ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​02 December 2021 Daily Top-10 General Knowledge Question Answers in Kannada for All Competitive Exams

02 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಸಾಮಾನ್ಯ ಟಿ.ವಿ ರಿಮೋಟ್ ಕಂಟ್ರೋಲ್‌ನಲ್ಲಿ ಬಳಕೆಯಾಗುವ ಕಿರಣಗಳು?
ಎ) ಲೇಸರ್
ಬಿ) ಶ್ರವಣಾತೀತ ಅಲೆಗಳು
ಸಿ) ರೇಡಿಯೋ ತರಂಗಗಳು
ಡಿ) ಅತಿಗೆಂಪು ಅಲೆಗಳು 

ಸರಿಯಾದ ಉತ್ತರ: ಡಿ) ಅತಿಗೆಂಪು ಅಲೆಗಳು 



2. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾದ ಜೋಡಣೆಯಾಗಿದೆ?
ಎ) ಕಲಂ 167 ಮುಖ್ಯಮಂತ್ರಿಯ ಕರ್ತವ್ಯಗಳು
ಬಿ) ಕಲಂ 163 ಮುಖ್ಯಮಂತ್ರಿಯ ಪ್ರಮಾಣವಚನ
ಸಿ) ಕಲಂ 165 ರಾಜ್ಯದ ಅಡ್ವಕೇಟ್ ಜನರಲ್
ಡಿ) ಕಲಂ 161 ರಾಜ್ಯಪಾಲರಿಗೆ ಕ್ಷಮಾಪಣೆ ಅಧಿಕಾರಗಳು

ಸರಿಯಾದ ಉತ್ತರ: ಬಿ) ಕಲಂ 163 ಮುಖ್ಯಮಂತ್ರಿಯ ಪ್ರಮಾಣವಚನ  



03. ಸೂಪರ್ಸಾನಿಕ ಜೆಟ್ ವಿಮಾನಗಳು ಭೂಮಿಯ ವಾತಾವರಣದ ಈ ಕೆಳಗಿನ ಯಾವ ಪದರಗಳಲ್ಲಿ ಹಾರುತ್ತವೆ?
ಎ) ಮೆಸೊಸ್ಪಿಯರ್
ಬಿ) ಥರ್ಮೋಸ್ಪಿಯರ್
ಸಿ) ಸ್ಟ್ರ್ಯಾಟೋಸ್ಪಿಯರ್
ಡಿ) ಟ್ರೋಪೋಸ್ಪಿಯರ್

ಸರಿಯಾದ ಉತ್ತರ: ಸಿ) ಸ್ಟ್ರ್ಯಾಟೋಸ್ಪಿಯರ್ 




4. ಈ ಕೆಳಗಿನವುಗಳಲ್ಲಿ ಯಾವುದು ಪಂಚವಾರ್ಷಿಕ ಯೋಜನೆಯನ್ನು ಅನುಮೋದಿಸಲು ಭಾರತದಲ್ಲಿ ಅಂತಿಮ ಅಧಿಕಾರವನ್ನು ಹೊಂದಿದೆ?
ಎ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
ಬಿ) ಪ್ರಧಾನಮಂತ್ರಿ
ಸಿ) ಯೋಜನಾ ಆಯೋಗ
ಡಿ) ಕೇಂದ್ರ ಮಂತ್ರಿ ಮಂಡಳಿ

ಸರಿಯಾದ ಉತ್ತರ: ಎ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ 





5. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ ವೆ?
1) ಡಿಎನ್‌ಎ ಮತ್ತು ಆರ್‌ಎನ್‌ಎ ಗಳು ಎರಡೂ ನ್ಯೂಕ್ಲಿಯೋ ಟೈಡ್‌ಗಳಿಂದ ಮಾಡಲ್ಪಟ್ಟಿದೆ
2) ಡಿಎನ್ಎ ಮತ್ತು ಆರ್‌ಎನ್‌ಎ ಎರಡರಲ್ಲೂ ಅಡೆನಿನ, ಗ್ವಾನಿನ, ಸೈಟೊಸಿನ್ ಮತ್ತು ಥೈಯಾಮಿನ್ ಇರುತ್ತದೆ
ಎ) 1 ಮಾತ್ರ
ಬಿ) 2 ಮಾತ್ರ
ಸಿ) ಎರಡೂ ಸರಿಯಾಗಿವೆ
ಡಿ) ಎರಡೂ ತಪ್ಪಾಗಿವೆ

ಸರಿಯಾದ ಉತ್ತರ: ಎ) 1 ಮಾತ್ರ 




6. ಈ ಕೆಳಗಿನ ವಿದೇಶಿಗರಲ್ಲಿ ಯಾರು ಕಾಂಗ್ರೆಸ್ ಅಧಿವೇಶನಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ?
1) ಎ. ಓ. ಹೂಮ್
2) ಜಾರ್ಜ್ ಯುಲೆ
3) ಹೆನ್ರಿ ಕಾಟನ್
ಎ) 1 ಮತ್ತು 2 
ಬಿ) 2 ಮತ್ತು 3
ಸಿ) 1 ಮತ್ತು 3 
ಡಿ) 1, 2 ಮತ್ತು 3

ಸರಿಯಾದ ಉತ್ತರ: ಬಿ) 2 ಮತ್ತು 3




7. ಮುಂಗಾರು ಮಳೆಗೆ ಕಾರಣವೇನು?
ಎ) ನೈರುತ್ಯ ಮಾನ್ಸೂನ್ ಮಾರುತಗಳು ಹಿಂದು ಮಹಾಸಾಗರದಿಂದ ಬೀಸುವಾಗ ಹೊತ್ತು ತರುವ ತೇವಾಂಶ.
ಬಿ) ನೈರುತ್ಯ ಮಾನ್ಸೂನ್ ಮಾರುತಗಳು ಅರಬ್ಬಿ ಸಮುದ್ರದಿಂದ ಹೊತ್ತು ತರುವ ತೇವಾಂಶಭರಿತ ಗಾಳಿಯನ್ನು ಘಟ್ಟಗಳು ತಡೆಯುವುದು.
ಸಿ) ಅರಬ್ಬಿ ಸಮುದ್ರವನ್ನು ಹಾದು ಬರುವ ನೈರುತ್ಯ ಮಾನ್ಸೂನ್ ಮಾರುತಗಳು ಪಶ್ಚಿಮ ಘಟ್ಟಗಳಿಗಿಂತ ಎತ್ತರದಲ್ಲಿ ಹಾದು ಹೋಗುವುದು.
ಡಿ) ಅರಬ್ಬಿ ಸಮುದ್ರವನ್ನು ಹಾದು ಬರುವ ನೈರುತ್ಯ ಮಾನ್ಸೂನ್ ಮಾರುತಗಳು ಹೊತ್ತು ತರುವ ತೇವಾಂಶಕ್ಕೆ ಹಿಂದಿನ ವರ್ಷದ ನೈರುತ್ಯ ಮಾನ್ಸೂನ್ ಮಾರುತಗಳು ಹಿಮಾಲಯ ಪರ್ವತಗಳಿಂದ ತಡೆಯಲ್ಪಟ್ಟು ಹಿಂದಿರುಗುವಾಗ ಶುಷ್ಕ ಮಾರುತಗಳು ಸಂಘರ್ಷವನ್ನು ಒಡ್ಡುವುದು.

ಸರಿಯಾದ ಉತ್ತರ: ಬಿ) ನೈರುತ್ಯ ಮಾನ್ಸೂನ್ ಮಾರುತಗಳು ಅರಬ್ಬಿ ಸಮುದ್ರದಿಂದ ಹೊತ್ತು ತರುವ ತೇವಾಂಶಭರಿತ ಗಾಳಿಯನ್ನು ಘಟ್ಟಗಳು ತಡೆಯುವುದು.  




8. ಯಾವ ಶಾಸನವು ಕರ್ನಾಟಕ ನರ್ಮದಾ ನದಿಯವರೆಗೂ ವಿಸ್ತರಿಸಿದ್ದುದನ್ನು ಹೇಳುತ್ತದೆ?
ಎ) ಬೆಳ್ಮಣ್ಣು ತಾಮ್ರ ಶಾಸನ
ಬಿ) ವಡ್ಡರ್ಸ ಶಿಲಾ ಶಾಸನ
ಸಿ) ಹಲ್ಮಿಡಿ ಶಾಸನ
ಡಿ) ರವಿಕೀರ್ತಿಯ ಹೊಳೆ ಶಾಸನ 

ಸರಿಯಾದ ಉತ್ತರ: ಡಿ) ರವಿಕೀರ್ತಿಯ ಹೊಳೆ ಶಾಸನ 




9. ಕರ್ನಾಟಕದ ಈಶಾನ್ಯ ಭಾಗದಲ್ಲಿರುವ ರಾಜ್ಯ ಯಾವುದು?
ಎ) ಆಂಧ್ರ ಪ್ರದೇಶ 
ಬಿ) ತೆಲಂಗಾಣ
ಸಿ) ಗೋವಾ
ಡಿ) ಮಹಾರಾಷ್ಟ್ರ

ಸರಿಯಾದ ಉತ್ತರ: ಬಿ) ತೆಲಂಗಾಣ 




10.  ಪೆಡಾಲಜಿ ಎಂದರೆ ಏನು?
ಎ) ಮಳೆಯ ಅಧ್ಯಯನ
ಬಿ) ಭೂಗರ್ಭದ ಅಧ್ಯಯನ
ಸಿ) ಮಣ್ಣಿನ ಅಧ್ಯಯನ
ಡಿ) ಬೆಳೆ ಪದ್ಧತಿಯ ಅಧ್ಯಯನ

ಸರಿಯಾದ ಉತ್ತರ: ಸಿ) ಮಣ್ಣಿನ ಅಧ್ಯಯನ 


 ಇವುಗಳನ್ನೂ ಓದಿ December 2021  

 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area