ಪ್ರಚಲಿತ ವಿದ್ಯಮಾನಗಳು: 08-09-2021 Daily Current Affairs in Kannada

ಪ್ರಚಲಿತ ವಿದ್ಯಮಾನಗಳು: 08-09-2021 Daily Current Affairs in Kannada

ಪ್ರಚಲಿತ ವಿದ್ಯಮಾನಗಳು: 08-09-2021 Daily Current Affairs in Kannada
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒ್ರಚಲಿತ ವಿದ್ಯಮಾನಗಳ ಪ್ರಶ್ನೆಗಳು ಸರ್ವೇ ಸಾಮಾನ್ಯವಾಗಿರುತ್ತವೆ. ಪ್ರಚಲಿತ ವಿದ್ಯಮಾನಗಳ ಸಾಮಾನ್ಯ ಜ್ಞಾನವೂ ಒ್ರತಿಯೊಬ್ಬ ಸ್ಪರ್ಧಾರ್ಥಿಗಳಿಗೂ ಇರಲೇಬೇಕು. Current Affairs ಬಹು ಮುಖ್ಯವಾಗಿ ಇಂದಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಕಷ್ಟು ಪ್ರಶ್ನೆಗಳು ಬರುವ ಸಾಧ್ಯತೆಗಳು ಇರುವುದರಿಂದ Edutube Kannada ಹಲವಾರು ಮೂಲಗಳಿಂದ ಪ್ರಚಲಿತ ವಿದ್ಯಮಾನಗಳನ್ನು ಸಂಗ್ರಹಿಸಿ ನಿಮಗೆ ನೀಡುತ್ತಿದೆ..!!! ಕನ್ನಡದಲ್ಲಿ ಪ್ರತಿದಿನದ ಪ್ರಮುಖ ಪ್ರಚಲಿತ ವಿದ್ಯಮಾನಗಳಿಗಾಗಿ ದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!!!

13 ನೇ ಬ್ರಿಕ್ಸ್ ಸಭೆಗೆ ಭಾರತ ಅಧ್ಯಕ್ಷತೆ


ಪ್ರಸಕ್ತ ಸಾಲಿನಲ್ಲಿ ನಡೆಯುವ ವರ್ಚುವಲ್ ರೂಪದ ಬ್ರಿಕ್ಸ್ ಸಮಾವೇಶಕ್ಕೆ ಭಾರತದ ಪ್ರಧಾನಮಂತ್ರಿ “ನರೇಂದ್ರ ಮೋದಿ” ಯವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

* 2021ನೇ ಸಾಲಿನ ಸಮಾವೇಶವು 13ನೇ ಆವೃತ್ತಿಯ ಬ್ರಿಕ್ಸ್ ಸಮಾವೇಶವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಅಧ್ಯಕ್ಷತೆ ವಹಿಸುತ್ತಿರುವ 2ನೇ ಸಮಾವೇಶ ವಾಗಿದೆ.
* 2016 ರಲ್ಲಿ ಗೋವಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

BRICS : (Brazil, Russia, India, China, South Africa)


* ಬ್ರಿಟನ್ ದೇಶದ ಆರ್ಥಿಕ ತಜ್ಞೆ ಜಿಮ್ ಒನೀಲ್ ರವರ “Building Better Global Economic” ಎಂಬ ಪ್ರಕಟಣೆಯಲ್ಲಿ “BRIC” ಎಂಬ ಪದವನ್ನು ಮಾಡಿದ್ದರು.

* ಸ್ಥಾಪನೆ : 2009
* ಸದಸ್ಯ ರಾಷ್ಟ್ರಗಳು : 05
# BRICSನ ಮೊದಲ ಶೃಂಗಸಭೆಯು 2009 ರಲ್ಲಿ ರಷ್ಯಾದ “ಯುಕಟರಿನ್ ಬರ್ಗ್” ನಲ್ಲಿ ನಡೆಯಿತು.
* 2013 ರಲ್ಲಿ 5ನೇ ಬ್ರಿಕ್ಸ್ ಶೃಂಗಸಭೆಯಲ್ಲಿ “ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಲಾಯಿತು.
* 5ನೇ ಬ್ರಿಕ್ಸ್ ಶೃಂಗಸಭೆಯು “ದಕ್ಷಿಣ ಆಫ್ರಿಕಾದ” ಡರ್ಬನ್‌ನಲ್ಲಿ ನಡೆಯಿತು.
* 2014 ರಲ್ಲಿ 6ನೇ ಬ್ರಿಕ್ಸ್ ಶೃಂಗಸಭೆಯಲ್ಲಿ “ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್” ನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು.
* 2016 ರಲ್ಲಿ 8ನೇ ಬ್ರಿಕ್ಸ್ ಶೃಂಗಸಭೆಯು “ಗೋವಾದ ಬೆನಾಲಿಯಂ" ನಲ್ಲಿ ನಡೆಯಿತು.
* 2019 ರಲ್ಲಿ 11ನೇ ಬ್ರಿಕ್ಸ್ ಶೃಂಗಸಭೆಯು ಬ್ರೆಜಿಲ್‌ನ “ಬ್ರೆಸಿಲಿಯಾದಲ್ಲಿ ಜರುಗಿತು.
* 2020 ರಲ್ಲಿ 12ನೇ ಬ್ರಿಕ್ಸ್ ಸಮಾವೇಶವು ರಷ್ಯಾದಲ್ಲಿ ನಡೆಯಬೇಕಿತ್ತು. ಆದರೆ ಸಾಂಕ್ರಾಮಿಕ ರೋಗ ಕೋವಿಡ್ -19 ಕಾರಣದಿಂದ ನಡೆಯಲಿಲ್ಲ.


ಬೀದರ್‌ನಲ್ಲಿ ಗಗನಯಾತ್ರಿಗಳಿಗೆ ತರಬೇತಿ


ಭಾರತದ ಚೊಚ್ಚಲ ಗಗನ ಯಾನಕ್ಕೆ ಆಯ್ಕೆಯಾಗಿರುವ ನಾಲ್ವರು ಗಗನಯಾತ್ರಿಗಳಿಗೆ ಬೀದರ್ ನಲ್ಲಿರುವ ಭಾರತೀಯ ವಾಯುಪಡೆಯ ವಾಯು ನೆಲೆಯಲ್ಲಿ ಪ್ರಾಥಮಿಕ ಹಂತದ ತರಬೇತಿ ಆರಂಭಗೊಳ್ಳಲಿದೆ.

* ನಾಲ್ವರು ಪೈಲಟ್‌ಗಳು ಬೀದರ್‌ನಲ್ಲಿ ಗಗನಯಾನಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ತರಬೇತಿ ಮುಗಿದ ನಂತರ ಉನ್ನತ ಮಟ್ಟದ ತರಬೇತಿಗೆ ಇವರನ್ನು ರಷ್ಯಾಗೆ ಕಳುಹಿಸಲಾಗುತ್ತದೆ.
* ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಕ್ಕೆ ಮುನ್ನ ಮಾನವ ರಹಿತ ರಾಕೆಟ್‌ಗಳನ್ನು ಪ್ರಾಯೋಗಿಕವಾಗಿ ಉಡಾವಣೆ ಮತ್ತು ನೌಕೆಯ ಕ್ಷಮತೆಯನ್ನು ನಿರ್ಧರಿಸಲಾಗುತ್ತದೆ.

ಬೀದರ್ ಜಿಲ್ಲೆ


* ಬೀದರ್ ಜಿಲ್ಲೆಯು ಕರ್ನಾಟಕದ ಉತ್ತರದ ತುದಿಯಾಗಿದೆ.
* ಬೀದರ್ ಜಿಲ್ಲೆಯಲ್ಲಿ “ಸೋಲಾಕಂಬ ಮಸಿದಿ” ಇದೆ.
* “ಮಹಮ್ಮದ್ ಗವಾನ್” ನಿರ್ಮಿಸಿದ “ಮದರಸವಿದೆ”
* ಬೀದರ್ ಜಿಲ್ಲೆಯಲ್ಲಿ “ಪಶುವೈದ್ಯಕೀಯ ವಿಶ್ವವಿದ್ಯಾಲಯವಿದೆ”
* ಬೀದರ್ ಜಿಲ್ಲೆಯಲ್ಲಿ “ವೈಮಾನಿಕ ತರಬೇತಿ ಕೇಂದ್ರ”ವಿದೆ.
* ಬೀದರ್ ಜಿಲ್ಲೆಯು “ಬಹುಮನಿ ಸುಲ್ತಾನರ” ಎರಡನೇ ರಾಜಧಾನಿಯಾಗಿತ್ತು.

ಮಂಗಳೂರಿನ ರಾಜ್ಯದ ಮೊದಲ ತೇಲುವ ಜೆಟ್ಟಿ ನಿರ್ಮಾಣಕ್ಕೆ ಚಿಂತನೆ


ಮಂಗಳೂರಿನ ಹಳೆಯ ಬಂದರಿನಲ್ಲಿ ರಾಜ್ಯದ ಮೊದಲ ತೇಲುವ ಜೆಟ್ಟಿ ನಿರ್ಮಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಕೃಷಿ ವಿಕಾಸ ಯೋಜನೆಯಡಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಕೋಲ್ಡ್ ಸ್ಟೋರೆಜ್ ಟ್ರಕ್‌ಗಳಿಗೆ ಚಾಲನೆ ನೀಡಲಾಗಿದೆ.

* ಸುಮಾರು 6.5 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ


* ಸ್ಥಾಪನೆ : 2017
* ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.

ಯೋಜನೆಯ ಉದ್ದೇಶಗಳು


* ಕೃಷಿ & ಸಂಬಂಧಿತ ವಲಯಗಳಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸುವುದಕ್ಕೆ ರಾಜ್ಯಗಳನ್ನು ಪ್ರೋತ್ಸಾಹಿಸುವುದು.
* ಮೀನುಗಾರಿಕೆ ಉತ್ತೇಜನಕ್ಕೆ ಪ್ರೋತ್ಸಾಹ.
* ಬಂದರುಗಳು & ಲ್ಯಾಂಡಿಂಗ್ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಬಗ್ಗೆ ಅರಿವು ಮೂಡಿಸುವುದು.
* ಅಲಂಕಾರಿಕ ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸುವುದು.

ಕಸಾಪ ಆಡಳಿತಾಧಿಕಾರಿಯಾಗಿ ರಂಗಪ್ಪ ನೇಮಕ


ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಆಡಳಿತಾಧಿಕಾರಿಯಾಗಿ ಕನ್ನಡ & ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ನೇಮಕಗೊಂಡಿದ್ದಾರೆ.
* ಕಳೆದ 5 ವರ್ಷಗಳ ಕಾಲ ಡಾ|| ಮನು ಬಳಿಗಾರ್ ಅವರು ಕಸಾಪದ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
* ಕಸಾಪ ಚುನಾವಣೆ ನಡೆದು ನೂತನ ಅಧ್ಯಕ್ಷರ ಆಗಮನದವರೆಗೆ ಎಸ್.ರಂಗಪ್ಪ ಅವರು ಪರಿಷತ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ನ ಬಗ್ಗೆ ಮಾಹಿತಿ


ಸ್ಥಾಪನೆ – 1915
ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್‌ಗೆ ಚಾಲನೆ ನೀಡಿದರು.
ಮೊದಲ ಅಧ್ಯಕ್ಷರು - ಹೆಚ್.ವಿ.ನಂಜುಂಡಯ್ಯ (1915- 1920)
ಪ್ರಸ್ತುತ ನಿರ್ಗಮಿತ ಅಧ್ಯಕ್ಷ - ಮನು ಬಳಿಗಾರ
* ಆಡಳಿತಾಧಿಕಾರಿಗಳು - ಎಸ್.ರಂಗಪ್ಪ

ಜಪಾನ್ ಪ್ರಧಾನಿ ಯೋಶಿಡೆ ಸುಗಾ ರಾಜೀನಾಮೆ


ಜಪಾನ್‌ನ ಪ್ರಧಾನಮಂತ್ರಿ ಯೋಶಿಡೆ ಸುಗಾ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ಸಾಲಿನಲ್ಲಿ ಶಿಂಜೊ ಅಬೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸುಗಾ ಅವರು ಜವಾಬ್ದಾರಿ ವಹಿಸಿಕೊಂಡಿದ್ದರು. ದೇಶದಲ್ಲಿ ಕೋವಿಡ್ ನಿರ್ವಹಣೆಯ ಫಲ ನಿಧಾನಗತಿಯ ಲಸಿಕಾ ಪ್ರಕ್ರಿಯೆ ಕರೋನಾ ಹೊರತಾಗಿಯೂ ಒಲಿಂಪಿಕ್ಸ್ ಆಯೋಜನೆ ಹಾಗೂ ಆರ್ಥಿಕತೆಯ ವಿಷಯದಲ್ಲಿ ದೇಶವು ತೀರಾ ಕೆಳಮಟ್ಟಕ್ಕೆ ಕುಸಿದಿರುವ ವಿಚಾರಗಳು ಪ್ರಧಾನಿ ರಾಜೀನಾಮೆಗೆ ಕಾರಣವಾಗಿದೆ.

* 72 ವರ್ಷ “ಯೋಶಿಡೆ ಸುಗಾ” ಅವರು 1987 ಮೊದಲ ಬಾರಿಗೆ ಯೋಕೋಹಮಾ ಸಿಟಿ ಕೌನ್ಸಿಲ್‌ಗೆ ಆಯ್ಕೆಯಾಗುವುದರೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು.
* 1996 ರಲ್ಲಿ ಜಪಾನ್ ಡಯಟ್ ಸ್ಥಾನ 2005 ರಲ್ಲಿ ಜಪಾನ್ ಸರ್ಕಾರದ ಆಂತರಿಕ ವ್ಯವಹಾರಗಳು & ಸಂವಹನದ ಹಿರಿಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 

ಜಪಾನ್ ದೇಶ


* ರಾಜಧಾನಿ - ಟೋಕಿಯೋ
* ರಾಷ್ಟ್ರೀಯ ಭಾಷೆ - ಜಪಾನ್
* ಸಂಸತ್ತು - ಡಯಟ್
* ಕರೆನ್ಸಿ - ಯೆನ್
* ಪ್ರಸ್ತುತ ಹೆಚ್‌ಡಿಐ ರ್ಯಾಕಿಂಗ್ - 19

ಚಂದ್ರಯಾನ - 2 ಯೋಜನೆಗೆ 2 ವರ್ಷ


ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ - 2ಕ್ಕೆ ಈಗ ಎರಡು ವರ್ಷ. ಈ ಅವಧಿಯಲ್ಲಿ, ಕಕ್ಷೆಗಾಮಿಯು (ಆರ್ಬಿಟರ್) ಬರೋಬ್ಬರಿ 9 ಸಾವಿರ ಸುತ್ತು ಹಾಕಿದೆ. ಯೋಜನೆಗೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ 'ಲೂನಾರ್ ಸೈನ್ಸ್ ವರ್ಕ್‌ಶಾಪ್-2021' ವರ್ಚುವಲ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
* ಕಕ್ಷೆಗಾಮಿಯಿಂದ ಬೇರ್ಪಟ್ಟು ವಿಕ್ರಂ ಲ್ಯಾಂಡರ್ 2019 ರ ಸೆ.6 ರಂದು ಚಂದ್ರನ ಮೇಲೆ ಸ್ವಯಂಚಾಲಿತವಾಗಿ, ಸುರಕ್ಷಿತವಾಗಿ ಇಳಿಯಬೇಕಿತ್ತು. 30 ಕಿ.ಮೀ. ದೂರದಿಂದ ಚಂದ್ರನತ್ತ ಸಾಗಿದ ನೌಕೆ ಚಂದ್ರನ ಮೇಲೈಯಿಂದ ಕೇವಲ 2.1 ಕಿ.ಮೀ ಅಂತರದಲ್ಲಿರುವಾಗ ಸಂಪರ್ಕ ಕಡಿತಗೊಂಡಿತ್ತು. ಲ್ಯಾಂಡರ್ ಅಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರಿಂದ, ಅದರೊಳಗಿನ ಪ್ರಜ್ಞಾನ್ ರೋವರ್ ಸೇರಿ ಎಲ್ಲ ಉಪಕರಣಗಳೂ ಸಂಪರ್ಕದಿಂದ ಕಡಿತಗೊಂಡಿದ್ದವು. ಆದರೆ ಚಂದ್ರನಿಂದ ಸುಮಾರು 100 ಕಿ.ಮೀ. ದೂರದ ಕಕ್ಷೆಯಲ್ಲಿರುವ ಕಕ್ಷೆಗಾಮಿಯು ಸುರಕ್ಷಿತವಾಗಿದ್ದು, ಹೈ ಡೆಫಿನಿಷನ್ ಕ್ಯಾಮರಾ: ಸೇರಿ ಅದರಲ್ಲಿರುವ 8 ಉಪಕರಣಗಳೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 

2022ರ ಪ್ರಥಮ ತ್ರೈಮಾಸಿಕದಲ್ಲಿ ಬಹುಶಃ ಚಂದ್ರಯಾನ-3 ಯೋಜನೆ ಸಾಕಾರವಾಗಲಿದೆ. ಈ ಯೋಜನೆಯಲ್ಲಿ ಚಂದ್ರಯಾನ-2ರ ಎಲ್ಲ ಅಂಶಗಳೂ ಸಮಾನವಾಗಿರಲಿದ್ದು, ಕಕ್ಷೆಗಾಮಿಯನ್ನು ಹೊಂದಿರುವುದಿಲ್ಲ. ಚಂದ್ರಯಾನ-2 ಕಕ್ಷೆಗಾಮಿಯನ್ನೇ ಚಂದ್ರಯಾನ-3 ಬಳಸಿಕೊಳ್ಳಲಿದೆ.

ಚಂದ್ರಯಾನ-2


* ಯೋಜನೆ - ಚಂದ್ರಯಾನ-2
* ಉಡಾವಣಾ ವಾಹನ - ಜಿಎಸ್‌ಎಲ್‌ವಿ ಮಾರ್ಕ್-3
* ಉಡಾವಣಾ ದಿನ - ಜುಲೈ 22, 2019
* ಚಂದ್ರನ ಮೇಲೆ ಲ್ಯಾಂಡ್ ಪ್ರಯತ್ನ - ಸೆ.6, 2019
* ಒಟ್ಟು ಪ್ರಯಾಣ - 47 ದಿನ
* ಚಂದ್ರಯಾನ ತೂಕ – 3,877 ಕೆ.ಜಿ

ಮಹತ್ವದ ದತ್ತಾಂಶ ಬಿಡುಗಡೆ


# ವರ್ಚುವಲ್ ಕಾರ್ಯಕ್ರಮದ ಮೂಲಕ ಶಿವನ್ ಅವರು ಚಂದ್ರಯಾನ-2ರ ಕಕ್ಷೆಗಾಮಿಯಿಂದ ದೊರೆತ ದತ್ತಾಂಶಗಳನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿದರು.  ಚಂದ್ರಯಾನ-2 ರ ಉಪಕರಣಗಳ ದತ್ತಾಂಶ ಹಾಗೂ ವಿಜ್ಞಾನದ ಕೈಪಿಡಿ, 'ಚಂದ್ರಯಾನ-2 ಯೋಜನೆಯ ವಿಜ್ಞಾನ ಫಲಿತಾಂಶಗಳು' ಹಾಗೂ 'ಚಂದ್ರಯಾನ-2 ಕಕ್ಷೆಗಾಮಿಯ ಉಪಕರಣಗಳು ಹಾಗೂ ದತ್ತಾಂಶ ಉತ್ಪನ್ನಗಳು' ಎಂಬ ಮೂರು ದತ್ತಾಂಶಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದರಲ್ಲು ನಿರ್ದಿಷ್ಟ ಕ್ಷೇತ್ರದಲ್ಲಿ ಉಪಕರಣಗಳು ಕೈಗೊಂಡ ಸಂಶೋಧನೆಗಳು, ಅವುಗಳಿಂದ ಲಭಿಸಿದ ದತ್ತಾಂಶಗಳ ಮಾಹಿತಿ ನೀಡಲಾಗಿದೆ.
* ದತ್ತಾಂಶಗಳ ಕುರಿತು ವಿಶ್ಲೇಷಿಸುವ ಸಲುವಾಗಿ ಎರಡು ದಿನದ ವರ್ಚುವಲ್ ಉಪನ್ಯಾಸ ಕಾರ್ಯಕ್ರಮವನ್ನು ಇಸ್ರೋ ಆಯೋಜಿಸಿದೆ. ಚಂದ್ರಯಾನ-2ರ ಯೋಜನಾ ನಿರ್ದೇಶಕಿ ರಿತು ಕರಿದಾಲ್, ಐಐಆರ್‌ಎಸ್‌ ನಿರ್ದೇಶಕ ಪ್ರಕಾಶ್ ಚೌಹಾನ್, ಬೆಂಗಳೂರು ಐಐಎಸ್ಸಿಯ ರಮಾನಂದ ಚಕ್ರವರ್ತಿ ಸೇರಿ ಅನೇಕ ವಿಜ್ಞಾನಿಗಳು, ತಜ್ಞರು ವಿಚಾರ ಮಂಡನೆ ಮಾಡಿದರು.

ISRO:(Indian Space Research Organisation)

* ಸ್ಥಾಪನೆ – 15 ಆಗಸ್ಟ್ 1969
* ಕೇಂದ್ರ ಕಛೇರಿ - ಬೆಂಗಳೂರು
* ಅಧ್ಯಕ್ಷ - ಕೆ. ಶಿವನ್

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Buy Products

Download Edutube Kannada Android App Now

Click Here to Join our Telegram Channel

Important PDF Notes

Search this Blog

Popular Posts

Top Post Ad

Below Post Ad

Ads Area