Most Important Notes

Breaking

Ads

Download Edutube Kannada Android App Now

Click Here to Join our Telegram Channel

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Friday, 17 September 2021

Daily Top-10 General Knowledge Question Answers in Kannada for All Competitive Exams-06

Daily Top-10 General Knowledge Question Answers in Kannada for All Competitive Exams-06


Daily Top-10 General Knowledge Question Answers in Kannada for All Competitive Exams-06

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು"

💥💥💥💥
1. ರೆಗೂರ್ ಮಣ್ಣು ಯಾವ ಬೆಳೆಯ ಕೃಷಿಗೆ ಸೂಕ್ತವಾಗಿದೆ?
ಎ) ತಂಬಾಕು
ಬಿ) ಕಬ್ಬು
ಸಿ) ಕಡಲೆಕಾಯಿ
ಡಿ) ಹತ್ತಿ


ಸರಿಯಾದ ಉತ್ತರ: ಡಿ) ಹತ್ತಿ

ವಿವರಣೆ :

ರೇಗೂರ್ ಮಣ್ಣು ಹತ್ತಿ ಬೆಳೆಯ ಕೃಷಿಗೆ ಸೂಕ್ತವಾಗಿದೆ. ರೇಗೂರ್ ಮಣ್ಣು  ಭಾರತದ ದಕ್ಷಿಣ ಪ್ರಸ್ಥಭೂಮಿ ಪ್ರದೇಶವು ಕಪ್ಪು ಮಣ್ಣಿನ ಹಂಚಿಕೆಯನ್ನು ಹೊಂದಿದೆ. ಈ ಮಣ್ಣು ಪುರಾತನ ಕಾಲದಲ್ಲಿ ಜ್ವಾಲಾಮುಖಿಯಿಂದ ಹೊರಬಂದ ಲಾವಾರಸದಿಂದ ನಿರ್ಮಿತವಾದ ಶಿಲೆಗಳ (ಬಸಾಲ್ಟ್) ಶಿಥಿಲೀಕರಣದಿಂದ ಈ ಮಣ್ಣು ಉಂಟಾಗಿದೆ. ಈ ಮಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದೆ. ಕಪ್ಪು ಮಣ್ಣು ಕಬ್ಬಿಣ ಮತ್ತು ಅಲ್ಯೂಮಿನಿಯಂ ಮಿಶ್ರಣವಾಗಿದೆ. ರೇಗೂರ್ ಮಣ್ಣಿನಲ್ಲಿ ಬೆಳೆಯುವ ಬೆಳೆಗಳು: ಹತ್ತಿ, ಕಬ್ಬು, ಜೋಳ, ಎಣ್ಣೆಕಾಳುಗಳು, ಹೊಗೆಸೊಪ್ಪು, ನಿಂಬೆ & ದ್ರಾಕ್ಷಿ.2. ಪ್ರಪಂಚದಲ್ಲಿ ಪ್ರಸಿದ್ಧವಾದ ಖಜುರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು?
ಎ) ಪ್ರತಿಹಾರರು
ಬಿ) ಪುಷ್ಯಭೂತಿಗಳು
ಸಿ) ಚಂದೇಲರು
ಡಿ) ಪಾಂಡ್ಯರು


ಸರಿಯಾದ ಉತ್ತರ: ಸಿ) ಚಂದೇಲರು

ವಿವರಣೆ :

ಮಧ್ಯಪ್ರದೇಶ ರಾಜ್ಯದ ಚಿತ್ತಾಪುರ ಜಿಲ್ಲೆಯ ಖಜುರಾಹೋ ದೇವಾಲಯನ್ನು ಚಂದೇಲರು ನಿರ್ಮಿಸಿದ್ದರು. ಇದು ಜೈನ ಮತ್ತು ಹಿಂದೂ ದೇವಾಲಯಗಳ ಸಮೂಹ ಸ್ಥಳವಾಗಿದೆ. ಈ ದೇವಾಲಯವು ವಿಶ್ವ ಪಾರಂಪರಿಕ ಪಟ್ಟಿಗೆ ಯುನೆಸ್ಕೋ ಸಂಸ್ಥೆಯಿಂದ 1982ರಲ್ಲಿ ಸೇರ್ಪಡೆಗೊಂಡಿದೆ. ಈ ದೇವಾಲಯವನ್ನು ಡಂಗಾ ರಾಜನು ನಿರ್ಮಿಸಿದನು. ಮಧ್ಯ ಭಾರತದ ಬುಂದೇಲ್ ಖಂಡದ ಮಹೋಬಾ ಎಂಬುದು ಚಂದೇಲರ ರಾಜಧಾನಿಯಾಗಿತ್ತು. ಮಹಾ ರಾಜಾಧಿ ರಾಜಾ ಬಿರುದಾಂಕಿತ ಡಂಗಾ ದೊರೆಯು ಚಂದೇಲರ ಪ್ರಸಿದ್ಧ ದೊರೆಯಾಗಿದ್ದನು. ಚಂದೇಲರ ಮನೆತನದ ಮೇವಾಡದ ಮನೆತನದ ಗುಹಿಲರ ರಾಣಕುಂಭನು ಚಿತ್ತೋಡದ ವಿಜಯ ಸ್ತಂಭವನ್ನು ನಿರ್ಮಿಸಿದ್ದನು.


3. ಈ ಕೆಳಗಿನ ಉರ್ದು ಪಂಡಿತರಲ್ಲಿ ಯಾರನ್ನು ಎರಡನೇ ಮತ್ತು ಮೂರನೇ ದುಂಡುಮೇಜಿನ ಸಮಾವೇಶಕ್ಕೆ/ ಪರಿಷತ್ತಿಗೆ ಆಹ್ವಾನಿಸಲಾಗಿತ್ತು?
ಎ) ಫಯಾಜ್ ಅಹ್ಮದ್ ಫಯಾಜ್
ಬಿ) ಜೋಷ್ ಮಲಿಹಾಬಾದಿ
ಸಿ) ಮೊಹಮ್ಮದ್ ಇಕ್ಬಾಲ್
ಡಿ) ಫಿರಾಮ್ ಗೋರಕ್‌ಪುರಿ


 ಸರಿಯಾದ ಉತ್ತರ: ಸಿ) ಮೊಹಮ್ಮದ್ ಇಕ್ಬಾಲ್

ವಿವರಣೆ :

1930-1932 ರವರೆಗೆ ಲಂಡನ್‌ನಲ್ಲಿ 3 ದುಂಡು ಮೇಜಿನ ಸಭೆಗಳು ಜರುಗಿದವು. 1930 ರ ನವೆಂಬರ್ 12 ರಂದು ಜರುಗಿದ ಮೊದಲ ದುಂಡು ಮೇಜಿನ ಸಭೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಭಾಗವಹಿಸಿರಲಿಲ್ಲ. ಇದರ ಅಧ್ಯಕ್ಷತೆಯನ್ನು ಬ್ರಿಟನ್ ಪ್ರಧಾನಿ ರಾಮ್ಮೆ ಮ್ಯಾಕ್‌ಡೊನಾಲ್ಡ್ ವಹಿಸಿದ್ದರು.

1931ರ ಮಾರ್ಚ್ 5 ರಂದು ಗಾಂಧಿ ಮತ್ತು ಇರ್ವಿನ್ ನಡುವೆ ಒಪ್ಪಂದವೇರ್ಪಟ್ಟಿತ್ತು. ಇದು ದುಂಡು ಮೇಜಿನ ಸಭೆಯ ಉದ್ದೇಶಗಳನ್ನು ಈಡೇರಿಸುವುದಕ್ಕೆ ಸಂಬಂಧಿಸಿತ್ತು.


ಗಾಂಧೀಜಿಯವರು 1931ರ ಸೆಪ್ಟೆಂಬರ್ 7 ರಂದು ನಡೆದ 2 ನೇ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. 1932 ರಲ್ಲಿ ನಡೆದ 3 ನೇ ಮತ್ತು ಅಂತಿಮ ದುಂಡು ಮೇಜಿನ ಸಭೆಯಲ್ಲಿ ಕಾಂಗ್ರೆಸ್ ಮತ್ತು ಇಂಗ್ಲೆಂಡಿನ ಲೇಬರ್ ಪಕ್ಷದ ನಾಯಕರುಗಳು ಭಾಗವಹಿಸಲು ನಿರಾಕರಿಸಿದ್ದರಿಂದ ಸಮ್ಮೇಳನ ವಿಫಲಗೊಂಡಿತು.

3 ನೇ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಗಳೆಂದರೆ: ಡಾ.ಬಿ.ಆರ್.ಅಂಬೇಡ್ಕರ್, ಮೊಹಮ್ಮದ್ ಅಲಿ ಜಿನ್ನಾ, ಕರ್ನಾಟಕದಿಂದ ಸರ್.ಮಿರ್ಜಾ ಇಸ್ಮಾಯಿಲ್.

2ನೇ ಮತ್ತು 3ನೇ ದುಂಡು ಮೇಜಿನ ಸಭೆಯಲ್ಲಿ ಉರ್ದು ಪಂಡಿತ, ಕವಿ ಮೊಹಮ್ಮದ್ ಇಕ್ವಾಲ್ ಅವರನ್ನು ಆಹ್ವಾನಿಸಲಾಗಿತ್ತು. ಇವರು ಮುಸ್ಲಿಂ ಸಮುದಾಯದ ಪ್ರಮುಖ ಪ್ರತಿನಿಧಿಯಾಗಿದ್ದರು.4) ಖಗೋಳ ವಿಜ್ಞಾನದ ಬೈಬಲ್ ಎಂದು ಪರಿಗಣಿಸಲಾಗಿರುವ ಪಂಚಸಿದ್ಧಾಂತಿಕವು ಇವರಿಂದ ರಚಿಸಲ್ಪಟ್ಟಿದೆ
ಎ) ವರಾಹಮಿಹಿರ
ಬಿ) ಆರ್ಯಭಟ್ಟ
ಸಿ) ಸುಶ್ರುತ
ಡಿ) ಧನ್ವಂತರಿ


ಸರಿಯಾದ ಉತ್ತರ: ಎ) ವರಾಹಮಿಹಿರ

ವಿವರಣೆ:

ಖಗೋಳ ವಿಜ್ಞಾನದ ಬೈಬಲ್ ಎಂದು ಪರಿಗಣಿಸಲಾಗಿರುವ ಪಂಚಸಿದ್ಧಾಂತಿಕವು ವರಾಹಮಿಹಿರ ರಚಿಸಲ್ಪಟ್ಟಿದೆ.

ಆರ್ಯಭಟ -  ಆರ್ಯಭಟಿಯನ್, ಆರ್ಯ ಸಿದ್ದಾಂತ

ಸುಶ್ರುತ - ಶುಶ್ರುತ ಸಂಹಿತೆ

ಧನವಂತರಿ - ಇವರನ್ನು  ಭಾರತೀಯ ವೈದ್ಯಶಾಸ್ತ್ರ ಪಿತಾಮಹ ಎನ್ನಲಾಗುತ್ತದೆ

ವಿಶಾಖದತ್ತ - ಮುದ್ರಾರಾಕ್ಷಸ

ಕಲ್ಹಣ - ರಾಜತರಂಗಿಣಿ

ಬಿಲ್ಹಣ - ವಿಕ್ರಮಾಂಕದೇವ ಚರಿತ

ಅಶ್ವಘೋಷ - ಬುದ್ಧಚರಿತ

ಮೆಗಾಸ್ತಾನೀಸ್ - ಇಂಡಿಕಾ

ಹ್ಯೂಯೆನ್ ತ್ಸಾಂಗ್ - ಸಿ.ಯು.ಕಿ

ಫಾಹಿಯಾನ್ - ಘೋ-ಕೋ-ಕಿ

ಬಾಣಭಟ್ಟ - ಹರ್ಷಚರಿತ

ಚಾಂದ್ ಬರ್ದಾಯಿ - ಪೃಥ್ವಿರಾಜ ರಾಸೋ

ಪಾಣಿನಿ - ಮಹಾಭಾಷ್ಯ

ಪತಂಜಲಿ - ಅಷ್ಟಾಂಗಯೋಗ

ಕೌಟಿಲ್ಯ - ಅರ್ಥಶಾಸ್ತ್ರ


5) ಚೇಳಿನಲ್ಲಿ ಉಸಿರಾಟವು ಈ ಮೂಲಕ ?
ಎ) ಶ್ವಾಸಕೋಶಗಳು
ಬಿ) ಕಿವಿರುಗಳು
ಸಿ) ಬುಕ್ ಲಂಗ್
ಡಿ) ಶ್ವಾಸನಾಳ


ಸರಿಯಾದ ಉತ್ತರ: ಸಿ) ಬುಕ್ ಲಂಗ್

ವಿವರಣೆ:

ವಿವರಣೆ: ಚೇಳಿನಲ್ಲಿ ಉಸಿರಾಟವು ಬುಕ್ ಲಂಗ್ಸ್ ಮೂಲಕ ನಡೆಯುತ್ತದೆ.

ವಿವಿಧ ಜೀವಿಗಳ ಉಸಿರಾಟದ ಅಂಗಗಳು

ಮಾನವ (ಶ್ವಾಸಕೋಶ),

ಮೀನು (ಕಿವಿರು),

ಕೀಟ (ಟೇಕಿಯಾ),

ಎರೆಹುಳು (ತೇವಭರಿತ ಚರ್ಮ),

ಕಪ್ಪೆ (ತೇವಭರಿತ ಚರ್ಮ ಮತ್ತು ಶ್ವಾಸಕೋಶ)

ಉಸಿರಾಟದಲ್ಲಿ ಪಾಲ್ಗೊಳ್ಳುವ ಅಂಗವನ್ನು ಶ್ವಾಸಕಾಂಗ ಎನ್ನುವರು.6) ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ?
ಎ) ವೊಲಾರ್ ಸರೋವರ
ಬಿ) ಸುಪೀರಿಯರ್ ಸರೋವರ
ಸಿ) ವಿಕ್ಟೋರಿಯಾ ಸರೋವರ
ಡಿ) ಬೈಕಲ್ ಸರೋವರ


ಸರಿಯಾದ ಉತ್ತರ: ಡಿ) ಬೈಕಲ್ ಸರೋವರ

ವಿವರಣೆ:

ಜಗತ್ತಿನಲ್ಲಿ ಅತೀ ಆಳವಾದ ಸರೋವರ ಬೈಕಲ್ ಸರೋವರ. ಇದು ರಷ್ಯಾ ದೇಶದಲ್ಲಿ ಕಂಡುಬರುತ್ತದೆ. ಫೆಸಿಪಿಕ್ ಸಾಗರದಲ್ಲಿ ಕಂಡುಬರುವ ಚಾಲೆಂಜರ್ ತಗ್ಗು ಪ್ರಪಂಚದಲ್ಲಿ ಅತಿ ಹೆಚ್ಚು ಆಳವಾಗಿರುವ ಸ್ಥಳವಾಗಿದೆ.

ಭಾರತದಲ್ಲಿ ಅತೀ ದೊಡ್ಡ ಉಪ್ಪು ನೀರಿನ ಸರೋವರ: ಚಿಲ್ಕಾ.

ಭಾರತದಲ್ಲಿ ಅತೀ ದೊಡ್ಡ ಸಿಹಿನೀರಿನ ಸರೋವರ: ಉಲ್ಲಾರ್

ಜಗತ್ತಿನ ಏಕೈಕ ತೇಲುವ ಸರೋವರ: ಲೋಕ್ಷಾಕ್

ಏಷ್ಯಾದ ಅತೀ ಎತ್ತರದ ಸರೋವರ: ಮಾನಸ

ಜಗತ್ತಿನ ಅತೀ ಎತ್ತರದ ಸರೋವರ: ಟಿಟಿಕಾಕ

ಸರೋವರಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರವನ್ನು ಲಿಮ್ನೋಲಜಿ ಎನ್ನುವರು.7) ಈ ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದ್ದು ಯಾವುದು?
ಎ) ಕ್ರಿ.ಪೂ. 261 - ಕಳಿಂಗ ಯುದ್ಧ
ಬಿ) ಕ್ರಿ.ಶ. 1526 - ಒಂದನೇ ಪಾಣಿಪತ್ ಯುದ್ಧ
ಸಿ) ಕ್ರಿ.ಶ. 1761 – ಮೂರನೇ ಪಾಣಿಪತ್ ಯುದ್ಧ
ಡಿ) ಕ್ರಿ.ಶ. 1764 – ಪ್ಲಾಸಿ ಯುದ್ಧ


ಸರಿಯಾದ ಉತ್ತರ: ಡಿ) ಕ್ರಿ.ಶ. 1764 – ಪ್ಲಾಸಿ ಯುದ್ಧ

ವಿವರಣೆ:

⏭ ಪ್ಲಾಸಿ ಕದನವು 1757ರ ಜೂನ್ 23 ರಲ್ಲಿ ಸಿರಾಜುದೌಲ್ ಮತ್ತು ರಾಬರ್ಟ್ ಕೈವ್ ನಡುವೆ ಜರುಗಿತು.

⏭ 1526ರ 1ನೇ ಪಾಣಿಪತ್ ಕದನವು ಬಾಬರ್ & ಇಬ್ರಾಹಿಂ ನಡುವೆ ಜರುಗಿತು.

⏭ 1556ರ 2ನೇ ಪಾಣಿಪತ್ ಕದನ ಅಕ್ಟರ್‌ & ಹೇಮು ನಡುವೆ ಹಾಗೂ

⏭ 1761 ರ 3ನೇ ಪಾಣಿಪತ್ ಕದನ ಆಫ್ಘನ್‌ನ ಅಹಮದ್ ಷಾ ಅಬ್ದಾಲಿ & ಮರಾಠರ ನಡುವೆ ಜರುಗಿತು.

⏭ 1764 ರಲ್ಲಿ ಬ್ರಿಟಿಷರು & ಮೀರ್ ಖಾಸಿಂ ನಡುವೆ ಬಕ್ಸಾರ್ ಕದನ ಜರುಗಿತು.

⏭ ಕ್ರಿ.ಪೂ. 261 ರ ಕಳಿಂಗ ಕದನವು ಮೌರ್ಯ ದೊರೆ ಅಶೋಕ ಕಳಿಂಗ ರಾಜ್ಯದ ಅರಸನೊಂದಿಗೆ ಜರುಗಿತು. ಈ ಯುದ್ಧದ ನಂತರ ಅಶೋಕನು ದಿಗ್ವಿಜಯಕ್ಕೆ ಬದಲಾಗಿ 'ಧರ್ಮ ವಿಜಯ' ಎಂಬ ನೀತಿಯನ್ನು ಪಾಲಿಸಿದನು.
 8. ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲ ವಸ್ತು.
ಎ) ಕಾರ್ಬನ್
ಬಿ) ಸಿಲಿಕಾನ್
ಸಿ) ವೆನಡಿಯಂ
ಡಿ) ಚಿನ್ನ


ಸರಿಯಾದ ಉತ್ತರ: ಬಿ) ಸಿಲಿಕಾನ್

ವಿವರಣೆ:

 ಕಂಪ್ಯೂಟರ್ ಚಿಪ್, ಮೆಮೊರಿ ಕಾರ್ಡ್, DVD (Disc), CD (Disc) 7 JOJ JO O TOJI OS ಸಾಮಾನ್ಯವಾಗಿ ಬಳಸುವ ಮೂಲವಸ್ತು ಸಿಲಿಕಾನ್. ಇದೊಂದು ಅರೆವಾಹಕ. ಇದರ ವಾಹಕತ್ವವು ವಾಹಕ ಮತ್ತು ನಿರೋಧಕಗಳ ನಡುವೆ ಇರುತ್ತದೆ. ಸಿಲಿಕಾನ್‌ನ್ನು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಡೈಯೋಡ್, ಟ್ರಾನ್ಸಿಸ್ಟರ್, ಇಂಟಿಗ್ರೇಟೆಡ್ ಚಿಪ್ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.

🏵 ಭಾರತದ ಸಿಲಿಕಾನ್ ಸಿಟಿ - ಬೆಂಗಳೂರು9. ಕೆಳಗಿನವುಗಳಲ್ಲಿ ಯಾವುದನ್ನು ರಕ್ತದ ಒತ್ತಡ ಅಳೆಯಲು ಬಳಸಲಾಗುವುದು?
ಎ) ಸ್ಪಿಗ್ಮೊಮಾನೋಮೀಟರ್
ಬಿ) ಸ್ವಿಗೊಮೀಟರ್
ಸಿ) ಸ್ಟೆತೊಸ್ಕೋಪ್
ಡಿ) ಎಂಡೊಸ್ಕೋಪ್


ಸರಿಯಾದ ಉತ್ತರ: ಎ) ಸ್ಪಿಗ್ಮೊಮಾನೋಮೀಟರ್

ವಿವರಣೆ:

ಸ್ಪಿಗ್ಮೊಮಾನೋಮೀಟರ್ ಮಾನವರ ರಕ್ತದೊತ್ತಡವನ್ನು ಅಳೆಯಲು ಬಳಸುವ ಸಾಧನ. ಆರೋಗ್ಯವಂತ ಮನುಷ್ಯನ ರಕ್ತದೊತ್ತಡ 120/80 ಇದನ್ನು ಸುಮ್ಮೆಲ್ ಸಿಗ್ ಪ್ರೈ‌ಡ್ ಕಾರ್ಲ್ ರಿಟ್ಟರ್ ವಾನ್‌ಬೋಸ್‌ಚ್ 1881 ರಲ್ಲಿ ಕಂಡುಹಿಡಿದನು.


ಸ್ಟೆತೋಸ್ಕೋಪ್‌ನ್ನು ರೇನ್ ಲೆನೆಕ್ ಎಂಬ ವಿಜ್ಞಾನಿ ಕಂಡುಹಿಡಿದನು. ಇದನ್ನು ಹೃದಯದ ಬಡಿತ ಪರೀಕ್ಷಿಸಲು ಉಪಯೋಗಿಸುತ್ತಾರೆ.


ಎಂಡೋಸ್ಕೋಪಿ ಎನ್ನುವುದು ಮಾನವನ ಜೀರ್ಣಾಂಗವ್ಯೂಹದ ಒಳಚಿತ್ರಣ ಪಡೆಯಲು, ಹಾಗೂ ವೀಕ್ಷಿಸಲು ಬಳಸುವ ಒಂದು ಸಾಧನವಾಗಿದೆ.
10. ಭಾರತದಲ್ಲಿ ಮುದ್ರಣ ಮಾಧ್ಯಮವನ್ನು ನಿಯಂತ್ರದಲ್ಲಿಡುವ ಪರಮೋಚ್ಚ ಸಂಸ್ಥೆ
ಎ) ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಇನ್ ಇಂಡಿಯಾ,
ಬಿ) ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ
ಸಿ) ಪ್ರೆಸ್ ಇನ್‌ಫರ್ಮೇಷನ್ ಬ್ಯೂರೊ
ಡಿ) ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ


ಸರಿಯಾದ ಉತ್ತರ: ಎ) ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಇನ್ ಇಂಡಿಯಾ

ವಿವರಣೆ:

ಭಾರತದಲ್ಲಿ ಮುದ್ರಣ ಮಾಧ್ಯಮವನ್ನು ನಿಯಂತ್ರಣದಲ್ಲಿಡುವ ಪರಮೋಚ್ಛ ಸಂಸ್ಥೆ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ ಇನ್ ಇಂಡಿಯಾ. RNI-1956ರ ಜುಲೈ 1 ರಂದು ಭಾರತ ಸರ್ಕಾರದ ಅಧಿಕೃತ ಸಂಸ್ಥೆಯಾಗಿ ಪ್ರಾರಂಭವಾಯಿತು. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದ್ದು, ಶಾಖಾ ಕಚೇರಿಗಳು ಮುಂಬೈ, ಕೊಲ್ಕತ್ತ, ಚೆನ್ನೈಗಳಲ್ಲಿದೆ. ಭಾರತದಲ್ಲಿ ಪ್ರಸಾರವಾಗುವ ಎಲ್ಲಾ ದಿನಪತ್ರಿಕೆ, ನಿಯತಕಾಲಿಕೆಗಳು ಇದರ ನಿಯಂತ್ರಣದ ಅಡಿ ಬರುತ್ತವೆ.

No comments:

Post a Comment

If you have any doubts please let me know

Popular Posts

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Buy Products

Most Useful Notes

Edutube Kannada ವಿಶೇಷ ಪಿಡಿಎಫ್‍ಗಳು ಈಗಲೇ ಡೌನ್‍ಲೋಡ್ ಮಾಡಿಕೊಳ್ಳಿ

Edutube Kannada ವಿಶೇಷ ಪಿಡಿಎಫ್‍ಗಳು ಈಗಲೇ ಡೌನ್‍ಲೋಡ್ ಮಾಡಿಕೊಳ್ಳಿ
ಡಾ|| ಕೆ. ಎಮ್. ಸುರೇಶ ಅವರ ಎಫ್‍ಡಿಎ ಎಸ್‍ಡಿಎ ಪ್ರಶ್ನೋತ್ತರ ಮಾಲಿಕೆ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೆಪಿಎಸ್‍ಸಿ ನಡೆಸಿದ ಎಲ್ಲ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ 4590 ಪುಟಗಳ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಶಿಕ್ಷಕರ ನೇಮಕಾತಿ ಪರೀಕ್ಷೆಯ ಸಮಗ್ರ ಕೈಪಿಡಿ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ಭೂಗೋಳ ಪುಸ್ತಕದ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾಶಾರದೆ ಐಎಎಸ್/ಕೆಎಎಸ್ ಸಮಗ್ರ ಕೈಪಿಡಿಯ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಸಾಹಿತಿಗಳ ಪರಿಚಯದ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
4ಜಿ ಸೈನ್ಸ್ ಪುಸ್ತಕ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಐಎಎಸ್ ಅಕ್ಯಾಡೆಮಿಯವರ ಪಿಡಿಎಫ್ ನೋಟ್ಸ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಚಿರಂತನ ಸಮಗ್ರ ಭಾರತದ ಇತಿಹಾಸ ಐಎಎಸ್ ಕೆಎಎಸ್ ಇತಿಹಾಸ ಸಂಪೂರ್ಣ ಪಿಡಿಎಫ್ ಪುಸ್ತಕ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Recent Posts

Useful PDF Notes

Important PDF Notes

Ads