ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Chapterwise Question and Answers in Science Topics Asked in Previous Competitive Examinations

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ವಿಜ್ಞಾನ ವಿಷಯದ ಅಧ್ಯಾಯವಾರು ಪ್ರಶ್ನೆ ಹಾಗೂ ಉತ್ತರಗಳು

Chapterwise Question and Answers in Science Topics Asked in Previous Competitive Examinations


💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥💥

ಮುಂಬರುವ ಕೆಪಿಎಸ್ಸಿ ಕೆಎಎಸ್, ಪಿಎಸ್ಐ, ಪಿಡಿಒ, ಎಫ್‌ಡಿಎ, ಎಸ್ಡಿಎ, ಪಿಎಸ್ಐ ಪಿಸಿ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ವಿಜ್ಞಾನ ವಿಷಯದ ಪ್ರಮುಖ ಪ್ರಶ್ನೆಗಳು ಹಾಗೂ ಉತ್ತರಗಳು..!!

ಘಟಕ -1: ಜೀವಕೋಶಗಳ ಅಧ್ಯಯನ


1) ಹೀರುಕಾಗದವು ಶಾಹಿಯನ್ನು ಹೀರುವ ಕ್ರಿಯೆಯು ಇದನ್ನು ಒಳಗೊಳ್ಳುತ್ತದೆ. (PSI - 2020)
* ಲೋಮನಾಳ ಕ್ರಿಯೆ

2) ಲೋಮನಾಳಿಯತೆಯೊಂದೇ ಕಾರಣವಾಗದ್ದು ಯಾವುದು? (PSI - 2019)
* ಭೂ ಅಂತರ್ಗತ ಜಲದ ಮಟ್ಟದ ಏರುವಿಕೆ

3) ಸಸ್ಯಕೋಶಗಳು ಪ್ರಾಣಿಕೋಶಕ್ಕಿಂತ ವಿಭಿನ್ನವಾಗಿ ಹೊಂದಿರುವಂತಹದ್ದು? (PSI-2018)
* ಕೋಶಗೋಡೆ  

4) ಯಕಾರಿಯೋಟಿಕ್ ಕೋಶ ಎಂದರೇನು? (ಜೀವಕಣಗಳಲ್ಲಿ) (SDA-2015)
* ಟ್ರುನ್ಯೂಕ್ಲಿಯಸ್ (ನಿಜವಾದ ನ್ಯೂಕ್ಲಿಯಸ್)

5) ಬಯಲು ಜಮೀನಿನಲ್ಲಿನ ನೀರು ಗಿಡದ ಎಲೆಗಳನ್ನು ಯಾವ ವಿಧಾನದಿಂದ ತಲುಪುತ್ತದೆ. (FDA-2008)
* ಕೇಶನಾಳಾಕರ್ಶಣ

6) ಬ್ಲಾಟಿಂಗ್ ಕಾಗದವು ಶಾಹಿಯನ್ನು ಹೇಗೆ ಹೀರಿಕೊಳ್ಳುತ್ತದೆ? (FDA-2011)
* ಅಧಿಶೋಷಣೆಯ ಮೂಲಕ

7) ಜೀವಕೋಶದಲ್ಲಿ ಪ್ರೋಟಿನ್ ಸಂಯೋಜನೆ ನಡೆಯುವುದು. (PC-2015)
* ರಿಬೋಸೋಮ್

8) ಒಂದೇ ಕೋಶ ಮೂಲದಿಂದ ಉತ್ಪತ್ತಿಯಾದ ಕೋಶ ಸಮೂಹವನ್ನು ಏನೆಂದು
ಕರೆಯುತ್ತಾರೆ? (IAS)
* ಕ್ಲೋನ್


9) ಭೂಮಿಯ ಪ್ರಾಚೀನ ಘಟ್ಟದ ವಾತಾವರಣದಲ್ಲಿ ಈ ಅನಿಲ ಇರಲಿಲ್ಲ. (KAS-2005)
* ಆಮ್ಲಜನಕ


10) ಜೀವಕೋಶದ ಶಕ್ತಿ ಗೃಹ ಯಾವುದು (KAS-2010) 
* ಮೈಟೋಕಾಂಡ್ರಿಯ


11) ಕೊಮೆಟೊಗ್ರಫಿ ಎಂದರೆ? (FDA-1997)
* ಒಂದು ಮಿಶ್ರಣದ ರಾಸಾಯನಿಕ ಘಟಕಗಳನ್ನು ಪ್ರತ್ಯೇಕಿಸುವ ತಂತ್ರ


12) ಆಧುನಿಕ ಔಷಧಿಶಾಸ್ತ್ರದ ಪಿತಾಮಹ? (SDA-2017) 
* ಹಿಪೊಕ್ರೆಟಿಸ್


13) ಭಾರತೀಯ ವಿಜ್ಞಾನ ಸಂಸ್ಥೆ ಯನ್ನು ಯಾವಾಗ ಸ್ಥಾಪಿಸಲಾಯಿತು.(PSI-2017)
* 1909


14) ಜೀವಕೋಶದ ಶಕ್ತಿ ಕೇಂದ್ರ ಎಂದು ಯಾವುದನ್ನು ಕರೆಯಲಾಗುತ್ತದೆ? (PSI-2017)
ಮೈಟೊಕಾಂಡ್ರಿಯ


15) ಜೀವಕೋಶಗಳನ್ನು ಎಣಿಸಲು ಬಳಸುವ ಮಾಪನ? (RSI-HK-2015)
ಸೈಟೋಮೀಟರ್


16) ವರ್ಣತಂತುವಿನಲ್ಲಿ ಸೆಂಟ್ರೋಮಿಯರ್ ಯಾವುದನ್ನು ಹೊಂದುತ್ತದೆ? (KES)
ಪ್ರೈಮರಿ ಕಾನ್ ಸ್ಟ್ರಿಕ್ಷನ್


17) 'ಜೀವಕೋಶಗಳ ಗುಂಪಾದ ಹಶದಿಂಡು' (ಕಾರ್ಪಸ್ ಲ್ಯುಟೆಯಮ್) ಯಾವುದರಲ್ಲಿ ಇರುತ್ತದೆ?
* ಅಂಡಾಶಯ


18) ಎರಡು ಅನುಕ್ರಮ ಕೋಶಕೀಣ ವಿಭಜನೆಗಳ ನಡುವಿನ ವಿಶ್ರಾಂತ ಹಂತ ಅಥವಾ
ವಿಭಜನೆಯಿಲ್ಲದ ಹಂತವನ್ನು ಹೀಗೆನ್ನುತ್ತಾರೆ. (GPS-Grad-2)
* ಇಂಟರ್ ಫೇಸ್

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area