Most Important Notes

Breaking

Ads

Download Edutube Kannada Android App Now

Click Here to Join our Telegram Channel

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday, 26 September 2021

Top-100 General Knowledge (GK) Question Answers in Kannada for All Competitive Exams-04

Top-100 General Knowledge (GK) Question Answers in  Kannada for All Competitive Exams-04

Top-100 General Knowledge (GK) Question Answers in  Kannada for All Competitive Exams-02

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-100 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Graduate Primary School Teachers Recruitment (GPSTR), and All Competitive Exams.
Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1. ಹರಪ್ಪಾ ನಾಗರಿಕತೆಯ ನಿವೇಶನದಲ್ಲಿ ಒಂದೇ ಸಮಾಧಿಯಲ್ಲಿ ಜೋಡಿ ಶವ ಕಂಡು ಬಂದ ನಗರ ಯಾವುದು ?
ಎ) ಕಾಲಿಬಂಗಾನ್
ಬಿ) ಲೋಥಾಲ್
ಸಿ) ಧೋಲವೀರ
ಡಿ) ರಂಗಪೂರ


ಸರಿಯಾದ ಉತ್ತರ: ಬಿ) ಲೋಥಾಲ್


ವಿವರಣೆ:

⏭ ಲೋಥಾಲ್ ಗುಜರಾತ್‌ನ ಅಹ್ಮದಾಬಾದ್‌ನ ನೈರುತ್ಯಕ್ಕೆ 80 ಕಿ.ಮೀ ದೂರದಲ್ಲಿ 'ಬೋಗಾವೋ ನದಿ' ಹತ್ತಿರ ಇದೆ.

⏭ ಎಸ್.ಆರ್.ರಾವ್‌ರವರು 1959 ರಿಂದ 1962 ರವರೆಗೂ ಇಲ್ಲಿ ಸಂಶೋಧನೆ ಕೈಗೊಂಡಿದ್ದರು.

⏭ ಇದೊಂದು ಹೆಸರಾಂತ 'ಬಂದರು' ಆಗಿತ್ತು.

⏭ ಇದು ಗುಜರಾತಿನ ಕ್ಯಾಂಬೆ ತೀರದಲ್ಲಿದೆ. ಇಲ್ಲಿ ಅಗ್ನಿಕುಂಡಗಳು, ಸ್ತ್ರೀ ಪುರುಷರ ಜೋಡಿ ಸಮಾಧಿಗಳು ದೊರಕಿವೆ.

⏭ ಗುಜರಾತಿ ಭಾಷೆಯಲ್ಲಿ ಲೋಥಾಲ್ ಎಂದರೆ ಮಡಿದವರ ದಿಬ್ಬ ಅಥವಾ ಸತ್ತವರ ದಿಬ್ಬ ಎಂದರ್ಥ.

⏭ ಸಿಂಧಿ ಭಾಷೆಯಲ್ಲಿ ಮೊಹೆಂಜೋದಾರೋ ಎಂದರೆ ಮಡಿದವರ ದಿಬ್ಬ ಅಥವಾ ಸತ್ತವರ ದಿಬ್ಬ.

⏭ ಇಲ್ಲಿ ಜಾಣ ನರಿಯ ಚಿತ್ರ ಕಂಡುಬಂದಿದೆ

⏭ ಇಲ್ಲಿ ಜೋಡಿ ಶವದ ಪೆಟ್ಟಿಗೆ ಕಂಡುಬಂದಿದೆ 

2. ಕೆಳಗಿನ ಯಾವ ಮನೆತನದವರು ಧರ್ಮಸ್ತಾನಿಯ ನ್ಯಾಯಾಲಯವನ್ನು ಹೊಂದಿದ್ದರು ?
ಎ) ಗುಪ್ತರು
ಬಿ) ಶುಂಗರು
ಸಿ) ಚೋಳರು
ಡಿ) ಮೌರ್ಯರು 


ಸರಿಯಾದ ಉತ್ತರ: ಡಿ) ಮೌರ್ಯರು


ವಿವರಣೆ : ಮೌರ್ಯರ ಕಾಲದಲ್ಲಿ ಧರ್ಮಸ್ಥಾನೀಯ ಮತ್ತು ಕಂಠಸ್ಥಾನೀಯ ಎಂಬ ಎರಡು ಬಗೆಯ ನ್ಯಾಯಾಲಯಗಳು ಇದ್ದವು. ಧರ್ಮಸ್ಥಾನೀಯ ನ್ಯಾಯಲಯಗಳು ಸಿವಿಲ್ ನ್ಯಾಯಾಲಯಗಳಾಗಿದ್ದವು ಹಾಗೂ ಕಂಠಸ್ಥಾನೀಯ ನ್ಯಾಯಲಯಗಳು ಕ್ರಿಮಿನಲ್ ನ್ಯಾಯಾಲಯಗಳಾಗಿದ್ದವು.  

3. ಕೆಳಗಿನ ಯಾವ ರಾಜ ಮನೆತನದವರು ಕಲ್ಯಾಣಿ ಚಾಲುಕ್ಯರ ಅಧೀನರಾಗಿದ್ದರು ?
ಎ) ಹೊಯ್ಸಳರು, ಕಾಕತೀಯರು, ಸೇವುಣರು
ಬಿ) ಕಾಕತೀಯರು, ಪಲ್ಲವರು, ಸೇವುಣರು
ಸಿ) ಹೊಯ್ಸಳರು, ಪಲ್ಲವರು, ಕಾಕತೀಯರು
ಡಿ) ಕಾಕತೀಯರು, ಪಾಲರು, ಪಲ್ಲವರು


ಸರಿಯಾದ ಉತ್ತರ : ಎ) ಹೊಯ್ಸಳರು, ಕಾಕತೀಯರು, ಸೇವುಣರು 

ವಿವರಣೆ: ಕಲ್ಯಾಣಿ ಚಾಲುಕ್ಯರು ಕ್ರಿ. ಶ. 973 ರಿಂದ 1189 ರ ಕಾಲಾವಧಿಯಲ್ಲಿ ಅಧಿಕಾರದಲ್ಲಿದ್ದು, 2 ನೇ ತೈಲಪ (ತ್ರೈಲೋಕಮಲ್ಲ) ಈ ಅರಸು ಮನೆತನದ ಸ್ಥಾಪಕ. ಇವನು ಬದಾಮಿ ಚಾಲುಕ್ಯರ 4 ನೇ ವಿಕ್ರಮಾದಿತ್ಯನ ಮಗ. ಇವರ ರಾಜ ಲಾಂಛನ ಬಲ ಮುಖ ವರಾಹ. ಇವರು ಮಾನ್ಯಖೇಟ ಮತ್ತು ಕಲ್ಯಾಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು. 1 ನೇ ಸೋಮೇಶ್ವರ & 6 ನೇ ವಿಕ್ರಮಾದಿತ್ಯ ಈ ಮನೆತನದ ಪ್ರಸಿದ್ಧ ಅರಸ. 4 ನೇ ಸೋಮೇಶ್ವರ ಈ ಮನೆತನದ ಕೊನೆಯ ಅರಸ. ಕಲ್ಯಾಣ ಚಾಣುಕ್ಯರ ಅರಸ ಸತ್ಯಾಶ್ರಯ ಇರಿವಬೆಡಂಗ (ಅಕಲಂಕ ಚರಿತ) ನ ಆಶ್ರಯದಲ್ಲಿ ಕನ್ನಡದ ಪ್ರಸಿದ್ಧ ಕವಿ ರನ್ನ  ಇದ್ದನು. ರನ್ನ ಗದಾಯುದ್ಧ (ಸಾಹಸಭೀಮ ವಿಜಯ), ಅಜಿತನಾಥ ಪುರಾಣ, ಪರಶುರಾಮ ಚರಿತೆ, ರನ್ನಕಂದ ಕೃತಿಗಳನ್ನು ರಚಿಸಿದ್ದನು.

4. ಯಾವ ಶಾಸನದಲ್ಲಿ ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಇವರಿಬ್ಬರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ ?
ಎ) ಮಸ್ಕಿ ಶಾಸನ
ಬಿ) ಹಾಥಿಗುಂಪಾ
ಸಿ) ಜುನಾಗಡ ಶಾಸನ
ಡಿ) ತಾಮ್ರಲಿಪಿ ಶಾಸನ


ಸರಿಯಾದ ಉತ್ತರ : ಸಿ) ಜುನಾಗಡ ಶಾಸನ


ವಿವರಣೆ: ಚಂದ್ರಗುಪ್ತ ಮೌರ್ಯ ಹಾಗೂ ಅಶೋಕ ಇವರಿಬ್ಬರ ಹೆಸರುಗಳನ್ನು ಜುನಾಗಢ ಶಾಸನದಲ್ಲಿ ಪ್ರಸ್ತಾಪಿಸಲಾಗಿದೆ ಜುನಾಗಢ ಶಾಸನವನ್ನು ರುದ್ರದಾಮನ್ ರಚಿಸಿದನು.

ಅಶೋಕನನ್ನು ಭಾರತದ ಶಿಲಾಶಾಸನಗಳ ಪಿತಾಮಹ ಎಂದು ಕರೆಯಲಾಗುತ್ತದೆ.

ಅಶೋಕನ ಶಾಸನವನ್ನು ಮೊಟ್ಟ ಮೊದಲ ಬಾರಿಗೆ ಅಧ್ಯಯನ ಮಾಡಿದವರು ಜೇಮ್ಸ್ ಪ್ರಿನ್ಸೆಪ್. (1837 ರಲ್ಲಿ ದೆಹಲಿಯ ತೋಂಪ್ರಾ ಶಾಸನವನ್ನು ಮೊದಲಿಗೆ ಓದಿದರು)

ಅಶೋಕನ ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ 13ನೇ ಬಂಡೆಗಲ್ಲು ಶಾಸನ.

ಕರ್ನಾಟಕದ ರಾಯಚೂರಿನ ಮಸ್ಕಿಯಲ್ಲಿ ದೊರೆತಿರುವ ಮಸ್ಕಿ ಶಾಸನದಲ್ಲಿ ಅಶೋಕನ ಹೆಸರಿದೆ, ಇದೇ ಶಾಸನದಲ್ಲಿ ಅಶೋಕನನ್ನು ದೇವನಾಂಪ್ರಿಯ ಪ್ರಿಯದರ್ಶಿ ಅಶೋಕ ಎಂದು ಬಣ್ಣಿಸಲಾಗಿದೆ.

ಮಸ್ಕಿ ಶಾಸನವನ್ನು ಸಂಶೋಧಿಸಿದವರು ಸಿ. ಬ್ರಿಡೆನ್.

ಕರ್ನಾಟಕದ ಮೊದಲ ಶಾಸನ ವಾದ ಬ್ರಹ್ಮಗಿರಿ ಶಾಸನ (ಚಿತ್ರದುರ್ಗ ಜಿಲ್ಲೆ) ವು ಅಶೋಕನ ಎಲ್ಲಾ ಶಾಸನಗಳನ್ನು ಕೆತ್ತಿದ ವ್ಯಕ್ತಿ ಚಪಡ ಎಂದು ತಿಳಿಸುತ್ತದೆ.   

5. ಎರೆಯು ಎಂಬ ಮೂಲ ಹೆಸರು ಹೊಂದಿದ ಅರಸ ಯಾರು ?
ಎ) ವಿಜಯಾದಿತ್ಯ
ಬಿ) ವಿನಯಾದಿತ್ಯ
ಸಿ) 2ನೇ ವಿಕ್ರಮಾದಿತ್ಯ
ಡಿ) 2ನೇ ಪುಲಕೇಶಿ 


ಸರಿಯಾದ ಉತ್ತರ: ಡಿ) 2ನೇ ಪುಲಕೇಶಿ


ವಿವರಣೆ: ಇಮ್ಮಡಿ ಪುಲಕೇಶಿ ಅಥವಾ 2 ನೇ ಪುಲಕೇಶಿ ಬಾದಾಮಿ ಚಾಲುಕ್ಯರ ಪ್ರಮುಖ ಅರಸ. ಈತನ ಮೂಲ ಹೆಸರು ಎರೆಯು. ದಕ್ಷಿಣಾಪಥೇಶ್ವರ ಎಂದೇ ಪ್ರಖ್ಯಾತನಾಗಿದ್ದ ಇಮ್ಮಡಿ ಪುಲಕೇಶಿಯು  634 ರಲ್ಲಿ ಉತ್ತರಾಪಥೇಶ್ವರ ಎಂದು ಪ್ರಖ್ಯಾತನಾಗಿದ್ದ ವರ್ಧನರ ಅರಸ ಹರ್ಷವರ್ಧನನ್ನು ನರ್ಮದಾ ನದಿ ಕಾಳಗದಲ್ಲಿ ಸೋಲಿಸಿ, ಪರಮೇಶ್ವರ ಎಂಬ ಬಿರುದು ಪಡೆದನು.

ನರ್ಮದಾ ನದಿ ಕಾಳಗದಲ್ಲಿ ಇಮ್ಮಡಿ ಪುಲಕೇಶಿ ವಿಜಯ ಸಾಧಿಸಿದನು ಎಂದು ತಿಳಿಸುವ ಶಾಸನ ಐಹೊಳೆ ಶಾಸನ. ಐಹೊಳೆ ಶಾಸನವನ್ನು ರವಿಕೀರ್ತಿ ಹೊರಡಿಸಿದನು.

ಐಹೊಳೆ ಶಾಸನವು ಮೇಗುತಿ ದೇವಾಲಯದ ಪೂರ್ವ ದಿಕ್ಕಿನಲ್ಲಿದೆ 16 ಸಾಲುಗಳ ಈ ಶಾಸನದಲ್ಲಿ ಕಾಳಿದಾಸನ ಹೆಸರಿನ ಉಲ್ಲೇಖವಿದೆ.

641 ನಲ್ಲಿ ಈತನ ಆಸ್ಥಾನಕ್ಕೆ ಚೀನಾದ ಯಾತ್ರಿಕ ಹ್ಯೂಯನ್ ತ್ಸಾಂಗ್ ಭೇಟಿ ನೀಡಿದ್ದನು. 

6. ಭೂಮಿಯ ಮೇಲೆ ಮೊದಲ ಬಾರಿಗೆ ರೇಖಾಂಶ, ಅಕ್ಷಾಂಶ ಎಂಬ ಪದಗಳ ಬಳಕೆ ಮತ್ತು ಭೂತ್ರಿಜ್ಯವನ್ನು ಅಂದಾಜು ಮಾಡಿದವರು
ಎ) ಜಾನ್ ಕೆಪ್ಲರ್
ಬಿ) ವರಾಹಮಿಹಿರ
ಸಿ) ಅಲೆಕ್ಸಾಂಡರ್
ಡಿ) ಎರಾಟಸ್ತನೀಸ್


ಸರಿಯಾದ ಉತ್ತರ: ಎ) ಜಾನ್ ಕೆಪ್ಲರ್ 

7. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿರಿ
1)ಟೆರೆಸ್ಟ್ರಿಯಲ್ ಗ್ರಹಗಳೆಂದರೆ ಸೌರವ್ಯೂಹದ ಒಳಗ್ರಹವಾಗಿದ್ದು, ಅವು ಘನರೂಪಿತ ಗ್ರಹಗಳಾಗಿವೆ.
2) ಜೋವಿನ್ ಗ್ರಹಗಳೆಂದರೆ ಸೌರವ್ಯೂಹದ ಬಾಹ್ಯ ಗ್ರಹಗಳಾಗಿದ್ದು ಅವುಗಳು ಅನಿಲ ದೈತ್ಯ ಗ್ರಹಗಳಾಗಿವೆ
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1 & 2 ಸರಿಯಾಗಿವೆ
ಡಿ) 1 & 2 ತಪ್ಪಾಗಿವೆಸರಿಯಾದ ಉತ್ತರ: ಸಿ) 1 & 2 ಸರಿಯಾಗಿವೆ    

8. ಹೊಂದಿಸಿ ಬರೆಯಿರಿ
     ಗ್ರಹಗಳು            ಉಪಗ್ರಹಗಳು
ಎ) ಗುರುಗ್ರಹ          1) ಟೈಟಾನ್
ಬಿ) ಶನಿ ಗ್ರಹ            2) ಗ್ಯಾನಿಮೇಡ್
ಸಿ) ಯುರೇನಸ್       3) ಟೈಟಾನ್
ಡಿ) ನೆಪ್ಯೂನ್           4) ಒಲಿಂಪಿಯಾ

     ಎ ಬಿ. ಸಿ ಡಿ
ಎ) 2 1 4 3
ಬಿ) 2 1 3 4
ಸಿ. 1 2 4 3
ಡಿ) 3 4 2 1


ಸರಿಯಾದ ಉತ್ತರ : ಎ) 2 1 4 3 

9. ಕೆಳಗಿನ ಹೇಳಿಕೆಗಳನ್ನು ಸಂಕೇತಗಳ ಸಹಾಯದಿಂದ ಉತ್ತರಿಸಿ
1) ಭೂಮಿಯು ತನ್ನ ಅಕ್ಷಕ್ಕೆ 664² ಪೂರ್ವಕ್ಕೆ ವಾಲಿದೆ
2) ಭೂಮಿಯು ತನ್ನ ಸಮಭಾಜಕ ವೃತ್ತಕೆ 23% ಪೂರ್ವಕ್ಕೆ ವಾಲಿದೆ
ಎ) 1 ಸರಿ ಮತ್ತು 2 ತಪ್ಪು
ಬಿ) 2 ಸರಿ ಮತ್ತು 1 ತಪ್ಪು
ಸಿ) 1 ಮತ್ತು 2 ತಪ್ಪು
ಡಿ) 1 ಮತ್ತು 2 ಸರಿ 

ಸರಿಯಾದ ಉತ್ತರ : ಡಿ) 1 ಮತ್ತು 2 ಸರಿ 

10. ಭೂಮಿಯಲ್ಲಿ (ಭೂ ಕವಚ) ಪ್ರಮುಖ ಮೂಲವಸ್ತುಗಳು ಇಳಿಕೆ ಕ್ರಮದಲ್ಲಿ ಬರೆಯಿರಿ
ಎ) ಸಿಲಿಕಾನ್, ಆಮ್ಲಜನಕ, ಅಲ್ಯೂಮಿನಿಯಂ & ಕಬ್ಬಿಣ
ಬಿ) ಸಿಲಿಕಾನ್, ಆಮ್ಲಜನಕ, ಕಬ್ಬಿಣ & ಅಲ್ಯೂಮಿನಿಯಂ
ಸಿ) ಆಮ್ಲಜನಕ, ಸಿಲಿಕಾನ್, ಅಲ್ಯೂಮಿನಿಯಂ & ಕಬ್ಬಿಣ
ಡಿ) ಆಮ್ಲಜನಕ, ಸಿಲಿಕಾನ್, ಕಬ್ಬಿಣ & ಅಲ್ಯೂಮಿನಿಯಂ


ಸರಿಯಾದ ಉತ್ತರ : ಸಿ) ಆಮ್ಲಜನಕ, ಸಿಲಿಕಾನ್, ಅಲ್ಯೂಮಿನಿಯಂ & ಕಬ್ಬಿಣ  


11. ಕೆಳಗಿನವುಗಳಲ್ಲಿ ಯಾವುದನ್ನು 'ಸಂವಿಧಾನದ ಆತ್ಮಸಾಕ್ಷಿ' ಎಂದು ವಿವರಿಸಲಾಗಿದೆ ?
ಎ) ನಿರ್ದೇಶನ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು
ಬಿ) ಮೂಲಭೂತ ಹಕ್ಕುಗಳು & ಪ್ರಸ್ತಾವನೆ
ಸಿ) ನಿರ್ದೇಶನ ತತ್ವಗಳು & ಮೂಲಭೂತ ಹಕ್ಕುಗಳು
ಡಿ) ಮೂಲಭೂತ ಕರ್ತವ್ಯಗಳು & ಮೂಲಭೂತ ಹಕ್ಕುಗಳು


ಸರಿಯಾದ ಉತ್ತರ : ಸಿ) ನಿರ್ದೇಶನ ತತ್ವಗಳು & ಮೂಲಭೂತ ಹಕ್ಕುಗಳು 

12. ನಾಲ್ಕು ಈಶಾನ್ಯ ರಾಜ್ಯಗಳಾದ ಆಸ್ಸಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ & ಮಣಿಪುರಗಳಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಯಾರು ನಡೆಸುತ್ತಾರೆ ?
ಎ) ಡಿಲಿಮಿಟೇಶನ್ ಕಮೀಟಿ
ಬಿ) ಚುನಾವಣಾ ಆಯೋಗ
ಸಿ) ಸುಪ್ರೀಂ ಕೋರ್ಟ್
ಡಿ) ರಾಷ್ಟ್ರಪತಿ


ಸರಿಯಾದ ಉತ್ತರ: ಬಿ) ಚುನಾವಣಾ ಆಯೋಗ   

13, ಕಿಹೋಟೋ ಹೊಲೊಹನ್ ಪ್ರಕರಣ (1993) ಯಾವುದಕ್ಕೆ ಸಂಬಂಧಿಸಿದೆ ?
ಎ) ರಾಜಕೀಯ ಅಪರಾಧೀಕರಣ
ಬಿ) 9ನೇ ಅನುಸೂಚಿ ಕಾನೂನುಗಳ ನ್ಯಾಯಾಂಗ ಪರಿಶೀಲನೆ
ಸಿ) ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಸಂಸದರು & ಶಾಸಕರನ್ನು ಅನರ್ಹಗೊಳಿಸುವುದು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ.
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ : ಸಿ) ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಸಂಸದರು & ಶಾಸಕರನ್ನು ಅನರ್ಹಗೊಳಿಸುವುದು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ.   

14. ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಎ) ಓಪನ್ ಬ್ಯಾಲೆಟ್
ಬಿ) ಏಕಮತ ವರ್ಗಾವಣೆ
ಸಿ) ಬ್ಯಾಲೆಟ್ ಪೇಪರ್‌ನಲ್ಲಿ ನೋಟಾ (NOTA) ಇರುವುದಿಲ್ಲ
ಡಿ) ಮೇಲಿನ ಎಲ್ಲವೂ ಸರಿಯಾಗಿವೆ 


ಸರಿಯಾದ ಉತ್ತರ : ಡಿ) ಮೇಲಿನ ಎಲ್ಲವೂ ಸರಿಯಾಗಿವೆ  

15. ಈ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕು ಅಲ್ಲ ?
ಎ) ಖಾಸಗಿತನದ ಹಕ್ಕು
ಬಿ) ಮೀಸಲಾತಿ ಹಕ್ಕು
ಸಿ) ಅಂತರ್ಜಾಲವನ್ನು ಪಡೆಯುವ ಹಕ್ಕು
ಡಿ) ತನಗೆ ಇಷ್ಟವಾದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು 


ಸರಿಯಾದ ಉತ್ತರ : ಬಿ) ಮೀಸಲಾತಿ ಹಕ್ಕು 

16. ಕೆಳಗಿನವುಗಳಲ್ಲಿ ಯಾವುದು ಮಾನವ ದೇಹದ ಉಷ್ಣತಾ ಸ್ಥಾಪಿ ಹೊಂದಿರುತ್ತದೆ ?
ಎ) ಪಿನಿಯಲ್
ಬಿ) ಪಿಟ್ಯೂಟರಿ
ಸಿ) ಥೈರಾಯ್
ಡಿ) ಹೈಪೋಥಲಾಮಸ್ 


ಸರಿಯಾದ ಉತ್ತರ : ಡಿ) ಹೈಪೋಥಲಾಮಸ್ 

17. ಸಸ್ಯವೊಂದರ ಈ ಅಂಗ ವಿನ್ಯಾಸಗಳಲ್ಲಿ ಯಾವುದು ವಿಸರ್ಜನೆಗೆ ಕಾರಣವಾಗಿರುತ್ತದೆ ?
ಎ) ಝೈಲಮ್
ಬಿ) ಬೇರು
ಸಿ) ಸ್ತೊಮ್ಯಾಟ
ಡಿ) ತೊಗಟೆ


ಸರಿಯಾದ ಉತ್ತರ: ಸಿ) ಸ್ತೊಮ್ಯಾಟ 

18. ಕೆಳಗಿನ ಯಾವ ರೋಗಗಳು ಬ್ಯಾಕ್ಟಿರಿಯಾಗಳಿಂದ ಉಂಟಾಗುವುದಿಲ್ಲ ?
ಎ) ಕಾಲರಾ
ಬಿ) ಡಿಫೀರಿಯಾ
ಸಿ) ಡೆಂಗ್ಯೂ
ಡಿ) ಟೈಫಾರ್


ಸರಿಯಾದ ಉತ್ತರ : ಸಿ) ಡೆಂಗ್ಯೂ 

19. ಸಮುದ್ರದಲ್ಲಿ ಮುಳುಗುವ ವಸ್ತುಗಳನ್ನು ಕಂಡು ಹಿಡಿಯುವ ಸಾಧನ ?
ಎ) ರೆಡಾರ್
ಬಿ) ಸೋನಾರ್
ಸಿ) ಲೇಸರ್
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಬಿ) ಸೋನಾರ್ 

20. ರೋಗಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
ಎ) ಪೆಥಾಲಾಜಿ
ಬಿ) ನೆಫ್ರಾಲಾಜಿ
ಸಿ) ನ್ಯೂರಾಲಾಜಿ
ಡಿ) ಆ್ಯಂಜಿಯಾಲಾಜಿ


ಸರಿಯಾದ ಉತ್ತರ: ಎ) ಪೆಥಾಲಾಜಿ 


21. ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯನ್ನು ಮೊದಲ ಬಾರಿಗೆ ಸೂಚಿಸಿದವರು ಯಾರು?
ಎ) ಅಟಲ್ ಗಿಲಾರ್ಡ್
ಬಿ) ವಿಶ್ವಸಂಸ್ಥೆ
ಸಿ) UNFCCC
ಡಿ) ಟ್ರಂಪ್ಟ ಲ್ಯಾಂಡ್ ಆಯೋಗ 


ಸರಿಯಾದ ಉತ್ತರ : ಡಿ) ಟ್ರಂಪ್ಟ ಲ್ಯಾಂಡ್ ಆಯೋಗ  

22. Gandhi & Gandhism ಕೃತಿಯ ಕರ್ತೃ ಯಾರು ?
ಎ) ಪಟ್ಟಾಭಿ ಸೀತಾರಾಮಯ್ಯ
ಬಿ) ಸರೋಜಿನಿ ನಾಯ್ಡು
ಸಿ) ಆ್ಯಂಡೂಸ್
ಡಿ) ಕೃಪಲಾನಿ


ಸರಿಯಾದ ಉತ್ತರ: ಎ) ಪಟ್ಟಾಭಿ ಸೀತಾರಾಮಯ್ಯ  

23. ಆರ್ಥಿಕತೆಯ ವ್ಯವಸ್ಥೆಯಲ್ಲಿ ಆಗುವಂತಹ ಏರಿಳಿತಗಳಿಂದ ಉಂಟಾಗುವ ನಿರುದ್ಯೋಗಕ್ಕೆ______ಎಂದು ಕರೆಯುವರು
ಎ) ಸ್ವರೂಪಾತ್ಮಕ ನಿರುದ್ಯೋಗ
ಬಿ) ಮುಕ್ತ ನಿರುದ್ಯೋಗ
ಸಿ) ಆವರ್ತ ನಿರುದ್ಯೋಗ
ಡಿ) ಋತುಮಾನಿಕ ನಿರುದ್ಯೋಗ


ಸರಿಯಾದ ಉತ್ತರ: ಸಿ) ಆವರ್ತ ನಿರುದ್ಯೋಗ  

24. ಪವರ್‌ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ನ ಕೇಂದ್ರ ಕಚೇರಿ ಎಲ್ಲಿದೆ ?
ಎ) ನವ ದೆಹಲಿ
ಬಿ) ಗುರುಗ್ರಾಮ
ಸಿ) ಕಲ್ಕತ್ತಾ
ಡಿ) ಮುಂಬೈ


ಸರಿಯಾದ ಉತ್ತರ : ಬಿ) ಗುರುಗ್ರಾಮ  

25. ಯಾವ ಸಮಿತಿಯ ಶಿಫಾರಸ್ಸಿನ ಮೇರೆಗೆ ಹಣಕಾಸು ನೀತಿ ಸಮಿತಿಯನ್ನು 2016 ರಲ್ಲಿ ರಚಿಸಲಾಯಿತು ?
ಎ) ರಾಜಿವಕುಮಾರ ಸಮಿತಿ
ಬಿ) ಕೆ. ಸಿ. ನಿಯೋಗಿ ಸಮಿತಿ
ಸಿ) ದಿನೇಶ ಶರ್ಮಾ ಸಮಿತಿ
ಡಿ) ಉರ್ಜಿತ್ ಪಟೇಲ್ ಸಮಿತಿ 


ಸರಿಯಾದ ಉತ್ತರ : ಡಿ) ಉರ್ಜಿತ್ ಪಟೇಲ್ ಸಮಿತಿ 

26. ಸಿಕ್ಕಿಂ ರಾಜ್ಯದ ಜಾನಪದ ನೃತ್ಯ ಯಾವುದು ?
ಎ) ಝಮೆಲಿಯಾ
ಬಿ) ಸಿಂಥಲಾಮ್
ಸಿ) ಕಬುಯಿ
ಡಿ) ಚಪೇಲಿ


ಸರಿಯಾದ ಉತ್ತರ : ಬಿ) ಸಿಂಥಲಾಮ್   

27. ಈ ಕೆಳಗಿನವುಗಳಲ್ಲಿ ಯಾವ ಪ್ರಶಸ್ತಿಯನ್ನು ಕೆ. ಕೆ. ಬಿರ್ಲಾ ಫೌಂಡೇಶನ್ ನೀಡುವುದಿಲ್ಲ ?
ಎ) ವ್ಯಾಸ್ ಸಮ್ಮಾನ್
ಬಿ) ಬಿಹಾರಿ ಪುರಸ್ಕಾರ್
ಸಿ) ಸರಸ್ವತಿ ಸಮ್ಮಾನ್
ಡಿ) ಕಾಳಿದಾಸ ಸಮ್ಮಾನ 


ಸರಿಯಾದ ಉತ್ತರ: ಡಿ) ಕಾಳಿದಾಸ ಸಮ್ಮಾನ 

28. ಟೋಕಿಯೋ ನಗರ ಯಾವ ನದಿ ದಡದ ಮೇಲಿದೆ?
ಎ) ಶಿನಾನೋ ನದಿ
ಬಿ) ತೋನ್ ನದಿ
ಸಿ) ಯೋಥೋ ನದಿ
ಡಿ) ಸುಮಿಡಾ ನದಿ  


ಸರಿಯಾದ ಉತ್ತರ : ಡಿ) ಸುಮಿಡಾ ನದಿ 

29. 'India of my Dream' ಈ ಕೃತಿಯ ಕೃರ್ತೃ ಯಾರು ?
ಎ) ಮಹಾತ್ಮಾ ಗಾಂಧಿ
ಬಿ) ಆರ್. ಕೆ. ನಾರಾಯಣ
ಸಿ) ಬಿಮಲ್ ಜಲನ್
ಡಿ) ಸುಭಾಷಚಂದ್ರ ಭೋಸ್


ಸರಿಯಾದ ಉತ್ತರ : ಎ) ಮಹಾತ್ಮಾ ಗಾಂಧಿ   

30. ಪಿಚ್ ಅಥವಾ ಕೋರ್ಟ್ ಸೈಡಿಂಗ್ ಎಂಬ ಪದವನ್ನು ಎಲ್ಲಿ ಬಳಸುತ್ತಾರೆ ?
ಎ) ಹಾಕಿ
ಬಿ) ಟೆನ್ನಿಸ್
ಸಿ) ಕ್ರಿಕೆಟ್
ಡಿ) ಬಾಸ್ಕೆಟ್ ಬಾಲ್


ಸರಿಯಾದ ಉತ್ತರ : ಬಿ) ಟೆನ್ನಿಸ್  


31. ಭಾರತದಲ್ಲಿ ಅಮೃತಶಿಲೆಯಿಂದ ನಿರ್ಮಾಣವಾದ ಮೊದಲ ಕಟ್ಟಡ ಯಾವುದು ?
ಎ) ಹುಮಾಯೂನ ಕಾರಿ
ಬಿ) ತಾಜ ಮಹಲ್
ಸಿ) ಕೆಂಪುಕೋಟೆ
ಡಿ) ಜಾಮೀ ಮಸೀದಿ


ಸರಿಯಾದ ಉತ್ತರ : ಎ) ಹುಮಾಯೂನ ಕಾರಿ  

32. 'ದಾರ್-ಎಲ್-ಶಾಫಾ' ಎಂಬ ಉಚಿತ ಆಸ್ಪತ್ರೆ ವ್ಯವಸ್ಥೆ ಮಾಡಿ ಕೊಟ್ಟ ಸುಲ್ತಾನ ಯಾರು?
ಎ) ಅಲ್ಲಾವುದ್ದೀನ್ ಖಿಲ್ಲಿ
ಬಿ) ಬಲ್ಬನ್
ಸಿ) ಫಿರೋಜ್ ಷಾ-ತುಘಲಕ್
ಡಿ) ಸಿಕಂದರ ಲೋದಿಸರಿಯಾದ ಉತ್ತರ: ಸಿ) ಫಿರೋಜ್ ಷಾ-ತುಘಲಕ್ 

33. 'ದಾಸಬೋದ' ಇದು ಯಾರ ಪ್ರಸಿದ್ಧ ಕೃತಿ ?
ಎ) ರಾಮದಾಸರು
ಬಿ) ತುಳಸಿದಾಸರು
ಸಿ) ಸೂರದಾಸರು
ಡಿ) ಕನಕದಾಸ 


ಸರಿಯಾದ ಉತ್ತರ : ಎ) ರಾಮದಾಸರು  

34. ಯಾವ ಮೊಘಲ ದೊರೆಯ ನಾಯಕತ್ವದಲ್ಲಿ ಸಿಖ್ ನಾಯಕ “ಬಂದಾ ಬಹದ್ದೂರ” ನನ್ನು ಸೆರೆಹಿಡಿದು ಕೊಲ್ಲಲಾಯಿತು?
ಎ) ಮಹಮ್ಮದ ಷಾ
ಬಿ) ಫರೂಕ್ಷಿಯಾರ್
ಸಿ) ಜಹಾಂಗೀರ
ಡಿ) ಔರಂಗಜೇಬ್


ಸರಿಯಾದ ಉತ್ತರ : ಬಿ) ಫರೂಕ್ಷಿಯಾರ್ 

35. ಕೃಷ್ಣದೇವರಾಯ ಬಹುಮನಿ ಸುಲ್ತಾನನ್ನು ಸೋಲಿಸಿದ ಕಾಳಗ ಯಾವುದು ?
ಎ) ಕೃಷ್ಣಾ ನದಿ ಕಾಳಗ
ಬಿ) ಡೋಣಿ ನದಿ ಕಾಳಗ
ಸಿ) ತುಂಗಭದ್ರಾ ನದಿ ಕಾಳಗ
ಡಿ) ಗೋದಾವರಿ ನದಿ ಕಾಳಗ


ಸರಿಯಾದ ಉತ್ತರ : ಬಿ) ಡೋಣಿ ನದಿ ಕಾಳಗ  

36. ಬರ್ಮುಡಾ ಟ್ರಯಾಂಗಲ್ ಕಂಡು ಬರುವ ಸಾಗರ ಯಾವುದು?
ಎ) ಅಟ್ಲಾಂಟಿಕ್ ಸಾಗರ
ಬಿ) ಹಿಂದೂ ಮಹಾಸಾಗರ
ಸಿ) ಫೆಸಿಫಿಕ್ ಸಾಗರ
ಡಿ) ಆರ್ಕ್‌ಟಿಕ್ ಸಾಗರ


ಸರಿಯಾದ ಉತ್ತರ : ಎ) ಅಟ್ಲಾಂಟಿಕ್ ಸಾಗರ  

37. ಭಾರತದ ಸರೋವರಗಳ ನಾಡು ಎಂದು ಕರೆಯಲ್ಪಡುವ ರಾಜ್ಯ ಯಾವುದು ?
ಸಿ) ಕೇರಳ
ಎ) ರಾಜಸ್ಥಾನ್
ಬಿ) ಜಮ್ಮು & ಕಾಶ್ಮೀರ
ಡಿ) ಮಹಾರಾಷ್ಟ್ರ


ಸರಿಯಾದ ಉತ್ತರ: ಬಿ) ಜಮ್ಮು & ಕಾಶ್ಮೀರ  

 38. ಭಾರತದ ಅತಿ ಆಳವಾದ ಬಂದರು ಯಾವುದು ?
ಎ) ವಿಶಾಖ ಪಟ್ಟಣಂ
ಬಿ) ಗಂಗಾವರಂ
ಸಿ) ಕೊಚ್ಚಿನ್
ಡಿ) ಚೆನ್ನೈ


ಸರಿಯಾದ ಉತ್ತರ : ಬಿ) ಗಂಗಾವರಂ 

39. “ಕುಂದಾ" ಯಾವುದರ ಉತ್ಪಾದನೆಯಲ್ಲಿ ಪ್ರಸಿದ್ಧಿಯಾಗಿದೆ ?
ಎ) ಸೌರ ವಿದ್ಯುತ್
ಬಿ) ಪವನ ವಿದ್ಯುತ್
ಸಿ) ಜಲ ವಿದ್ಯುತ್
ಡಿ) ಅಣು ವಿದ್ಯುತ್


ಸರಿಯಾದ ಉತ್ತರ : ಸಿ) ಜಲ ವಿದ್ಯುತ್    

40. ಹೊಂದಿಸಿ ಬರೆಯಿರಿ
         ಅಣೆಕಟ್ಟುಗಳು                      ನದಿಗಳು                     
ಎ) ಉರಿ ಅಣೆಕಟ್ಟು                     1) ಝೀಲಂ
ಬಿ) ಸಲಾಲ್ ಅಣೆಕಟ್ಟು                2) ಚೀನಾಬ್
ಸಿ) ಭಾಕ್ರಾನಾಂಗಲ್ ಅಣೆಕಟ್ಟು     3) ಅಟೇಜ್
ಡಿ) ನಿಮೂ ಬಾಚೊ ಅಣೆಕಟ್ಟು       4) ಸಿಂಧೂ


    ಎ ಬಿ ಸಿ ಡಿ
ಎ) 2 1 3 4
ಬಿ) 1 2 3 4
ಸಿ) 4 1 3 2
ಡಿ) 3 2 4 1


ಸರಿಯಾದ ಉತ್ತರ: ಬಿ) 1 2 3 4    


41. ನೀಲಿ ಆಧಾರ್ ಕಾರ್ಡ್ (BlueAdhar Card) ಎಂದರೆ
ಎ) 5 ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ನೀಡಲಾಗುತ್ತದೆ
ಬಿ) ಪಟ್ಟಣದಲ್ಲಿರುವ ಕಾರ್ಮಿಕರಿಗೆ ನೀಡಲಾಗುತ್ತದೆ
ಸಿ) MGNREGA ದಡಿಯಲ್ಲಿ ನೋಂದಾಯಿತ ಕೆಲಸಗಾರರಿಗೆ
ಡಿ) ವಿದೇಶದಿಂದ ಬಂದು ನೆಲೆಸಿದವರಿಗೆ ನೀಡಲಾಗುತ್ತದೆ


ಸರಿಯಾದ ಉತ್ತರ: ಎ) 5 ವರ್ಷ ವಯಸ್ಸಿನ ಕೆಳಗಿನ ಮಕ್ಕಳಿಗೆ ನೀಡಲಾಗುತ್ತದೆ   

42. ಕೆಳಗಿನ ರಾಜ್ಯಗಳನ್ನು ರಾಜ್ಯಗಳಾಗಿ ರಚಿಸಿದ ವರ್ಷದ ಆಧಾರದ ಮೇಲೆ ಕಾಲಾನುಕ್ರಮದಲ್ಲಿ ಜೋಡಿಸಿ
2) ಮೇಘಾಲಯ
1) ನಾಗಾಲ್ಯಾಂಡ್
3) ಮಿಜೋರಾಂ
4) ಸಿಕ್ಕಿಂ
ಆಯ್ಕೆಗಳು
ಎ) 1-2-4-3
ಬಿ) 1-2-3-4
ಸಿ) 1-3-2-4
ಡಿ) 2-1-3-4


ಸರಿಯಾದ ಉತ್ತರ: ಎ) 1-2-4-3

43. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿ ಉತ್ತರವನ್ನು ಆರಿಸಿರಿ.
1) ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ರಾಷ್ಟ್ರಪತಿಯವರು ಯಾವುದೇ ವಿಟೋ ಅಧಿಕಾರವನ್ನು ಹೊಂದಿಲ್ಲ
2) ಹಣಕಾಸು ಮಸೂದೆಯನ್ನು ರಾಷ್ಟ್ರಪತಿಯವರು ತಿರಸ್ಕರಿಸಬಹುದು ಆದರೆ ಮರುಪರಿಶೀಲನೆಗೆ ಕಳುಹಿಸುವಂತಿಲ್ಲ
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಸಿ) 1 ಮತ್ತು 2  

44. ಕೆಳಗಿನವುಗಳಲ್ಲಿ ಯಾವ ಕ್ಯಾಬಿನೆಟ್ ಸಮಿತಿಯನ್ನು ಸಾಮಾನ್ಯವಾಗಿ ಸೂಪರ್ ಕ್ಯಾಬಿನೆಟ್ ಎಂದು ಪರಿಗಣಿಸಲಾಗುತ್ತದೆ ?
ಎ) ರಾಜಕೀಯ ವ್ಯವಹಾರಗಳ ಸಮಿತಿ
ಬಿ) ಆರ್ಥಿಕ ವ್ಯವಹಾರಗಳ ಸಮಿತಿ
ಸಿ) ನೇಮಕಾತಿ ಸಮಿತಿ
ಡಿ) ಸಂಸದೀಯ ವ್ಯವಹಾರಗಳ ಸಮಿತಿ


ಸರಿಯಾದ ಉತ್ತರ : ಎ) ರಾಜಕೀಯ ವ್ಯವಹಾರಗಳ ಸಮಿತಿ 

45. ಈ ಕೆಳಗಿನ ಯಾವ ಸಮಿತಿಗಳು ಚುನಾವಣಾ ಸುಧಾರಣೆಗೆ ಸಂಬಂಧಿಸಿವೆ ?
1) ತರ್ಕುಂಡೆ ಸಮಿತಿ (1974)
2) ಇಂದ್ರಜಿತ್ ಗುಪ್ತಾ ಸಮಿತಿ
3) ದಿನೇಶ ಗೋಸ್ವಾಮಿ ಸಮಿತಿ
4) ತಂಖಾ ಸಮಿತಿ
ಎ) 1 ಮತ್ತು 2
ಬಿ) 3 ಮತ್ತು 4
ಸಿ) 2, 3 ಮತ್ತು 4
ಡಿ) 1, 2, 3 ಮತ್ತು 4


ಸರಿಯಾದ ಉತ್ತರ : ಡಿ) 1, 2, 3 ಮತ್ತು 4  

46. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಪ್ರಕಾರ ಕುಡಿಯುವ ನೀರಿನಲ್ಲಿ ಅನುಮತಿಸಲಾದ 'pH ಮೌಲ್ಯದ ವ್ಯಾಪ್ತಿ
ಎ) 4.5 - 6.5
ಬಿ) 5.5 - 7.5
ಸಿ) 6.5 - 8.5 
ಡಿ) 7.5 - 9.5


ಸರಿಯಾದ ಉತ್ತರ: ಸಿ) 6.5 - 8.5   

47. ನುಸಿ ಉಂಡೆಗಳ ಘಟಕಗಳೇನು ?
ಎ) ಸುಣ್ಣ
ಬಿ) ಕ್ಲೋರಿನ್
ಸಿ) ನ್ಯಾಫ್ರಲಿನ್
ಡಿ) ಅಯೋಡಿನ್


ಸರಿಯಾದ ಉತ್ತರ: ಸಿ) ನ್ಯಾಫ್ರಲಿನ್ 

48. ಉಸಿರಾಟದ ಸಮಯದಲ್ಲಿ ಗಾಳಿಯ ಗಾತ್ರವನ್ನು ಹೀಗೆ ಕರೆಯುತ್ತಾರೆ ?
ಎ) ವೈಟಲ್ ಗಾತ್ರ
ಬಿ) ಟೈಡಲ್ ಗಾತ್ರ
ಸಿ) ವೈಟಲ್ ಕ್ಷಮತೆ
ಡಿ) ಐಡಿಯಲ್ ಗಾತ್ರ


ಸರಿಯಾದ ಉತ್ತರ : ಬಿ) ಟೈಡಲ್ ಗಾತ್ರ 

49. ಚೇಳು ಯಾವ ಅಂಗದ ಮೂಲಕ ಉಸಿರಾಡುತ್ತದೆ ?
ಎ) ಶ್ವಾಸಕೋಶಗಳು
ಬಿ) ಕಿವಿರುಗಳು
ಸಿ) ಬುಕ್ ಲಂಗ್ಸ್
ಡಿ) ಶ್ವಾಸನಾಳಸರಿಯಾದ ಉತ್ತರ: ಸಿ) ಬುಕ್ ಲಂಗ್ಸ್ 

50. ಕೆನಾಯಿನ್ ಡಿಸ್ಟಂಪರ್ ವೈರಸ್ ಯಾವ ಸಂತತಿಯ ನಾಶಕ್ಕೆ ಕಾರಣವಾಗುತ್ತದೆ ?
ಎ) ಹುಲಿ
ಬಿ) ಜಿಂಕೆ
ಸಿ) ಸಿಂಹ
ಡಿ) ಘೇಂಡಾಮೃಗ 


ಸರಿಯಾದ ಉತ್ತರ: ಸಿ) ಸಿಂಹ   

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ


51. ಒಂದು ಕೋಡ್‌ನಲ್ಲಿ NATURE ಇದನ್ನು MASUQE ಎಂದು ಸೂಚಿಸಿದರೆ ಅದೇ ಕೋಡ್‌ನಲ್ಲಿ FAMINE ನ್ನು ಹೇಗೆ ಸೂಚಿಸಲಾಗುವುದು ?
ಎ) FBMJND
ಬಿ) FFKNGND
ಸಿ) GANIDE
ಡಿ) EALIME 


ಸರಿಯಾದ ಉತ್ತರ: ಡಿ) EALIME  

52. Aಯು Bಯ ಸಹೋದರಿ Cಯು B ಯ ತಾಯಿ, Dಯು C ಯ ತಂದೆ, E ಯು D ಯ ತಾಯಿ ಹಾಗಾದರೆ D ಗೆ A ಏನಾಗಬೇಕು?
ಎ) ಅಜ್ಜಿ
ಬಿ) ಅಜ್ಜ
ಸಿ) ಮಗಳು
ಡಿ) ಮೊಮ್ಮಗಳು 


ಸರಿಯಾದ ಉತ್ತರ: ಡಿ) ಮೊಮ್ಮಗಳು   

53. ಪೂರ್ವಕ್ಕೆ ಮುಖ ಮಾಡಿ ಕುಳಿತಿರುವ ಒಂದು ಮಗು ಚೆಂಡು ಹಿಡಿಯುವ ಪ್ರಯತ್ನದಲ್ಲಿ ಒಮ್ಮೆ ಬಲಕ್ಕೆ, ನಂತರ ಬಲಕ್ಕೆ ಮತ್ತೊಮ್ಮೆ ಎಡಕ್ಕೆ ಮತ್ತೆ ಎಡಕ್ಕೆ ಕೊನೆಯಲ್ಲಿ ಬಲಕ್ಕೆ ತಿರುಗಿ ಚಂಡು ಹಿಡಿಯುವಲ್ಲಿ ಯಶಸ್ವಿಯಾಯಿತು. ಮಗು ಈಗ ಯಾವ ದಿಕ್ಕಿನ ಕಡೆ ಮುಖ ಮಾಡಿದೆ ?
ಎ) ದಕ್ಷಿಣ
ಬಿ) ಉತ್ತರ
ಸಿ) ಪೂರ್ವ
ಡಿ) ಪಶ್ಚಿಮ


ಸರಿಯಾದ ಉತ್ತರ: ಎ) ದಕ್ಷಿಣ   

54. A ಮತ್ತು B ನಲ್ಲಿಗಳು ಕ್ರಮವಾಗಿ 15 ಮತ್ತು 20 ನಿಮಿಷಗಳಲ್ಲಿ ತೊಟ್ಟಿಯನ್ನು ತುಂಬಿಸುತ್ತವೆ. ಎರಡೂ ನಲ್ಲಿಗಳನ್ನು ಏಕಕಾಲದಲ್ಲಿ ತರೆಯಲಾಗಿದೆ. 4 ನಿಮಿಷಗಳ ನಂತರ A ನಲ್ಲಿಯನ್ನು ನಿಲ್ಲಿಸಲಾಗುತ್ತದೆ. ಹಾಗಾದರೆ ಒಟ್ಟು ಎಷ್ಟು ವೇಳೆಯಲ್ಲಿ ತೊಟ್ಟಿ ತುಂಬುತ್ತದೆ ?
ಎ) 10 ನಿಮಿಷ 20 ಸೆಕೆಂಡ್
ಬಿ) 11 ನಿಮಿಷ 45 ಸೆಕೆಂಡ್
ಸಿ) 12 ನಿಮಿಷ 30 ಸೆಕೆಂಡ್
ಡಿ) 14 ನಿಮಿಷ 40 ಸೆಕೆಂಡ್ಸರಿಯಾದ ಉತ್ತರ : ಎ) 10 ನಿಮಿಷ 20 ಸೆಕೆಂಡ್   

55) ಇಸ್ರೋದ ಸಿಂಧುನೇತ್ರ ಉಪಗ್ರಹದ ಮುಖ್ಯ ಉದ್ದೇಶ ಇದಾಗಿದೆ?
ಎ) ಇದು ಹಡಗುಗಳ ಮೇಲೆ ನಿಗಾ ಇಡುವುದಾಗಿದೆ
ಬಿ) ಜಲ ಗಡಿಯಲ್ಲಿನ ಸ್ಪಷ್ಟವಾದ ಛಾಯಾಚಿತ್ರಗಳನ್ನು ಒದಗಿಸುವುದು
ಸಿ) ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣ ಸುಗಮಗೊಳಿಸುವುದು
ಡಿ) ಖನಿಜಗಳ ಸಂಶೋಧನೆ ಮಾಡುವುದಾಗಿದೆ.


ಸರಿಯಾದ ಉತ್ತರ : ಎ) ಇದು ಹಡಗುಗಳ ಮೇಲೆ ನಿಗಾ ಇಡುವುದಾಗಿದೆ   

56. 39 ಜನರು ಪ್ರತಿದಿನ 5 ಗಂಟೆ ಕೆಲಸ ಮಾಡಿ ಒಂದು
ರಸ್ತೆಯನ್ನು 12 ದಿನಗಳಲ್ಲಿ ದುರಸ್ಥಿ ಮಾಡುತ್ತಾರೆ. ಹಾಗಾದರೆ 30 ಜನರು ಪ್ರತಿದಿನ 6 ಗಂಟೆ ಕೆಲಸ ಮಾಡಿ ಎಷ್ಟು ದಿನದಲ್ಲಿ ಮುಗಿಸುತ್ತಾರೆ?
ಎ) 10
ಬಿ) 13
ಸಿ) 14
ಡಿ) 15


ಸರಿಯಾದ ಉತ್ತರ :ಬಿ) 13

57. ಒಂದು ರೈಲು ಗಂಟೆಗೆ 360 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಅದರ ಉದ್ದವು 650 ಮೀ ಇದೆ. ಮತ್ತೊಂದು ರೈಲು ಗಂಟೆಗೆ 90 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಈ ಎರಡೂ ರೈಲುಗಳು ಒಂದೇ ದಿಕ್ಕಿನತ್ತ ಸಾಗುತ್ತಿದ್ದು, ಒಂದನ್ನೊಂದು 20 ಸೆಕೆಂಡ್‌ಗಳಲ್ಲಿ ದಾಟುತ್ತವೆ. ಹಾಗಾದರೆ ಎರಡನೇ ರೈಲಿನ ಉದ್ದವೆಷ್ಟು ?
ಎ) 850 ಮೀ
ಬಿ) 90 ಮೀ
ಸಿ) 450 ಮೀ
ಡಿ) 400 ಮೀ


ಸರಿಯಾದ ಉತ್ತರ: ಎ) 850 ಮೀ 

58. ಪ್ರಸ್ತುತವಾಗಿ ರವಿ ಮತ್ತು ರಮೇಶನ ವಯಸ್ಸಿನ ಅನುಪಾತವು 5:3 ಇದೆ. 5 ವರ್ಷಗಳ ನಂತರ ರವಿ ಮತ್ತು ರಮೇಶನ ವಯಸ್ಸಿನ ಅನುಪಾತವು 3:2 ಆಗಿದೆ. ಹಾಗಾದರೆ ರಮೇಶನ ಪ್ರಸ್ತುತ ವಯಸ್ಸೆಷ್ಟು ?
ಎ) 12 ವರ್ಷಗಳು
ಬಿ) 20 ವರ್ಷಗಳು
ಸಿ) 10 ವರ್ಷಗಳು
ಡಿ) 15 ವರ್ಷಗಳು 


ಸರಿಯಾದ ಉತ್ತರ: ಡಿ) 15 ವರ್ಷಗಳು    

59. ಇವುಗಳಲ್ಲಿ ಯಾವುದು ಸೆಕೆಂಡರಿ ಮೆಮೊರಿ (Secondary Memory) ಅಲ್ಲ ?
ಎ) ಹಾರ್ಡ್ ವೇರ್
ಬಿ) ಪ್ಲಾಸ್‌ ಡಿಸ್ಟ್
ಬಿ) ಆಪ್ಟಿಕಲ್ ಡಿಸ್ಟ್
ಡಿ) ರೋಮ್ (ROM)


ಸರಿಯಾದ ಉತ್ತರ: ಡಿ) ರೋಮ್ (ROM)

60. ಕೆಳಗಿನವುಗಳಲ್ಲಿ ಯಾವ ಆಪರೇಟಿಂಗ್ ಸಿಸ್ಟಂ (Operating Systems) ಆಗಿದೆ ?
ಎ) ಮ್ಯಾಕ್
ಬಿ) ಎ.ಓ.ಎಲ್.
ಸಿ) ಡಕ್ ಡಕ್ ಗೋ
ಡಿ) ಬೈಡು


ಸರಿಯಾದ ಉತ್ತರ : ಎ) ಮ್ಯಾಕ್ 


61. ಭೂಮಿಯಿಂದ ಪ್ರತಿಫಲಿಸುವ (Reflected) ಸೌರ ವಿಕಿರಣದ ಪ್ರಮಾಣವನ್ನು ಏನೆಂದು ಕರೆಯುತ್ತಾರೆ?
ಎ) ಅಲ್ಬೇಡೋ
ಬಿ) ಚದುರುವಿಕೆ
ಸಿ) ವಕ್ರೀಭವನ
ಡಿ) ಪ್ರಸರಣ 


ಸರಿಯಾದ ಉತ್ತರ : ಎ) ಅಲ್ಬೇಡೋ 

62. ಪರಮಧಾಮ ಆಶ್ರಮದ ಸ್ಥಾಪಕರು ಯಾರು ?
ಎ) ಬರೀಂದರ್ ಘೋಷ್
ಬಿ) ದಾದಾಬಾಯಿ ನವರೋಜಿ
ಸಿ) ವಿನೋಬಾ ಭಾವೆ
ಡಿ) ಲಾಲಾ ಲಜಪತರಾಯ


ಸರಿಯಾದ ಉತ್ತರ: ಸಿ) ವಿನೋಬಾ ಭಾವೆ 

63. ಯಾರ ಮಧ್ಯಸ್ಥಿಕೆಯಲ್ಲಿ ಗಾಂಧಿ-ಇರ್ವಿನ್ ಒಪ್ಪಂದವಾಯಿತು?
ಎ) ಸರೋಜಿನಿ ನಾಯ್ಡು
ಬಿ) ಮದನಮೋಹನ ಮಾಳವಿಯಾ
ಸಿ) ತೇಜ್ ಬಹಾದ್ದೂರ್ ಸಪ್ರೂ
ಡಿ) ಮೋತಿಲಾಲ್ ನೆಹರು


ಸರಿಯಾದ ಉತ್ತರ : ಸಿ) ತೇಜ್ ಬಹಾದ್ದೂರ್ ಸಪ್ರೂ 

64. ಸಂಚಾರಿ ನ್ಯಾಯಾಲಯಗಳನ್ನು ಕಾರ್ನ್‌ವಾಲೀಸ್ ಜಾರಿಗೆ ತಂದನು. ಅದನ್ನು ರದ್ದುಪಡಿಸಿದ ಗವರ್ನರ್ ಯಾರು?
ಎ) ಲಾರ್ಡ್ ವಿಲಿಯಂ ಬೆಂಟಿಂಕ್
ಬಿ) ಲಾರ್ಡ್ ಹೆಸ್ಟಿಂಗ್
ಸಿ) ಲಾರ್ಡ್ ವೆಲ್ಲೆಸ್ಲಿ
ಡಿ) ಲಾರ್ಡ್ ಹಾರ್ಡಿಂಜ್


ಸರಿಯಾದ ಉತ್ತರ: ಎ) ಲಾರ್ಡ್ ವಿಲಿಯಂ ಬೆಂಟಿಂಕ್ 

65. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಹುತಾತ್ಮರಾದವರು ಯಾರು ?
ಎ) ಬಾಜಿರೂಟ್
ಬಿ) ಖುದಿರಾಮ್ ಬೋಸ್
ಸಿ) ಮದನ್‌ಲಾಲ್ ದಿಂಗ್ರಾ
ಡಿ) ಜತೀಂದ್ರನಾಥ ದಾಸ್


ಸರಿಯಾದ ಉತ್ತರ : ಎ) ಬಾಜಿರೂಟ್  

66. 1946ರಲ್ಲಿ ಮುಂಬೈನಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನದ 10 ನೆಯ ಅಧಿವೇಶನ ಮುಂಬೈ ಪ್ರಾಂತ್ಯದ ಮುಖ್ಯಮಂತ್ರಿ ಬಿ. ಜಿ. ಖೇರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಅಧಿವೇಶನವನ್ನು ಉದ್ಘಾಟಿಸಿದವರು ಯಾರು ?
ಎ) ಮೊರಾರ್ಜಿ ದೇಸಾಯಿ
ಬಿ) ರಾಜೇಂದ್ರ ಪ್ರಸಾದ್
ಸಿ) ಜವಾಹರಲಾಲ್ ನೆಹರು
ಡಿ) ವಲ್ಲಭಬಾಯಿ ಪಟೇಲ್ 


ಸರಿಯಾದ ಉತ್ತರ : ಡಿ) ವಲ್ಲಭಬಾಯಿ ಪಟೇಲ್ 

67. ಭಾರತ ಸಂವಿಧಾನದ 262ನೇ ವಿಧಿಯು ಅಂತರ್‌ರಾಜ್ಯ ನದಿ ನೀರು ವಿವಾದ ನ್ಯಾಯಾಧೀಕರಣವನ್ನು ಸ್ಥಾಪಿಸಲು ಯಾರಿಗೆ ಅಧಿಕಾರ ನೀಡುತ್ತದೆ?
ಎ) ರಾಷ್ಟ್ರಪತಿ
ಬಿ) ಪ್ರಧಾನಮಂತ್ರಿ
ಸಿ) ಸಂಸತ್ತು
ಡಿ) ರಾಜ್ಯ ಸರ್ಕಾರ


ಸರಿಯಾದ ಉತ್ತರ: ಸಿ) ಸಂಸತ್ತು    

68. ರಂಜಾನ್ ಮಾಸವನ್ನು ಇಸ್ಲಾಂ ಕ್ಯಾಲೆಂಡರ್ ಅನ್ವಯ
ಎ) ಮೊದಲ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಬಿ) ಮೂರನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಸಿ) ಐದನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಡಿ) ಒಂಭತ್ತನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ 


ಸರಿಯಾದ ಉತ್ತರ : ಡಿ) ಒಂಭತ್ತನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ 

69. ಭಾರತೀಯ ವಿದ್ಯಾಭವನದ ಸ್ಥಾಪಕರು ಯಾರು ?
ಎ) ಕೆ. ಎಂ. ಮುನ್ಷಿ
ಬಿ) ಸರೋಜಿನಿ ನಾಯ್ಡು
ಸಿ) ವಲ್ಲಭಭಾಯಿ ಪಟೇಲ್
ಡಿ) ರಾಜಗೋಪಾಲಾಚಾರಿ


ಸರಿಯಾದ ಉತ್ತರ: ಎ) ಕೆ. ಎಂ. ಮುನ್ಷಿ 

70. ಸಂದಾಯ ಬಾಕಿ ರಚನೆಯ ಬಂಡವಾಳ ಖಾತೆಯಲ್ಲಿ ಕಂಡು ಬರದ ಅಂಶ ಯಾವುದು ?
ಎ) ಸಾಲಗಳು
ಬಿ) ವಿದೇಶಿ ನೇರ ಹೂಡಿಕೆ
ಸಿ) ವಿದೇಶಿ ಸಾಂಸ್ಥಿಕ ಹೂಡಿಕೆ
ಡಿ) ವಿದೇಶಿ ಸಾಲ
ಆಯ್ಕೆಗಳು :
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1, 2 & 3 ಮಾತ್ರ
ಡಿ) 1, 2, 3 & 4


ಸರಿಯಾದ ಉತ್ತರ: ಡಿ) 1, 2, 3 & 4


71. National Payment Corporation of India ದ ಸ್ಥಾಪನೆ ಯಾದ ವರ್ಷ ಯಾವುದು ?
ಎ) 2008
ಬಿ) 2010
ಸಿ) 2006
ಡಿ) 2004


ಸರಿಯಾದ ಉತ್ತರ: ಎ) 2008 

72. ಅಂತರ್‌ರಾಜ್ಯ ಸರಕು & ಸೇವೆ ತೆರಿಗೆ (Integrated Goods and Service Tax-IGST) ಯನ್ನು ಯಾರು ವಿಧಿಸಿ, ಸಂಗ್ರಹಿಸುತ್ತಾರೆ?
1) ಕೇಂದ್ರ ವಿಧಿಸಿ, ಕೇಂದ್ರ ಸಂಗ್ರಹಿಸುತ್ತದೆ
2) ಕೇಂದ್ರ ವಿಧಿಸಿ, ಎಲ್ಲಾ ರಾಜ್ಯಗಳು ಸಂಗ್ರಹಿಸುತ್ತವೆ
3) ಕೇಂದ್ರ ವಿಧಿಸಿ ಅರ್ಧ ಪಾಲನ್ನು ರಾಜ್ಯಗಳಿಗೆ ವಿತರಿಸುತ್ತದೆ
ಎ) 1 ಮಾತ್ರ ಸರಿ
ಬಿ) 1 ಮತ್ತು 2 ಮಾತ್ರ ಸರಿ
ಸಿ) 1 ಮತ್ತು 3 ಮಾತ್ರ ಸರಿ
ಡಿ) ಎಲ್ಲವೂ ಸರಿಯಾಗಿವೆಸರಿಯಾದ ಉತ್ತರ: ಸಿ) 1 ಮತ್ತು 3 ಮಾತ್ರ ಸರಿ 

73. Asian Development Bank ನ ಏಷ್ಯಾ ಖಂಡದ ADB) ಯ ಸದಸ್ಯ ರಾಷ್ಟ್ರಗಳು ಎಷ್ಟು ?
ಎ) 48 ಸದಸ್ಯರು
ಬಿ) 51 ಸದಸ್ಯರು
ಸಿ) 47 ಸದಸ್ಯರು
ಡಿ) 55 ಸದಸ್ಯರು


ಸರಿಯಾದ ಉತ್ತರ: ಎ) 48 ಸದಸ್ಯರು  

74. TRIPS (Trade-Related Aspects of Intellectual Property Rights)ನ್ನು ಯಾವ ಸಂಸ್ಥೆ ನಿರ್ವಹಿಸುತ್ತದೆ?
ಎ) U.N.D.P.
ಬಿ) W.E.F
ಸಿ) W.H.O
ಡಿ) W.T.O


ಸರಿಯಾದ ಉತ್ತರ: ಡಿ) W.T.O  

75. ಪ್ರಥಮ ಭಾರತೀಯ ವಿಜ್ಞಾನ ಕಾಂಗ್ರೆಸ್ ಎಲ್ಲಿ ನಡೆಯಿತು ?
ಎ) ಮುಂಬೈ
ಬಿ) ಬೆಂಗಳೂರು
ಸಿ) ದೆಹಲಿ
ಡಿ) ಕಲ್ಕತ್ತಾ 


ಸರಿಯಾದ ಉತ್ತರ: ಬಿ) ಯಶೋಧರ ಚರಿತೆ 

76. ಪೆಟ್ರೋಲ್ ಹತ್ತಿಕೊಂಡ ಬೆಂಕಿಯಿಂದ ಈ ಕೆಳಗಿನವುಗಳಲ್ಲಿ ಯಾವುದರಿಂದ ಮಾತ್ರ ನಂದಿಸಬೇಕು ?
ಎ) ನೀರು
ಬಿ) ಮರಳು
ಸಿ) ಮಂಜುಗಡ್ಡೆ
ಡಿ) ಇಂಗಾಲದ ಡೈ ಆಕ್ಸೆಡ್ 


ಸರಿಯಾದ ಉತ್ತರ: ಡಿ) ಇಂಗಾಲದ ಡೈ ಆಕ್ಸೆಡ್ 

77. ಎಂಜೈಮ್ (Enzyme) ಏನು ?
ಎ) ಕಾರ್ಬೋಹೈಡ್ರೆಟ್
ಬಿ) ಪ್ರೋಟಿನ್
ಸಿ) ಕೊಬ್ಬು
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಬಿ) ಪ್ರೋಟಿನ್ 

78. ಸೆಂಟಿಗ್ರೇಡ್ & ಪ್ಯಾರನ್ ಹೀಟ್ ಒಂದೇ ಆಗಿರುವ ಉಷ್ಣತೆ ಯಾವುದು ?
ಎ) +37C
ಬಿ) -37°C
ಸಿ) +40°C
ಡಿ) -40°C


ಸರಿಯಾದ ಉತ್ತರ: ಡಿ) -40°C

79, ಭಾರತೀಯ ವಿದೇಶಿ ವಿನಿಮಯ (Indian Forgien Exchange) ಒಳಗೊಂಡಿರುವ ಸ್ವತ್ತುಗಳಲ್ಲಿ ಯಾವುದು ಹೆಚ್ಚು ಭಾಗ ಇದೆ ?
ಎ) ವಿದೇಶಿ ಕರೆನ್ಸಿ ಸ್ವತ್ತುಗಳು
ಬಿ) ಚಿನ್ನ
ಸಿ) SDR
ಡಿ) IMF ನಲ್ಲಿ ಮೀಸಲು ಸ್ಥಾನ


ಸರಿಯಾದ ಉತ್ತರ : ಎ) ವಿದೇಶಿ ಕರೆನ್ಸಿ ಸ್ವತ್ತುಗಳು 

80. Tax Inspector Without Borders (ಗಡಿರಹಿತ ತೆರಿಗೆ ತಪಾಸಕರು) ಉಪಕ್ರಮವನ್ನು ಯಾರು ಪ್ರಾರಂಭಿಸಿದ್ದಾರೆ?
ಎ) UNDP
ಬಿ) OECD
ಸಿ) A & B
ಡಿ) ಯಾವುದೂ ಅಲ್ಲ

ಸರಿಯಾದ ಉತ್ತರ: ಸಿ) A & B    


81. ಲಿಂಗ ಸಮಾನತೆ (Gender Parity Index) ಸೂಚ್ಯಂಕವನ್ನು ಯಾವ ಸಂಸ್ಥೆ ಬಿಡುಗಡೆ ಮಾಡುತ್ತದೆ ?
ಎ) ವಿಶ್ವ ಆರ್ಥಿಕ ವೇದಿಕೆ (WEF)
ಬಿ) UN Women
ಸಿ) UNESCO
ಡಿ) World Bank


ಸರಿಯಾದ ಉತ್ತರ : ಸಿ) UNESCO 

82. ರಾಷ್ಟ್ರೀಯ ಆ್ಯಂಬಿಯೆಂಟ್ ಏರ್ ಕ್ವಾಲಿಟಿ ಸ್ಟಾಂಡರ್ಸ್ (NAAQS) ನ್ನು ಉಲ್ಲೇಖಿಸಿ, ಹೇಳಿಕೆಗಳಲ್ಲಿ ಸರಿ ಉತ್ತರ ಆರಿಸಿ
1) ಇವುಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನಿರ್ಧರಿಸಿದೆ.
2) CPCB ಗೆ ಈ ಅಧಿಕಾರವನ್ನು ವಾಯು ಮಾಲಿನ್ಯ (ತಡೆ ನಿಯಂತ್ರಣ) ಕಾಯಿದೆ 1981 ಈ ಅಧಿಕಾರವನ್ನು ನೀಡಿದೆ.
3) RA, CO, O, No, So, pm (10, 2.5), NH & ಇನ್ನಿತರ 4 ಮಾಲಿನ್ಯಕಾರಕಗಳನ್ನು ಬಳಸಿ ಗಾಳಿಯ ಗುಣಮಟ್ಟವನ್ನು ಅಳೆಯುತ್ತಾರೆ.
ಸರಿಯಾದ ಹೇಳಿಕೆ
ಎ) 1 ಮಾತ್ರ
ಬಿ) 1 ಮತ್ತು 3 ಮಾತ್ರ
ಸಿ) 1, 2 ಮತ್ತು 3
ಡಿ) 1 ಮತ್ತು 2 ಮಾತ್ರ


ಸರಿಯಾದ ಉತ್ತರ: ಸಿ) 1, 2 ಮತ್ತು 3

83. G-SAP1.0 ನಲ್ಲಿ 'A' ಎಂದರೆ
ಎ) Announcement
ಬಿ) Acquisition
ಸಿ) Accounting
ಡಿ) Atalji


ಸರಿಯಾದ ಉತ್ತರ: ಬಿ) Acquisition 

84. ಸರ್ಕಾರ ಆರಂಭಿಸಿದ ಕಪಿಲಾ ಅಭಿಯಾನದ ಮುಖ್ಯ ಉದ್ದೇಶ?
ಎ) ಬೌದ್ಧಿಕ ಆಸ್ತಿ ಸಾಕ್ಷರತೆ ಮತ್ತು ಪೆಟೆಂಟ್ ಬಗ್ಗೆ ಅರಿವು
ಬಿ) ಮಹಿಳೆಯರಿಗಾಗಿ (STEM) ವೃತ್ತಿಗಳನ್ನು ಉತ್ತೇಜಿಸುವುದು
ಸಿ) ಸೆಣಬಿನ ರೈತರಿಗೆ ಉತ್ತಮ ಬೆಲೆಯನ್ನು ಖಾತ್ರಿ ಪಡಿಸುವುದು
ಡಿ) ಸ್ವ-ಉದ್ಯೋಗಗಳನ್ನು ಉತ್ತೇಜಿಸಲು SHGರಚಿಸುವುದು


ಸರಿಯಾದ ಉತ್ತರ : ಎ) ಬೌದ್ಧಿಕ ಆಸ್ತಿ ಸಾಕ್ಷರತೆ ಮತ್ತು ಪೆಟೆಂಟ್ ಬಗ್ಗೆ ಅರಿವು 

85. ಟ್ರಿಂಕೋಮಲೈ (Trincomali) ಬಂದರು ಎಲ್ಲಿದೆ ?
ಎ) ಈಶಾನ್ಯ ಶ್ರೀಲಂಕಾ
ಬಿ) ಮ್ಯಾನ್ಮಾರ್‌
ಸಿ) ಮಾಲೀವ್
ಡಿ) ದಕ್ಷಿಣ ಶ್ರೀಲಂಕಾ


ಸರಿಯಾದ ಉತ್ತರ : ಎ) ಈಶಾನ್ಯ ಶ್ರೀಲಂಕಾ 

86. 'ಬುದ್ಧ ಏರ್‌ಲೈನ್ಸ್' ಯಾವ ದೇಶದ ವಾಯುಯಾನ ಸಂಸ್ಥೆಯಾಗಿದೆ?
ಎ) ಶ್ರೀಲಂಕಾ
ಬಿ) ಚೀನಾ
ಸಿ) ಕಾಂಬೋಡಿಯಾ
ಡಿ) ನೇಪಾಳ 


ಸರಿಯಾದ ಉತ್ತರ: ಡಿ) ನೇಪಾಳ 

87. ಪೂರ್ವ ಚೀನಾ ಸಮುದ್ರದಲ್ಲಿರುವ ಸೆನಕಾಕು (ಡಿಯೋಯು) ದ್ವೀಪ ಯಾವ ದೇಶಗಳ ಮಧ್ಯೆ ವಿವಾದಲ್ಲಿದೆ ?
ಎ) ಜಪಾನ್ & ವಿಯಟ್ನಾಂ
ಬಿ) ಚೀನಾ & ಸಿಂಗಾಪೂರ್
ಸಿ) ಜಪಾನ್ & ಚೀನಾ
ಡಿ) ಚೀನಾ & ಮಲೇಶಿಯಾ


ಸರಿಯಾದ ಉತ್ತರ: ಸಿ) ಜಪಾನ್ & ಚೀನಾ 

88. ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆಯಾಗಿದೆ
ಲೈಟ್ ಮಷಿನ್ ಗನ್         ದೇಶ
1) ನೆಗೆವ್                     ಇಸ್ರೇಲ್
2) SIG-716                ಅಮೆರಿಕಾ
3) AK-203                  ರಷ್ಯಾ
ಸರಿಯಾದ ಉತ್ತರ
ಎ) 1 ಮಾತ್ರ
ಬಿ) 1 & 2 ಮಾತ್ರ
ಸಿ) 2 & 3 ಮಾತ್ರ
ಡಿ) 1,2,3


ಸರಿಯಾದ ಉತ್ತರ: ಡಿ) 1,2,3 

89. ಯುದ್ಧ ಪೀಡಿತ ಅಫ್ಘಾನಿಸ್ತಾನ್‌ದಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಭಾರತದ ಕಾರ್ಯಾಚರಣೆಯ ಹೆಸರೇನು ?
ಎ) ಸಮುದ್ರ ಸೇತು
ಬಿ) ಆಪರೇಶನ್ ಮೈತ್ರಿ
ಸಿ) ಆಪರೇಷನ್ ದೇವಿ ಶಕ್ತಿ
ಡಿ) ಆಪರೇಶನ್ ಪವನ್


ಸರಿಯಾದ ಉತ್ತರ: ಸಿ) ಆಪರೇಷನ್ ದೇವಿ ಶಕ್ತಿ  

90. Peaceful Mission ಜಂಟಿ ಮಿಲಿಟರಿ ವ್ಯಾಯಾಮವನ್ನು ಯಾರು ನಡೆಸುತ್ತಾರೆ ?
ಎ) BIMSTEC
ಬಿ) NATO
ಸಿ) CSTO
ಡಿ) SCO


ಸರಿಯಾದ ಉತ್ತರ : ಡಿ) SCO  


91. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಯುಎಸ್ಎ ನಡುವೆ ಕೆಳಗಿನ ಯಾವ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ?
1) GSOMIA
2) LEMOA
3) COMCASA
4) BECA
ಸರಿಯಾದ ಆಯ್ಕೆಗಳನ್ನು ಆರಿಸಿ
ಎ) 1 & 2 ಮಾತ್ರ ಸರಿ
ಬಿ) 2 & 4 ಮಾತ್ರ ಸರಿ
ಸಿ) 2, 3 ಮತ್ತು 4 ಮಾತ್ರ ಸರಿ
ಡಿ) 1, 2, 3 & 4 


ಸರಿಯಾದ ಉತ್ತರ: ಡಿ) 1, 2, 3 & 4 

92. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ "ಬ್ಯಾಡ್ ಬ್ಯಾಂಕ್" ಎಂಬ ಪದವನ್ನು ಯಾವುದು ಉತ್ತಮವಾಗಿ ವಿವರಿಸುತ್ತದೆ ?
ಎ) ಮನಿ ಲಾಂಡರಿಂಗ್ & ಮೋಸದ ಚಟುವಟಿಕೆ ಗಳಲ್ಲಿ ತೊಡಗಿರುವರು ಬಳಸುವ ಬ್ಯಾಂಕ್
ಬಿ) ತನ್ನ ಠೇವಣಿದಾರರನ್ನು ಗೌರವಿಸಲು ಸಾಧ್ಯವಾಗದ ಬ್ಯಾಂಕ್
ಸಿ) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾರ್ಯಗತವಲ್ಲದ ಸ್ವತ್ತುಗಳನ್ನು (NPAS) ತೆಗೆದುಕೊಳ್ಳುವ & ಪರಿಹರಿಸುವ ಬ್ಯಾಂಕ್
ಡಿ) ಕೇಂದ್ರೀಯ ಬ್ಯಾಂಕಿನ ನಿಯಮಗಳನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘಿಸುವ ಬ್ಯಾಂಕ್


ಸರಿಯಾದ ಉತ್ತರ: ಸಿ) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾರ್ಯಗತವಲ್ಲದ ಸ್ವತ್ತುಗಳನ್ನು (NPAS) ತೆಗೆದುಕೊಳ್ಳುವ & ಪರಿಹರಿಸುವ ಬ್ಯಾಂಕ್  

93. ಸ್ಯಾಂಡೆಸ್ ಅಪ್ಲಿಕೇಶನನ್ನು ಭಾರತ ಯಾವುದಕ್ಕಾಗಿ ಅಭಿವೃದ್ಧಿಪಡಿಸಿದೆ ?
ಎ) ವಾಟ್ಸಪ್‌ಗೆ ಪರ್ಯಾಯ
ಬಿ) ರಕ್ಷಣಾ & ಅರೆಸೇನಾ ಪಡೆಯ ಪ್ರಯಾಣ ಪೂರೈಸಲು
ಸಿ) ಗಣಿಗಾರಿಕೆ, ಕಳ್ಳತನ ಚಟುವಟಿಕೆ ವರದಿ ಮಾಡಲು
ಡಿ) ಭಾರತೀಯ ರೈಲ್ವೆಯ ಚಟುವಟಿಕೆಗೆ


ಸರಿಯಾದ ಉತ್ತರ: ಎ) ವಾಟ್ಸಪ್‌ಗೆ ಪರ್ಯಾಯ   

94, ಕೆಳಗಿನವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಾಗಿದೆ
ಭಾರತದೊಂದಿಗೆ ವ್ಯಾಯಾಮ                      ದೇಶ
1) ಡಸರ್ಟ್ ಈಗಲ್ (ವಾಯು)                   ಯುಎಇ
2) ಡಸರ್ಟ್ ನೈಟ್ (ವಾಯು)                     ಫ್ರಾನ್ಸ್
3) ಡಸ್ಟಿಕ್ (ಮಿಲಿಟರಿ)                              ಉಜ್ಬೇಕಿಸ್ತಾನ್
4) ಅಲ್‌ಮೊಹದ್ ಅಲ್ ಹಿಂದಿ (ನೌಕಾ)        ಸೌದಿ ಅರೇಬಿಯಾ
5) Corpat (ನೌಕಾ)                              ಥೈಲ್ಯಾಂಡ್
ಎ) 1, 2 ಮತ್ತು 3
ಬಿ) 1, 2, 4 ಮತ್ತು 5
ಸಿ) 1, 2, 3 ಮತ್ತು 4
ಡಿ) 1, 2, 3, 4 ಮತ್ತು 5ಸರಿಯಾದ ಉತ್ತರ: ಡಿ) 1, 2, 3, 4 ಮತ್ತು 5

95. 2032 ರ ಒಲಿಂಪಿಕ್ಸ್ ಕ್ರೀಡಾಕೂಟದ ಆಥಿತ್ಯ ವಹಿಸಲಿರುವ ನಗರ ?
ಎ) ಕತಾರ್
ಬಿ) ಲಾಸ್ ಏಂಜಲೀಸ್
ಸಿ) ಬ್ರಿಸ್ಟನ್
ಡಿ) ಮಾಸ್ಕೋ


ಸರಿಯಾದ ಉತ್ತರ : ಸಿ) ಬ್ರಿಸ್ಟನ್ 

96, ಇತ್ತೀಚೆಗೆ ಸುದ್ದಿಯಲ್ಲಿರುವ ಮಲಯಾಳಿ ಬುಡಕಟ್ಟು ಜನ ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾರೆ ?
ಎ) ಕರ್ನಾಟಕ
ಬಿ) ಪಾಂಡಿಚೇರಿ
ಸಿ) ಕೇರಳ
ಡಿ) ತಮಿಳು ನಾಡು


ಸರಿಯಾದ ಉತ್ತರ: ಡಿ) ತಮಿಳು ನಾಡು 

97. ಡಿಜಿಟಲ್ ಪೇಮೆಂಟ್ ಸೂಚ್ಯಾಂಕವನ್ನು (DPI) ಯಾರು ಹೊರಡಿಸುತ್ತಾರೆ ?
ಎ) NPCI
ಬಿ) SBI
ಸಿ) RBI
ಡಿ) ಹಣಕಾಸು ಸಚಿವಾಲಯ


ಸರಿಯಾದ ಉತ್ತರ: ಸಿ) RBI

98. 2021ರ ಯುಎಸ್‌ಎ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ವಿಜೇತ ಎಮಾ ರಾಡುಕಾನು ಯಾವ ದೇಶದವರು ?
ಎ) ಸ್ವಿಟ್ಟರ್‌ಲ್ಯಾಂಡ್
ಬಿ) ಅಮೆರಿಕಾ
ಸಿ) ಜಪಾನ್
ಡಿ) ಇಂಗ್ಲೆಂಡ್ 


ಸರಿಯಾದ ಉತ್ತರ : ಡಿ) ಇಂಗ್ಲೆಂಡ್ 

99. ಬ್ರಿಕ್ಸ್ ಕ್ರೀಡಾಕೂಟ 2021ನ್ನು ಆಯೋಜಿಸುವ ದೇಶ
ಎ) ಚೀನಾ
ಬಿ) ರಷ್ಯಾ
ಸಿ) ಭಾರತ 
ಡಿ) ಬ್ರೆಜಿಲ್


ಸರಿಯಾದ ಉತ್ತರ : ಸಿ) ಭಾರತ 

100. ವೀರಪ್ಪ ಮೊಯ್ಲಿಯವರು ಯಾವ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು ?
ಎ) ಕುಡಿ ಎಸರು
ಬಿ) ರಾಮಾಯಣ ಮಹಾನ್ವೇಷಣಂ
ಸಿ) ಅನುಶ್ರೇಣಿ ಯಜಮಾನಿಕೆ
ಡಿ) ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ 


ಸರಿಯಾದ ಉತ್ತರ: ಡಿ) ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ 

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

ಮಾಹಿತಿ ಸೌಜನ್ಯ : Chiguru Coaching Center, Dharwad.

No comments:

Post a Comment

If you have any doubts please let me know

Popular Posts

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Buy Products

Most Useful Notes

Recent Posts

Useful PDF Notes

Important PDF Notes

Ads