ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

General Kannada Question Answers in for All Competitive Exams-01

General Kannada Question Answers in for All Competitive Exams-01



💥💥💥💥

1. 'ಕುಸುಮಬಾಲೆ' ಈ ಕಾದಂಬರಿಯ ಕರ್ತೃ?
ಎ) ಭೈರಪ್ಪ 
ಬಿ) ಲಂಕೇಶ 
ಸಿ) ಶ್ರೀನಿವಾಸ
ಡಿ) ದೇವನೂರು ಮಹಾದೇವ

Answer : ಡಿ) ದೇವನೂರು ಮಹಾದೇವ

ವಿವರಣೆ : 1948ರಲ್ಲಿ ಹುಟ್ಟಿದ ಮಹಾದೇವ ಅವರು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವನೂರಿನವರು. ದೇವನೂರು ನಂಜನಗೂಡು ಮತ್ತು ಮೈಸೂರಿನಲ್ಲಿ ವ್ಯಾಸಂಗ ಮಾಡಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಕೆಲ ಕಾಲ ಕೆಲಸ ಮಾಡಿ ಈಗ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲಸಿದ್ದಾರೆ. ಇವರ ಪ್ರಸಿದ್ಧ ಕೃತಿಗಳು ದ್ಯಾವಾನೂರು 'ಒಡಲಾಳ', ಕುಸುಮಬಾಲೆ. ಒಡಲಾಳ ಕೃತಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್‌ 1984ರ ಉತ್ತಮ‌ ಸೃಜನಶೀಲ ಕೃತಿಯೆಂದು ಗೌರವಿಸಿದೆ. 1991ರಲ್ಲಿ ಇವರ 'ಕುಸುಮ ಬಾಲೆ'ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಮಹಾದೇವ ಅವರು 1989ರಲ್ಲಿ ಅಮೇರಿಕದಲ್ಲಿ ನಡೆದ ಇಂಟರ್ ನ್ಯಾಷನಲ್ ರೈಟಿಂಗ್ ಪ್ರೊಗ್ರಾಂನಲ್ಲಿ ಭಾಗವಹಿಸಿದ್ದರು. ಇದಲ್ಲದೆ 'ನರ ಬಂಡಾಯ' ಎಂಬ ಪತ್ರಿಕೆ ನಡೆಸುತ್ತಿದ್ದು, ಮುಂದೆ ಅದು 'ಪಂಚಮಿ' ಎಂದಾಯಿತು. ಹಲವಾರು ವಿಚಾರ ಲೇಖನ ಗಳನ್ನು ಬರೆದಿರುವ ಮಹಾದೇವ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸ್ಥಾಪಕರಲ್ಲೊಬ್ಬರು. ಕನ್ನಡದ ಸತ್ವಯುತ ಬರಹಗಾರರಾದ ಮಹಾದೇವ ಬರೆಯುವುದು ಅಪರೂಪ ಬರೆದರೆ ಸತ್ವಯುತವಾದದ್ದನ್ನೆ ಬರೆಯುತ್ತಾರೆ.


02. ಕನ್ನಡದ ಮೊದಲ 'ಗದ್ಯ ಕೃತಿ'?

ಎ) ವಡ್ಡಾರಾಧನೆ

ಬಿ) ಪಂಚತಂತ್ರ

ಸಿ) ಧರ್ಮಾಮೃತ 

ಡಿ) ಜೈಮಿನಿ ಭಾರತ



Answer : ಎ) ವಡ್ಡಾರಾಧನೆ 

ವಿವರಣೆ : ವಡ್ಡಾರಾಧನೆ 920 ಶಿವಕೋಟ್ಯಾಚಾರ ಬರೆದಿರುವನೆಂದು ನಂಬಲಾಗಿರುವ 'ವಡ್ಡಾರಾಧನೆ' ಜೈನ ಧಾರ್ಮಿಕ (ನೋಂಪಿ) ಕಥೆಗಳ ಸಂಗ್ರಹ 🌺 ಇದು ನಮಗೆ ಪಂಪ ಪೂರ್ವ ಯುಗದಲ್ಲಿ ದೊರೆತಿರುವ ಕನ್ನಡದ ಮೊದಲ ಗದ್ಯ ಕೃತಿಯಾಗಿದೆ. ಈ ಕೃತಿಯಲ್ಲಿ 19 ಜೈನ ಕಥೆಗಳು ನಿರೂಪಿತವಾಗಿದ್ದು ಇದಕ್ಕೆ ಹರಿಷೇಣನ 'ಕಥಾಕೋಶ' ಮೂಲ ಆಕರ ಎಂಬುದಾಗಿ ವಿದ್ವಾಂಸರ ಅಭಿಪ್ರಾಯ.



03. 03.  `ಭೂಜಾತೆ' ಯಾರೆಂದರೆ?
ಎ) ಸೀತೆ 
ಬಿ) ಕೈಕೆಯಿ 
ಸಿ) ಮಂಥರೆ
ಡಿ) ಸುಮಿತ್ರೆ

Answer : ಎ) ಸೀತೆ

ವಿವರಣೆ : ಇಲ್ಲಿ ಕೈಕೇಯ ಭರತನ ತಾಯಿಯಾಗಿದ್ದಾಳೆ ಹಾಗೆ ಮಂಥರೆ ಕೈಕೇಯ ದಾಸಿಯಾಗಿದ್ದಾಳೆ. ಮತ್ತು ಸುಮಿತ್ರೆ ಲಕ್ಷ್ಮಣನ ತಾಯಿ, ದಶರಥನ ಹೆಂಡತಿ, ಭೂಜಾತೆ ಎಂದರೆ ಸೀತೆ, ಭೂ ಎಂದರೆ ಭೂಮಿ, ಜಾತ-ಎಂದರೆ ಹುಟ್ಟಿದ. ಹಾಗಾಗಿ ಭೂಜಾತೆ, ಎಂದರೆ ಭೂಮಿಯಲ್ಲಿ ಹುಟ್ಟಿದವಳು ಎಂದರ್ಥ, ಅವಳೇ ಸೀತೆ.


04. 'ಹೃದಯ ಶಾರದೆ' ಇಲ್ಲಿರುವ ಅಲಂಕಾರ?

ಎ) ರೂಪಕ

ಬಿ) ಉಪಮಾ

ಸಿ) ಶೇಷ

ಡಿ) ದೃಷ್ಟಾಂತ



Answer : ಎ) ರೂಪಕ 

ವಿವರಣೆ : ಎರಡು ವಸ್ತುಗಳನ್ನು (ಉಪಮಾನ ಉಪಮೇಯ) ಪರಸ್ಪರ ಹೋಲಿಸುವಾಗ “ಒಂದರಂತೆ ಮತ್ತೊಂದಿದೆ” ಎಂದು ಹೋಲಿಕೆ ಎದ್ದು ಕಾಣುವಂತೆ ವರ್ಣಿಸದೆ ಅದೇ ಇದು ಇದೇ ಅದು ಎನ್ನುವ ಹಾಗೆ ಅಭೇದವಾಗಿ ವರ್ಣಿಸುವುದೇ ರೂಪಕ ಅಲಂಕಾರ.


05. ಬೆಟ್ಟ+ತಾವರೆ=ಬೆಟ್ಟದಾವರೆ- ಇದು?

ಎ) ಯಣ್ ಸಂಧಿ
ಬಿ) ಲೋಪ ಸಂಧಿ
ಸಿ) ಆದೇಶ ಸಂಧಿ
ಡಿ) ಆಗಮ ಸಂಧಿ



Answer : ಸಿ) ಆದೇಶ ಸಂಧಿ

ವಿವರಣೆ : ಆದೇಶ ಸಂಧಿ : ಆದೇಶ ಎಂದರೆ ಒಂದು ವರ್ಣವನ್ನು ಹೊಡೆದು ಹಾಕಿ ಅದರ ಸ್ಥಾನದಲ್ಲಿ ಇನ್ನೊಂದು ವರ್ಣ ಬಂದು ನಿಲ್ಲುವುದು.

▶ ನಿಯಮ :- ಉತ್ತರ ಪದದ ಆದಿಯಲ್ಲಿರುವ ಕ, ತ,ಪ ಸ್ಥಾನಗಳಿಗೆ ಸಂಧಿಯಾಗುವಾಗ ಗ,ದ,ಬ ಗಳು ಬಂದು ನಿಂತರೇ ಅದನ್ನು ಆದೇಶ ಸಂಧಿ ಅಥವಾ ಗದಬಾದೇಶ ಸಂಧಿ ಎನ್ನುತ್ತವೆ.

ಉದಾಹರಣೆಗಳು :

ಹಣೆ + ಕಣ್ಣು = ಹಣೆಗಣ್ಣು

ಹಂದರ + ಕಂಬ = ಹಂದರಗಂಬ

ಹೊಸ + ಕನ್ನಡ = ಹೊಸಗನ್ನಡ

ನಡು + ಕನ್ನಡ = ನಡುಗನ್ನಡ

ಸಿರಿ + ಕನ್ನಡ = ಸಿರಿಗನ್ನಡ

ಕಿಡಿ + ಕಣ್ಣು = ಕಿಡಿಗಣ್ಣು

ಬೆಟ್ಟ + ತಾವರೆ = ಬೆಟ್ಟದಾವರೆ

ಕೆಳ + ತುಟಿ = ಕೆಳದುಟಿ

ಮೈ + ತೊಳೆ = ಮೈದೊಳೆ

ಮೈ + ತುಂಬಿ = ಮೈದುಂಬಿ

ಹುಲಿ + ತೊಗಲು ಹುಲಿದೊಗಲು

ಬೆನ್ + ಪತ್ತು = ಬೆಂಬತ್ತು

ಕಣ್ + ಪನಿ = ಕಂಬನಿ

ಹೂ + ಪುಟ್ಟಿ = ಹೂಬುಟ್ಟಿ

▶ ಕೆಲವು ಸಂದರ್ಭಗಳಲ್ಲಿ ಉತ್ತರ ಪದದ ಆದಿ ಯಲ್ಲಿರುವ ಪ್,ಬ್,ಮ್, ಗಳ ಸ್ಥಾನದಲ್ಲಿ ಸಂಧಿಯಾಗುವಾಗ 'ವ್' ಕಾರವಾಗಿ ಬದಲಾದರೆ ಇದನ್ನು ಆದೇಶ ಸಂಧಿ ಎನ್ನುತ್ತೇವೆ.

▶ ಬೆಟ್ಟ + ತಾವರೆ = ಬೆಟ್ಟದಾವರೆ ಉತ್ತರ ಪದದ

ಆದಿಯಲ್ಲಿರುವ 'ತ್' (ತಾವರೆ) ಕಾರವನ್ನು ಹೊಡೆದು ಹಾಕಿ ಸಂಧಿಯಾಗುವಾಗ ಅದೇ ಸ್ಥಾನದಲ್ಲಿ 'ದ್' (ದಾವರೆ) ಕಾರ್ ಆದೇಶವಾಗಿ ಬಂದಿದೆ. ಇದಕ್ಕೆ ಆದೇಶ ಸಂಧಿ ಎನ್ನುವರು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area