂಗಂ ಅರಸರಲ್ಲಿ - ಚೋಳ , ಚೇರ ಹಾಗೂ ಪಾಂಡ್ಯ ಅರಸರು ಪ್ರಮುಖರು
  • ಪಾಂಡ್ಯರ ರಾಜಧಾನಿಗಳು - ತೀನ್ ಮಧುರೆ , ಕಾಪಟಾಪುರ ನಂತರ ಮಧುರೈ
  • ಪಾಂಡ್ಯರ ಲಾಂಛನ - ಮೀನು
  • ಪಾಂಡ್ಯ ಅರಸರು ರೋಮ್ ಚಕ್ರವರ್ತಿ - ಅಗಸ್ಟಸ್ ನ ಆಸ್ಥಾನಕ್ಕೆ ರಾಯಭಾರಿಗಳನ್ನು ಕಳುಹಿಸಿದ್ಧರು .
  • ಪಾಂಡ್ಯ ಅರಸರ ಪ್ರಸಿದ್ಧ ಅರಸ - ನೆಡುಂ ಚೆಳಿಯನ್ .
  • ನೆಡುಂ ಚೆಳಿಯನ್ 5 ಪಾಳೆಗಾರರನ್ನು ವಿರೋಧಿ ಒಕ್ಕೂಟವನ್ನು ಸೋಲಿಸಿದ ಸ್ಥಳ - “ ತಲೈ ಯಾಲುಗಾನಂ “ .
  • “ ತಲೈ ಯಾಲಂಗಾನ ಯುದ್ಧದ ವಿಜೇತ “ ಎಂಬ ಬಿರುದುಳ್ಳ ಅರಸನ ಹೆಸರು “ ನೆಡುಂ ಚೆಳಿಯನ್ “
  • ಮಾಗುಂಡಿ ಮರುವನ್ ಮತ್ತು ನಕ್ಕಿರರ್ ಕವಿಗಳ ಆಶ್ರಯದಾತ - ನೆಡುಂ ಚೆಳಿಯನ್ .
  • ಪಾಂಡ್ಯರ ಕೊನೆಯ ಅರಸ - ಪೆರವ ಲೂಟಿ

ಚೇರರು


  • ಚೇರ ಮನೆತನದ ಈ ರಾಜ್ಯಗಳನ್ನು ಒಳಗೊಂಡಿತ್ತು - “ ಕೇರಳ ಮತ್ತು ತಮಿಳು ನಾಡು “
  • ಚೇರರ ರಾಜಧಾನಿ - “ ತಿರುವಂಜಿ ಪಟ್ಟಣ”
  • ಚೇರರ ರಾಜ್ಯಾ ಲಾಂಛನ - “ ಧನಸ್ಸು “
  • ಚೇರರ ಮೊದಲ ದೊರೆ - “ ಉದಿಯೆಂಜರಲ್ “
  • ಚೇರರ ಪ್ರಸಿದ್ಧ ದೊರೆ - “ ಸೆಂಗುತ್ತವನ್ ಚೇರ “

ಚೋಳರು




  • ಚೋಳರ ರಾಜ್ಯವು - ಪಾಂಡ್ಯ ರಾಜ್ಯದ ಈಶಾನ್ಯಕ್ಕೆ ಪೆನ್ನಾರ್ ಮತ್ತು ವೇಾರ್ ನದಿಗಳ ನಡುವೆ ಇತ್ತು .
  • ಚೋಳರ ಪ್ರಮುಖ ರಾಜಕೀಯ ಕೇಂದ್ರ - “ ಉರೆಯೂರ್ “
  • ಚೋಳರ ರಾಜಧಾನಿ - “ ಪುಹಾರ್ ಅಥಾವ ಕಾವೇರಿ ಪಟ್ಟಣ “
  • ಚೋಳರ ರಾಜ್ಯ ಲಾಂಛನ - “ ವ್ಯಾಘ್ರ ಅಥವಾ ಹುಲಿ “ .
  • ಚೋಳರ ಪ್ರಥಮ ದೊರೆ - “ ಇಳೈಯಾನ್ ಚೋಳ “
  • ಇಳೈಯಾನ್ ಚೋಳನ ನಂತರ ಅಧಿಕಾರಕ್ಕೆ ಬಂದವನು - “ ಕರಿಕಾಲ ಚೋಳ “
  • ಚೋಳರ ಪ್ರಸಿದ್ಧ ದೊರೆ - “ ಕರಿಕಾಲ ಚೋಳ “
  • ವೆಣೈ ಯುದ್ಧ ಕೈಗೊಂಡ ಚೋಲ ದೊರೆ - “ ಕರಿಕಾಲ ಚೋಳ “
  • ಪುಹಾರ್ ಎಂಬ ಚೋಳ ಬಂದರಿನ ನಿರ್ಮಾತೃ - “ ಕರಿಕಾಲ ಚೋಳ “
  • ಉರೆಯೂರಿನಲ್ಲಿ ರಾಜಧಾನಿಯನ್ನ ಸ್ಥಾಪಿಸಿದ ಚೋಳ ದೊರೆ - “ ಕರಿಕಾಲ ಚೋಳ “
  • “ ಕಾವೇರಿ ಪಟ್ಟಣಂ “ ನಲ್ಲಿ ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿಮನು - “ ಕರಿಕಾಲ ಚೋಳ “
  • ವೆಣ್ಣಾರ್ ನಾಲೆಯ ನಿರ್ಮಾತೃ - ಕರಿಕಾಲ ಚೋಳ
  • ಶ್ರೀರಂಗದ ಗ್ರಾಂಡ್ ಅಣಿಕಟ್ಟಿನ ನಿರ್ಮಾತೃ - ಕರಿಕಾಲ ಚೋಳ
  • ಚೋಳ ರಾಜ್ಯದ ಸ್ಥಾಪಕ ದೊರೆ - ವಿಜಯಾಲ
  • ಚೋಳರ ಮತ್ತೋಬ್ಬ ಪ್ರಬಲ ದೊರೆ - “ ರಾಜರಜ ಚೋಳ “
  • ರಾಜರಾಜ ಚೋಳನ ಮಗನ ಹೆಸರು - ‘ ರಾಜೇಂದ್ರ “
  • ಗಂಗೈಕೊಂಡ ಚೋಳ ಎಂಬ ಬಿರುದ್ದನ್ನು ಧರಿಸಿದ ಅರಸ - “ ರಾಜೇಂದ್ರ “
  • “ ಚೋಳ ಗಂಗಂ “ ಕೆರೆಯ ನಿರ್ಮಾತೃ - “ ರಾಜೇಂದ್ರ “
  • “ ಗಂಗೈಕೊಂಡ ಚೋಳ ಪುರಂ “ ಎಂಬ ಹೊಸ ನಗರದ ನಿರ್ಮಾತೃ - “ ರಾಜೇಂದ್ರ “
  • ರಾಜೇಂದ್ರನ ರಾಜಧಾನಿ - “ ಗಂಗೈಕೊಂಡ ಚೋಳಪುರಂ “
  • “ ಕದರಂಗೊಂಡ “ ಎಂಬ ಬಿರುದುಳ್ಳ ಅರಸ - “ ರಾಜೇಂದ್ರ “

ಚೋಳರ  ರಾಜ್ಯಾಡಳಿತ


  • ರಾಜನೆ ಸಾರ್ವಬೌಮನಾಗಿದ್ದ
  • ಅಧಿಕಾರ ವಂಶ ಪಾರಂಪರ್ಯವಾಗಿತ್ತು
  • ಆಯಾ ಸ್ಥಳದ ವ್ಯವಹಾರ ನಿರ್ವಹಣಿಗೆ ಸ್ಥಳೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದರು .
  • ಸ್ಥಳೀಯ ಸಂಸ್ಥೆಗಳಿಗೆ ಜನರಿಂದ ಚುನಾವಣಿ ನಡೆಯುತ್ತಿತ್ತು .
  • ನಾಡು, ಒಳನಾಡು ಹಾಗೂ ಮಂಡಲ ರಾಜ್ಯದ ಆಡಳಿತ ವಿಭಾಗವಾಗಿತ್ತು .
  • ರಾಜರಾಜ ಹಾಗೂ ರಾಜೇಂದ್ರ ಚೋಳರು - ಚೀನಾಕ್ಕೆ ರಾಯಭಾರಿಗಳನ್ನು ಕಳಿಸಿದ್ದರು .
  • ವ್ಯಾಪಾರ ವ್ಯವಹಾರದ ಅಭಿವೃದ್ಧಿಗೆ - “ ವಾಣಿಜ್ಯ ಸಂಘ “ ಪ್ರಮುಖ ಪಾತ್ರವಹಿಸಿತ್ತು .
  • ಚೋಳರು - ಕಗ್ಗಲ್ಲಿನಿಂದ ದೇವಾಲಯ ನಿರ್ಮಾಣ ಮಾಡಿದರು .
  • ದೇವಾಲಯಗಳಲ್ಲಿ - ದ್ರಾವಿಡಶೈಲಿ ಯನ್ನು ಉಪಯೋಗಿಸಿದ್ದರು .
  • ತಂಜಾವೂರಿನ ಬೃಹದೀಶ್ವರ ದೇವಾಲಯ ಚೋಳರ ಅತ್ಯಂತ ವಿಶಾಲ ದೇವಾಲಯ .
  • ಬೃಹದೀಶ್ವರ ದೇವಾಲಯದ ನಿರ್ಮಾತೃ - ರಾಜರಾಜ ಚೋಳ 1009 ರಲ್ಲಿ ನಿರ್ಮಿಸಿದ.
  • ‘ ಗಂಗೈಕೊಂಡ ಚೋಳಪುರಂ “ ದೇವಾಲಯದ ನಿರ್ಮಾತೃ - ರಾಜೇಂದ್ರ ಚೋಳ 1030
  • ಚೋಳರ ಆಸ್ಥಾನದ ಪ್ರಮುಖ ಕವಿ - ಜಯಗೊಂಡರ್ .
  • “ ಪೆರಿಯಾ ಪುರಾಣ “ ಕೃತಿಯ ಕರ್ತೃ - ಶೆಕ್ಕಿಲಾರ್ ( ಭಕ್ತಿ ಸಾಹಿತ್ಯದ ಕೃತಿ )
  • “ ಕಂಬ ರಾಮಾಯಣ “ ಮಹಾಕಾವ್ಯದ ಕರ್ತೃ - ಕಂಬನ್

ಸಂಗಂ ಕಾಲದ ಆಡಳಿತ


  • ರಾಜ್ಯದ ಆಡಳಿತದ ಕೇಂದ್ರ ಬಿಂದು - ಅರಸ
  • ರಾಜ ಪದವಿ - ವಂಶ ಪಾರಂಪರ್ಯವಾಗಿತ್ತು .
  • ರಾಜರನ್ನು ದೈವಾಂಶ ಸಂಭೂತನೆಂದು ನಂಬಿದ್ದರು .
  • ರಾಜಕೀಯದಲ್ಲಿ ಅರಸನಿಗಿದ್ದ ಸಲಹಾ ಸಮಿತಿಗಳು - ಎಂಪೆರುಕುಳು ಹಾಗೂ ಎನ್ ಪೆರಾಯಮ್ .
  • ರಾಯಭಾರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಧೂತರು .
  • ಗೂಢಾಚರರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬರ್ರರ್ .
  • ರಾಜ್ಯವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು ,- ಮಂಜಲಮ್
  • ಪ್ರಾಂತ್ಯಗಳನ್ನು - ನಾಡುಗಳಾಗಿ ವಿಂಗಡಿಸಲಾಗಿತ್ತು .
  • ನಾಡುಗಳನ್ನ - ಹಳ್ಳಿಗಳಾಗಿ ಮತ್ತು ಪಟ್ಟಣಗಳಾಗಿ ವಿಬಾಗಿಸಲಾಗಿತ್ತು .
  • ಹಳ್ಳಿಗನ್ನ ಈ ರೀತಿ ವಿಭಾಗಿಸಲಾಗಿತ್ತು - “ ಸಿರೂರ್ ಮತ್ತು ಪೆರೂರ್ “
  • ಹಳ್ಳಿಯ ಗ್ರಾಮ ಸಭೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಅವೈ “
  • ಹಳ್ಳಿಯ ಆಗು ಹೋಗುಗಳನ್ನ ನೋಡಿಕೊಳ್ಳುತ್ತಿದ್ದ ಸಂಸ್ಥೆಗಳು - ಮನ್ರಾಂ ಮತ್ತು ಪೊಡಿಯಲ್
  • ಸೈನ್ಯವನ್ನ ಈ ಹೆಸರಿನಿಂದ ಕರೆಯುತ್ತಿದ್ದರು - “ ಪಪೈ “
  • ಸೇನಾಧಿಪತಿಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ತಾನೈತ್ ತಲೈವನ್
  • ಯುದ್ಧದಲ್ಲಿ ಮರಣ ಹೊಂದಿದ ಸೈನಿಕರಿಗೆ ಸವಿ ನೆನಪಿಗಾಗಿ ನೆಡುತ್ತಿದ್ದ ಸ್ಮಾರಕಗಳು - ವೀರಕಲ್ಲು ಮತ್ತು ನೆಡುಕಲ್
  • ಸಂಗಂ ಯುಗದ ಜರನ ಆದಾಯದ ಮೂಲ - ಭೂಕಂದಾಯ ಹಾಗೂ ವ್ಯಾಪಾರ
  • ಭೂತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - “ ಕರೈ “
  • ಪಾಂಡ್ಯರ ರಾಜ್ಯವನ್ನು ಆಳುತ್ತಿದ್ದ ರಾಣಿ - ಪಾಂಡೈಯಾ
  • ಚೋಳರ ಕಾಲದಲ್ಲಿ ನ್ಯಾಯ ತೀರ್ಮಾನಕ್ಕೆ ಖ್ಯಾತಿ ಪಡೆದಿದ್ದ ಸ್ಥಳ - ಉರೈಯೂಲ್ .
  • ರೈತರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ವೆಳ್ಳಾರರು .
  • ಸಂಗಂ ಕಾಲದಲ್ಲಿ ಕೃಷಿಗೆ ವರದಾನವಾಗಿ ಶ್ರಮಿಸಿದ ನದಿಗಳು - ಪೆಣ್ಣಾರ್ , ಪಾಲಾರ್ , ಕಾವೇರಿ ಮತ್ತು ತಾಮ್ರ ಪರ್ಣಿ .
  • ಚೇರ ದೇಶ ಈ ಹಣ್ಣಿಗೆ ಹೆಸರು ವಾಸಿಯಾಗಿತ್ತು - ಹಲಸು
  • ಸಂಗಂ ಕಾಲದಲ್ಲಿ ಹತ್ತಿ ಬಟ್ಟೆಗೆ ಹೆಸರಾದ ಸ್ಥಳ - ಉರೈಯೂರು
  • ಪಾಂಡ್ಯರ ಪ್ರಮುಖ ಬಂದರು - ಸಲಿಯೂರ್
  • ಚೋಳರ ಪ್ರಮುಖ ಬಂದರು - ಪುಹಾರ್ .
  • ಎತ್ತರದ ಬೆಳಕಿನ ಮನೆ ಈ ಬಂದರಿನಲ್ಲಿತ್ತು - ನಿರ್ಪೆಯರ್ಕು .
  • ಮಾರುಕಟ್ಟೆಯನ್ನ ಈ ಹೆಸರಿನಿಂದ ಕರೆಯುತ್ತಿದ್ದರು - ಅವಣಂ
  • ಮಾರುಕಟ್ಟೆಯ ವಿಧಗಳು - ಮಾಳಂಗಾಟಿ ಹಾಗೂ ಅಲ್ಲಂಗಾಡಿ
  • ಬೆಳಗಿನ ಮಾರುಕಟ್ಟೆಯ ಹೆಸರು - ಮಾಳಂಗಾಡಿ
  • ಸಂಜೆಯ ಮಾರುಕಟ್ಟೆಯ ಹೆಸರು - ಅಲ್ಲಂಗಾಡಿ
  • ಬಾರತದಿಂದ ರಪ್ತಾಗುತ್ತಿದ್ದ ಮಲ್ಸನ್ ಗಳನ್ನು ಪ್ಲೀನಿ - ನೆಯ್ದ ಬಲೆಗಳು ಎಂದು ಕರೆದಿದ್ದಾರೆ .
  • ಮೆಣಸನ್ನು ಅಧಿಕ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದ ಗ್ರೀಕರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಯವನ ಪ್ರಿಯರು
  • ಸಂಗಂ ಕಾಲದ ನಾಣ್ಯಗಳು - ನಿಷ್ಕ , ಫಲ , ಸುವರ್ಣ ( ಬಂಗಾರದ ನಾಣ್ಯ ) ಕಾಕಿನಿ ( ತಾಮ್ರದ ನಾಣ್ಯ ) ಹಾಗೂ
  • ಶತಮಾನ ( ಬೆಳ್ಳಿ ನಾಣ್ಯ ) .ಸಂಗಂ ಸಮಾಜದಲ್ಲಿ ಬ್ರಾಹ್ಮಣರನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಂದಣರ್

ಪ್ರಿಯ ಮಿತ್ರರೇ, ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾಕಾಂಕ್ಷಿಗಳಿಗೆ ಉಪಯುಕ್ತವಾಗುವಂತಹ ಹಲವಾರು ಪಿಡಿಎಫ್ ನೋಟ್ಸ್‍ಗಳನ್ನು ದಿನನಿತ್ಯ ಇಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ.

ಆದ್ದರಿಂದ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರಿ


ನಮ್ಮ ಯೂಟ್ಯೂಬ್ ಚಾನೆಲ್ ಗೆ ಸಬ್‍ಸ್ಕ್ರೈಬ್ ಆಗಲು ಇಲ್ಲಿ ಕ್ಲಿಕ್ ಮಾಡಿ







ನಮ್ಮ ಟೆಲಿಗ್ರಾಮ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ








ನಮ್ಮ ಫೇಸ್‍ಬುಕ್ ಪೇಜ್ ಲೈಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ













No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads