Top-10 Geography Question Answers in Kannada for All Competitive Exams-01

Top-10 Geography Question Answers in Kannada for All Competitive Exams-01


Top-10 Geography Question Answers in Kannada for All Competitive Exams-01💥💥💥💥
1. ಉಲ್ಕೆ ಎಂದರೆ
ಎ) ವೇಗವಾಗಿ ಚಲಿಸುತ್ತಿರುವ ನಕ್ಷತ್ರ
ಬಿ) ಬಾಹ್ಯಕಾಶದಿಂದ ಭೂಮಿಯ ವಾತಾವರಣ ಪ್ರವೇಶಿಸುವ ಆಕಾಶ ಕಾಯಗಳ ಪದಾರ್ಥ
ಸಿ) ಆಕಾಶಕಾಯಗಳ ಒಂದು ಭಾಗ 
ಡಿ) ಬಾಲವಿಲ್ಲದ ಧೂಮಕೇತು


ಸರಿಯಾದ ಉತ್ತರ : ಬಿ) ಬಾಹ್ಯಕಾಶದಿಂದ ಭೂಮಿಯ ವಾತಾವರಣ ಪ್ರವೇಶಿಸುವ ಆಕಾಶ ಕಾಯಗಳ ಪದಾರ್ಥ 

ವಿವರಣೆ : ಉಲ್ಕೆಗಳು (Meteors) ಆಕಾಶದಿಂದ ರಾತ್ರಿ ವೇಳೆಯಲ್ಲಿ ವಾಯುಮಂಡಲದ ಮೂಲಕ ಭೂಮಿಯ ಕಡೆಗೆ ಪ್ರಜ್ವಲಿಸುತ್ತಾ ಬೀಳುವ ತುಣುಕು ವಸ್ತುಗಳಿಗೆ “ಉಲ್ಕೆಗಳು” ಎಂದು ಕರೆಯುವರು. ಇವುಗಳನ್ನು ಸಾಮಾನ್ಯವಾಗಿ ಬೀಳುವ ನಕ್ಷತ್ರಗಳು ಎಂದು ಸಹ ಕರೆಯುವರು. ಸೌರವ್ಯೂಹವು ಗಾತ್ರದಲ್ಲಿ ಚಿಕ್ಕದಾದ ಅಸಂಖ್ಯಾತ ಘನ ವಸ್ತುಗಳನ್ನು ಹೊಂದಿದೆ. ಇವು ಭೂಮಿಯ ಗುರುತ್ವಾಕರ್ಷಣೆಯಿಂದ ಭೂಮಿಯ ಕಡೆಗೆ ವೇಗವಾಗಿ ಸಾಗುತ್ತವೆ. ಹೀಗೆ ವಾಯು ಮಂಡಲದ ಮೂಲಕ ಹಾಯ್ದು ಬರುವಾಗ ಅದರೊಂದಿಗೆ ಘರ್ಷಿಸಿ ಉರಿಯತೊಡಗುತ್ತವೆ. ಇವುಗಳಲ್ಲಿ ಬಹಳಷ್ಟು ಭೂಮಿಯನ್ನು ತಲುಪುವ ಮೊದಲೇ ಪ್ರಜ್ವಲಿಸುತ್ತಾ ಭಸ್ಮವಾಗುತ್ತವೆ.2. ಗ್ರಾನೈಟ್ ಯಾವ ರೂಪದ ಕಲ್ಲು?
ಎ) ರೂಪಾಂತರ ಶಿಲೆ 
ಬಿ) ಸಂಚಿತೆ ಶಿಲೆ 
ಸಿ) ಅಗ್ನಿ ಶಿಲೆ 
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ : ಸಿ) ಅಗ್ನಿ ಶಿಲೆ

ವಿವರಣೆ : ಅಗ್ನಿಶಿಲೆಗಳು ಶಿಲಾಪಾಕವು ಭೂಮಿಯ ವಿವಿಧ ಸ್ಥಳಗಳಲ್ಲಿ ಘನೀಭವಿಸುವುದರಿಂದ ನಿರ್ಮಿತವಾಗಿವೆ. ಅಲ್ಲದೆ ಶಿಲಾಪಾಕವೂ ಸಹ ರಾಸಾಯನಿಕ ಸಂಯೋಜನೆಯಲ್ಲಿ ವ್ಯತ್ಯಾಸದಿಂದ ಕೂಡಿದ್ದು ಅದರಿಂದ ಉಂಟಾಗುವ ಶಿಲೆಗಳೂ ಸಹ ಭಿನ್ನವಾಗಿರುತ್ತವೆ. ಇದರಿಂದ ಅಗ್ನಿಶಿಲೆಗಳನ್ನು ಅವುಗಳ ರಾಸಾಯನಿಕ ಸಂಯೋಜನೆ ಹಾಗೂ ಗುಣಲಕ್ಷಣಗಳ ಆಧಾರದ ಹಲವು ವಿಧಗಳಾಗಿ ವಿಂಗಡಿಸಲಾಗಿದೆ.

ಅಂತಸ್ಸರಣ ಅಥವಾ ಅಂತರಾಗ್ನಿ ಶಿಲೆಗಳು (Intrusive or Plutonic Igneous Rocks) : ಅಂತರಾಗ್ನಿ ಶಿಲೆಗಳನ್ನು ಆಂಗ್ಲ ಭಾಷೆಯಲ್ಲಿ 'ಪ್ಲುಟಾನಿಕ್' ಅಗ್ನಿಶಿಲೆಗಳೆಂದು ಕರೆದಿರುವರು. ಪ್ಲುಟಾನಿಕ್ ಎಂಬುದು ಗ್ರೀಕ್ ಭಾಷೆಯಿಂದ ಬಂದಿದ್ದು ಇದು ಗ್ರೀಕರ ಭೂ ಅಂತರಾಳದ ದೇವರ ಹೆಸರು. ಅಂತರಾಗ್ನಿ ಶಿಲೆಗಳನ್ನು ಅಂತಸ್ಸರಣ ಅಗ್ನಿಶಿಲೆ (Intrusive igneous rocks) ಗಳೆಂದೂ ಸಹ ಕರೆಯುವರು. ಇದಕ್ಕೆ ಕಾರಣ, ಭೂಮಿಯ ಅತಿ ಆಳದಲ್ಲಿ ಶಿಲಾರಸವು ಘನೀಭವಿಸಿ ಈ ಶಿಲೆಗಳು ನಿರ್ಮಿತಗೊಂಡಿವೆ. ಶಿಲಾರಸವು ಬಹು ನಿಧಾನವಾಗಿ ಘನೀಭವಿಸಿರುವುದರಿಂದ ಇವುಗಳಲ್ಲಿ ಹರಳುಗಳು ಸ್ಪಷ್ಟವಾಗಿ ಕಂಡುಬರುತ್ತವೆ. ಇದರಿಂದಾಗಿ ಅಂತರಾಗ್ನಿ ಶಿಲೆಗಳನ್ನು 'ಹರಳು ಶಿಲೆ' ಗಳೆಂತಲೂ ಸಹ ಕರೆಯುವರು. ಗ್ರಾನೈಟ್, ಗ್ಯಾಬೊ, ಡಿಯೊರೈಟ್ ಹಾಗೂ ಪೆರಿಡೂಟೈಟ್ ಈ ರೀತಿಯ ಅಗ್ನಿ ಶಿಲೆಗಳಿಗೆ ಮುಖ್ಯ ಉದಾಹರಣೆಗಳು.3. ಡೊಲೊಮೈಟ್ ಎನ್ನುವುದು
ಎ) ರೂಪಾಂತರ ಶಿಲೆಯಾಗಿದೆ
ಬಿ) ಅಗ್ನಿ ಶಿಲೆಯಾಗಿದೆ
ಸಿ) ಜಲಜ ಶಿಲೆಯಾಗಿದೆ
ಡಿ) ಮೇಲಿನ ಯಾವುದೂ ಅಲ್ಲ


 ಸರಿಯಾದ ಉತ್ತರ : ಸಿ) ಜಲಜ ಶಿಲೆಯಾಗಿದೆ

ವಿವರಣೆ :  ಪದರು ಶಿಲೆಗಳನ್ನು (ಜಲಜ ಶಿಲೆಗಳು) ಅವುಗಳ ಉತ್ಪತ್ತಿಯ ಆಧಾರದ ಮೇಲೆ ಹಲವಾರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ರಾಸಾಯನಿಕ ಕ್ರಿಯೆಗಳಿಂದ ನಿರ್ಮಿತವಾದ ಶಿಲೆಗಳು ಒಂದು. ಸಾಗರ, ಸಮುದ್ರ, ಸರೋವರಗಳ ನೀರಿನಲ್ಲಿ ವಿವಿಧ ಲವಣಗಳು ಕರಗಿ ದ್ರಾವಣ ರೂಪದಲ್ಲಿ ನೀರಿನಲ್ಲಿ ವಿಲೀನಗೊಂಡಿರುತ್ತವೆ. ಕೆಲವು ಜಲಭಾಗಗಳು ಉಷ್ಣಾಂಶದ ಪರಿಣಾಮವಾಗಿ ಬತ್ತಿಹೋಗಿ ನೀರಿನಲ್ಲಿ ಕರಗಿದ್ದ ಲವಣಗಳು ಜಲಭಾಗಗಳ ಪಾತ್ರಗಳಲ್ಲಿ ಸಂಚಯಿತಗೊಳ್ಳುತ್ತವೆ. ಅವು ಕ್ರಮೇಣ ಮರಳು, ರೇವೆ ಹಾಗೂ ಮಣ್ಣಿನ ಕಣಗಳೊಂದಿಗೆ ಒಟ್ಟುಗೂಡಿ ಶಿಲೆಯಾಗಿ ಪರಿಣಮಿಸುತ್ತವೆ. ಅಲ್ಲದೆ ಕೆಲವು ಚಿಲುಮೆಗಳಲ್ಲಿ ಲವಣ ಹಾಗೂ ಖನಿಜಗಳು ಕರಗಿರುವ ನೀರು ಹೊರಹೊಮ್ಮುವುದು. ನಂತರ ನೀರು ಆವಿಯಾಗಿ ಲವಣ ಹಾಗೂ ಖನಿಜಗಳು ಶೇಖರಗೊಂಡು ಶಿಲೆಗಳು ನಿರ್ಮಿತವಾಗುತ್ತವೆ. ಉದಾಹರಣೆಗೆ ಸುಣ್ಣದ ಕಲ್ಲು, ಡೋಲೋಮೈಟ್, ಜಿಪ್ಪಂ ಇತ್ಯಾದಿ.
4. ನಾಗರಹೊಳೆ ಪಾರ್ಕ್ ಈ ಜಿಲ್ಲೆಯಲ್ಲಿದೆ
ಎ) ಮೈಸೂರು 
ಬಿ) ಕಾರವಾರ
ಸಿ) ಮಂಡ್ಯ 
ಡಿ) ಕೊಡಗು


ಸರಿಯಾದ ಉತ್ತರ : ಎ) ಮೈಸೂರು

ವಿವರಣೆ :  ನಾಗರಹೊಳೆ/ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನ : ಇದು ರಾಜ್ಯದ ಅತ್ಯಂತ ಹೆಸರುವಾಸಿಯಾದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದ್ದು ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ವಿಸ್ತಸಿರುವುದು. ಇದು 1988 ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದೂ 1999 ರಲ್ಲಿ ದೇಶದ 7 ನೇ “ಟೈಗರ್ ರಿಸರ್ವ್” ವಲಯವೆಂದು ಪರಿಗಣಿಸಲ್ಪಟ್ಟಿದೆ.5. ಕರ್ನಾಟಕದ ಹೆಸರಾಂತ ಪಕ್ಷಿಧಾಮ ಇರುವ ಸ್ಥಳ 
ಎ) ಭಂಡೀಪುರ 
ಬಿ) ಶಿವಮೊಗ್ಗ 
ಸಿ) ಮೈಸೂರು 
ಡಿ) ರಂಗನತಿಟ್ಟು


ಸರಿಯಾದ ಉತ್ತರ : ಡಿ) ರಂಗನತಿಟ್ಟು

ವಿವರಣೆ : ರಂಗನತಿಟ್ಟು ಪಕ್ಷಿಧಾಮವನ್ನು ಕರ್ನಾಟಕದ ಪಕ್ಷಿ ಕಾಶಿ ಎಂದೂ ಕರೆಯುತ್ತಾರೆ, ಇದು ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಕ್ಷಿಧಾಮವಾಗಿದೆ. ಇದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ, ಕಾವೇರಿ ನದಿಗೆ ಅಡ್ಡಲಾಗಿ 1645 ಮತ್ತು 1648 ರ ನಡುವೆ ಅಂದಿನ ಮೈಸೂರು ರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು ನಿರ್ಮಿಸಿದಾಗ ರಂಗನತಿಟ್ಟು ದ್ವೀಪಗಳು ರೂಪುಗೊಂಡವು. ಪಕ್ಷಿವಿಜ್ಞಾನಿ ಸಲೀಮ್ ಅಲಿ ಈ ದ್ವೀಪಗಳು ಒಂದು ದೊಡ್ಡ ವೈವಿಧ್ಯಮಯ ಪಕ್ಷಿಗಳಿಗೆ ಒಂದು ಪ್ರಮುಖ ಗೂಡುಕಟ್ಟುವ ನೆಲವನ್ನು ರೂಪಿಸಿವೆ ಮತ್ತು 1940 ರಲ್ಲಿ ಮೈಸೂರು ರಾಜರನ್ನೂ ಈ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಮನವೊಲಿಸಿದರು.6. "ನೀಲಗಿರಿ ಬೆಟ್ಟಗಳಲ್ಲಿ ಕಾಣದ ಜನಾಂಗ ಯಾವುದು?
ಎ) ತೋಡ
ಬಿ) ಕೋಟ
ಸಿ) ಬಡಗ
ಡಿ) ಇರುಳಿಗ


ಸರಿಯಾದ ಉತ್ತರ : ಡಿ) ಇರುಳಿಗ

ವಿವರಣೆ:- నిలగిరి ಬೆಟ್ಟಗಳಲ್ಲಿ ತೋಡ. ಕೋಟ, ಬಡಗ. ಇರುಳ, ಕುರುಂಬ, ನಾಯಕ, ಮುಂತಾದ ಜನಾಂಗದವರು ವಾಸಿಸುತ್ತಾರೆ. ಇಲ್ಲಿ ಇರುಳಿಗ ಜನಾಂಗವು ವಾಸಿಸುವುದಿಲ್ಲ. ನೀಲಗಿರಿ ಬೆಟ್ಟಗಳು ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಸಂಧಿಸುವ ಸ್ಥಳವಾಗಿರುತ್ತದೆ. ಇವು ತಮಿಳುನಾಡಿನ ಪಶ್ಚಿಮ ಭಾಗದ ಪಶ್ಚಿಮ ಘಟ್ಟಗಳ ಭಾಗ, ಈ ಬೆಟ್ಟಗಳ ಸಾಲಿನಲ್ಲಿ ಅತ್ಯಂತ ಎತ್ತರವಾದ ಸ್ಥಳ ದೊಡ್ಡ ಬೆಟ್ಟ.

ಭಾರತದ ಪ್ರಮುಖ ರಾಜ್ಯಗಳು ಮತ್ತು ಜನಾಂಗ

+ ಆಂಧ್ರಪ್ರದೇಶ: ಆಂದ್, ಭಾಗತ, ಬಿಲ್, ಚಿಂಚೂಸ್, ಗಡಬಾಸ್, ಕಮ್ಮಾರ, ಕೋಲ್ವಾರ್, ಕೋಲಂ, ತೋಟಿ.

+ ಅಸ್ಸಾಂ: ಚಕ್ಕಾ, ಚುಟಿಯಾ, ಬಿಮಾಸಾ, ಖಾಸಿ,

+ ಬಿಹಾರ: ಸಂತಾಲ, ಅಸೂರ್, ಬೈಗ, ಚೇರೋ, ಸವಾರ.

+ ಗೋವಾ:- ದೋಡಿಯ, ದುಬಿಯ, ಸಿದ್ಧಿ, ವಗ್ಗಿ,

+ ಗುಜರಾತ್, ಭಾದಾ, ಪಟೇಲಿಯಾ, ಪರೆದಿ.

+ ಜಮ್ಮು-ಕಾಶ್ಮೀರ: ಬಕರ್ವಾಲ್, ಮೊನ್.

+ ಕರ್ನಾಟಕ: ಆದಿಯಾನ್, ಬಾರ್ದಾ, ಇರುಳಿಗ, ಕೊರಗ, ಪಟೇಲಿಯಾ, ಎರವ. ಮೋಪ್ಲಾ, ಆದಿಯಾನ್, ಇಲ್ವಲನ್, ಕುರುಂಬಾಸ್, ಉರುಲಿಸ್,

+ ಮಧ್ಯಪ್ರದೇಶ: ಬೈಗ, ಬಿಲ್ಸ್, ಬಾರಿಯ, ಬೋಂಡ, ಮುರಿಯಾಸ್,

+ ಮಹಾರಾಷ್ಟ್ರ: ಬೈನಾ, ಬುಂಜಿಯಾ, ದೊಡಿಯಾ, ಕಟ್ಕರಿ.
7. ಕೃಷ್ಣಾ ಮೇಲ್ದಂಡೆ ಯೋಜನೆಯು ಈ ಜಿಲ್ಲೆಗಳಿಗೆ ನೀರೊದಗಿಸುತ್ತದೆ.
ಎ) ಬಳ್ಳಾರಿ & ಬೀದರ್
ಬಿ) ಬೆಳಗಾವಿ & ಉತ್ತರ ಕನ್ನಡ
ಸಿ) ಶಿವಮೊಗ್ಗ & ಚಿತ್ರದುರ್ಗ
ಡಿ) ಬಿಜಾಪುರ, ಗುಲ್ಬರ್ಗ & ರಾಯಚೂರು.


ಸರಿಯಾದ ಉತ್ತರ : ಡಿ) ಬಿಜಾಪುರ, ಗುಲ್ಬರ್ಗ & ರಾಯಚೂರು

ವಿವರಣೆ: ಕೃಷ್ಣಾ ಮೇಲ್ದಂಡೆ ಯೋಜನೆಯು ಬಿಜಾಪುರ

ಗುಲ್ಬರ್ಗ, ರಾಯಚೂರು ಜಿಲ್ಲೆಗೆ ನೀರಾವರಿ ಸೌಲಭ್ಯ ಪೂರೈಸುತ್ತದೆ. ಆಲಮಟ್ಟಿ ಅಣೆಕಟ್ಟನ್ನು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಅಣೆಕಟ್ಟಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಅಥವಾ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು ಎನ್ನಲಾಗಿದೆ. ಕೃಷ್ಣಾ ನದಿಯ ಉಪ ನದಿಯಾದ ತುಂಗಭದ್ರಾ ನದಿಗೆ ಅಡ್ಡಲಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದಕ್ಕೆ ಪಂಪಸಾಗರ ಜಲಾಶಯ ಎನ್ನಲಾಗಿದೆ. ಕರ್ನಾಟಕದ ಅತಿ ದೊಡ್ಡ ಯೋಜನೆಯಾದ ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜಂಟಿ ಯೋಜನೆಯಾಗಿದೆ.
 8. ವಾಣಿವಿಲಾಸ ಸಾಗರ ವಿವಿಧೋದ್ದೇಶ ಯೋಜನೆಯನ್ನು ನಿರ್ಮಾಣ ಮಾಡಿರುವುದು ಈ ನದಿಯ ಮೇಲೆ 
ಎ) ಭದ್ರಾ
ಬಿ) ವೇದಾವತಿ
ಸಿ) ಮಲಪ್ರಭಾ
ಡಿ) ಹೇಮಾವತಿ


ಸರಿಯಾದ ಉತ್ತರ: ಬಿ) ವೇದಾವತಿ

ವಿವರಣೆ: ಕೃಷ್ಣಾ ನದಿಯು ದಖನ್ ಪ್ರಸ್ಥಭೂಮಿಯ 2ನೇ ಅತ್ಯಂತ ದೊಡ್ಡ ನದಿಯಾಗಿದ್ದು, ಇದರ ಉಪನದಿಗಳು: ಭೀಮಾ, ಮಲಪ್ರಭ, ಘಟಪ್ರಭ, ತುಂಗಭದ್ರಾ, ದೋಣಿ (ವಿಜಯಪುರ ಪಂಚನದಿಗಳ ನಾಡು) ವೇದಾವತಿ ನದಿಯು ತುಂಗಭದ್ರಾ ನದಿಯ ಒಂದು ಉಪನದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಗಳ ಪೂರ್ವ ಭಾಗದಲ್ಲಿ ಹುಟ್ಟಿದ ವೇದ ಮತ್ತು ಆವತಿ ಎಂಬೆರಡು ನದಿಗಳು ಸೇರಿ ವೇದಾವತಿ ನದಿಯಾಗಿದೆ. ಈ ನದಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಮಾರಿಕಣಿವೆ ಜಲಾಶಯ ಅಥವಾ ವಾಣಿವಿಲಾಸ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟು ಕರ್ನಾಟಕದ ಮೊದಲ ಬೃಹತ್ ಅಣೆಕಟ್ಟು. 1897ರಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಕಿರಿಯ ಮಗಳಾದ ವಾಣಿವಿಲಾಸ ಅವರ ಹೆಸರಿನಲ್ಲಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದು 1933 ರಲ್ಲಿ ಉದ್ಘಾಟನೆಯಾಗಿದ್ದು, ಸರ್.ಎಂ.ವಿ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಾಣಗೊಂಡಿದೆ. ವಿಶೇಷತೆ: ಈ ಅಣೆಕಟ್ಟೆಯನ್ನು ಒಂದು ಬದಿಯಿಂದ ನೋಡಿದಾಗ ಭಾರತದ ಭೂಪಟದಂತೆ ಕಾಣುತ್ತದೆ.

• ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಕಾವೇರಿ ನದಿಯು ಕರ್ನಾಟಕ, ತಮಿಳುನಾಡು ರಾಜ್ಯಗಳ ಜೀವನದಿ ಎನಿಸಿದ್ದು, ಕಾವೇರಿ ನದಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ಮತ್ತು ತಮಿಳುನಾಡಿನಲ್ಲಿ ಮೆಟ್ಟೂರು ಆಣೆಕಟ್ಟು ನಿರ್ಮಿಸಲಾಗಿದೆ‌. 
9. ಬರಿಕಣ್ಣಿಗೆ ಕಾಣುವ ಸಮೀಪದ ನಕ್ಷತ್ರ (ಸೂರ್ಯನಲ್ಲದ್ದು)
ಎ) ಪ್ರಾಕ್ಸಿಮಾ ಸೆಂಟಾರಿ
ಬಿ) ಆಲ್ಫಾ ಸೆಂಟಾರಿ
ಸಿ) ಧ್ರುವ ನಕ್ಷತ್ರ
ಡಿ) ವೇಗ 


ಸರಿಯಾದ ಉತ್ತರ : ಬಿ) ಆಲ್ಫಾ ಸೆಂಟಾರಿ

ವಿವರಣೆ: ಬರಿಕಣ್ಣಿಗೆ ಕಾಣುವ (ಸೂರ್ಯನಲ್ಲದ್ದು) ಆಲ್ಪಾ ಸೆಂಟಾರಿ. ಇದು ಸೌರವ್ಯೂಹದಿಂದ 4.37 ಜ್ಯೋತಿರ್ವರ್ಷ ಗಳಷ್ಟು ದೂರದಲ್ಲಿದೆ. ಸೂರ್ಯನಿಗೆ ಹತ್ತಿರದ ನಕ್ಷತ್ರ ಪ್ರಾಕ್ಸಿಮಾ ಸೆಂಟಾರಿ, ಪ್ರಾಕ್ಸಿಮಾ ಸೆಂಟಾರಿಯು ಸೂರ್ಯನಿಂದ 4.25 ಜ್ಯೋತಿರ್ವರ್ಷ ಗಳಷ್ಟು ದೂರವಿದ್ದು, ಇದನ್ನು ಆಲ್ಫಾ ಸೆಂಟಾರಿ-ಸಿ ಎಂದು ಕೂಡ ಕರೆಯುತ್ತಾರೆ.


ಇನ್ನಿತರ ಮಹತ್ವದ ಮಾಹಿತಿ 

+ ಸಿರಿಯಸ್ ಎಂಬುದು ಅತ್ಯಂತ ಹೆಚ್ಚು ಪ್ರಕಾಶಮಾನವಾದ ನಕ್ಷತ್ರವಾಗಿದೆ.

+ ಹತ್ತಿರದ ಗ್ಯಾಲಾಕ್ಸಿ ಆಂಡ್ರೊಮೆಡ, ಸೂರ್ಯನಿರುವ

+ ಗ್ಯಾಲಕ್ಸಿಗೆ ಹತ್ತಿರದಲ್ಲಿರುವ ಜ್ಯೋತಿರ್ಮೇಘ ಒರಿಯಾನ್. 

+ ಭೂಮಿಗೆ ಉತ್ತರ ಕಂಡುಬರುವ ಸಮೀಪದ ನಕ್ಷತ್ರ - ಧ್ರುವ ನಕ್ಷತ್ರ,

+ ವೇಗ ಎಂದರೆ - ಒಂದು ವಸ್ತುವಿಗೆ ಗೊತ್ತಾದ ಚೌಕಟ್ಟಿನೊಳಗೆ ಆದ ಸ್ಥಾನಪಲ್ಲಟ ದರ.
10. ಈ ಕೆಳಗಿನ ಯಾವ ದೇಶದಲ್ಲಿ ಫ್ಯುಜಿ ಪರ್ವತ ಇದೆ?
ಎ) ಚೀನಾ
ಬಿ) ಇಂಡೋನೇಷ್ಯಾ
ಸಿ) ಕೊರಿಯಾ
ಡಿ) ಜಪಾನ್


ಸರಿಯಾದ ಉತ್ತರ: ಡಿ) ಜಪಾನ್

ವಿವರಣೆ : + ಜಪಾನ್‌ನಲ್ಲಿ ಫ್ಯೂಜಿಯಾಮ ಜ್ವಾಲಾಮುಖಿಯನ್ನು ದೇವತೆ ಎಂದು ಪೂಜಿಸುತ್ತಾರೆ.

+ ದಕ್ಷಿಣ ಅಮೆರಿಕದ ಆಂಡೀಸ್ ಪರ್ವದಲ್ಲಿ ಬರುವ ಕೊಟಪಾಕ್ಷಿಯು ಎತ್ತರದ ಜ್ವಾಲಾಮುಖಿ ಪರ್ವತವಾಗಿದೆ.

+ ಸೆಂಟ್ ಹೆಲನ್ ಜ್ವಾಲಾಮುಖಿಯು ಉತ್ತರ ಅಮೆರಿಕದಲ್ಲಿ ಕಂಡು ಬರುವ ಜ್ವಾಲಾಮುಖಿಯಾಗಿದೆ.

+ ಭಾರತದಲ್ಲಿ ಅಂಡಮಾನ್-ನಿಕೋಬಾರ್ ದ್ವೀಪದ ಬ್ಯಾರನ್‌ನಲ್ಲಿ ಜಾಗೃತ ಜ್ವಾಲಾಮುಖಿ ಕಂಡು ಬರುತ್ತದೆ.

+ ಇಟಲಿಯ ಎಟ್ನಾ, ಸ್ಟ್ರಾಂಬೋಲಿ, ವೆಸುವಿಯಸ್ ಎಂಬ ಜಾಗೃತ ಜ್ವಾಲಾಮುಖಿ ಕಂಡು ಬರುತ್ತವೆ.

Post a Comment

2 Comments
* Please Don't Spam Here. All the Comments are Reviewed by Admin.
  1. Replies
    1. ಧನ್ಯವಾದಗಳು. ಇದೇ ರೀತಿಯ ಹೆಚ್ಚಿನ ಪ್ರಶ್ನೋತ್ತರಗಳಿಗಾಗಿ ನಮ್ಮ ಜಾಲತಾಣಕ್ಕೆ ದಿನವೂ ಭೇಟಿ ನೀಡಿ

      Delete

If you have any doubts please let me know

Buy Products

Buy Products

Download Edutube Kannada Android App Now

Click Here to Join our Telegram Channel

Important PDF Notes

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Search this Blog

Popular Posts

Top Post Ad

Below Post Ad

Ads Area