ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Top-10 Science Question Answers in Kannada for All Competitive Exams-01

Top-10 Science Question Answers in Kannada for All Competitive Exams-01


Top-10 Science Question Answers in Kannada for All Competitive Exams-01

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ವಿವರಣೆ ಸಹಿತ ಸಾಮಾನ್ಯ ವಿಜ್ಞಾನದ ಟಾಪ್-10 ಪ್ರಶ್ನೋತ್ತರಗಳು"

💥💥💥💥




1. ವಾಹನಗಳಲ್ಲಿ ಹಿಂದಿನ ರಸ್ತೆಯನ್ನು ನೋಡಲು ಚಾಲಕರು ಬಳಸುವ ದರ್ಪಣ ಯಾವುದು?
ಎ) ಪೀನ ದರ್ಪಣ
ಬಿ) ನಿಮ್ನa ದರ್ಪಣ
ಸಿ) ಸಮತಲ ದರ್ಪಣ
ಡಿ) ನಿಮ್ನ ಪೀನ ದರ್ಪಣ


ಸರಿಯಾದ ಉತ್ತರ : ಎ) ಪೀನ ದರ್ಪಣ 

ವಿವರಣೆ : ವಾಹನಗಳಲ್ಲಿ ಹಿಂದಿನ ರಸ್ತೆಯನ್ನು ನೋಡಲು ಚಾಲಕರು ಬಳಸುವ ದರ್ಪಣ ಪೀನ ದರ್ಪಣ ಏಕೆಂದರೆ ಹೊರ ಅಂಚಿನ ಕಡೆಗೆ ವಕ್ರತೆಯನ್ನು ಹೊಂದಿರುವುದರಿಂದ ಇವುಗಳ ದೃಷ್ಠಿ ಕ್ಷೇತ್ರವು ಬಹಳ ಅಧಿಕವಾಗಿರುತ್ತದೆ. ಸಮತಲ ದರ್ಪಣಕ್ಕೆ ಹೋಲಿಸಿದರೆ ಪೀನ ದರ್ಪಣಗಳು ಚಾಲಕರಿಗೆ ಅವರ ಹಿಂಭಾಗದ ಹೆಚ್ಚಿನ ಕ್ಷೇತ್ರವನ್ನು ವೀಕ್ಷಿಸಲು ಸಹಾಯಕವಾಗಿದೆ.



2. ಮರೀಚಿಕೆಯು (Mirage) ಉಂಟಾಗುವುದು
ಎ) ಹೆಚ್ಚಿನ ಉಷ್ಣತೆಯಲ್ಲಿ ಗಾಳಿಯು ಬೆಳಕನ್ನು ಅತಿಯಾಗಿ ಹೀರುವುದರಿಂದ
ಬಿ) ಉಷ್ಣತೆ ಬದಲಾದಂತೆ ಗಾಳಿಯು ವಕ್ರೀಭವನ ಸೂಚಕ ಬದಲಾಗುವುದರಿಂದ
ಸಿ) ಸಂಪೂರ್ಣ ಆಂತರಿಕ ಪ್ರತಿಫಲನದಿಂದ
ಡಿ) ಹೆಚ್ಚಿನ ಉಷ್ಣತೆಯಲ್ಲಿ ಗಾಳಿಯು ಬೆಳಕಿನ ಹೀರುವಿಕೆ.


ಸರಿಯಾದ ಉತ್ತರ : ಸಿ) ಸಂಪೂರ್ಣ ಆಂತರಿಕ ಪ್ರತಿಫಲನದಿಂದ

ವಿವರಣೆ : ಬೆಳಕು ಹೆಚ್ಚು ಸಾಂದ್ರತೆಯಿಂದ ಕಡಿಮೆ ಸಾಂದ್ರತೆ ಮಾಧ್ಯಮಕ್ಕೆ ಪ್ರಸರಿಸುವಾಗ ಬೆಳಕಿನ ಕಿರಣಗಳು ಮಾದ್ಯಮಗಳು ಭೇರ್ಪಡಿಸುವ ಮೈ ಮೇಲಿನ ಪಥನ ಬಿಂದುವಿನಲ್ಲಿ ಲಂಬದಿಂದ ದೂರವಾಗಿ ಬಾಗುತ್ತದೆ. ಮತ್ತು ಸ್ವಲ್ಪ ಬೆಳಕು ಸಾಂದ್ರ ಮಾಧ್ಯಮದೊಂದಿಗೆ ಪ್ರತಿಫಲಿಸುತ್ತದೆ. ಇಂತಹ ಪ್ರತಿಫಲನವನ್ನು ಸಂಪೂರ್ಣ ಆಂತರಿಕ ಪ್ರತಿಫಲನವೆನ್ನುವರು.


ಉದಾ: 1) ವಜ್ರಗಳು ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವುದು.

2) Optical fibre ಈ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.

3) ಬೈಸಿಕಲ್ ಪ್ರತಿಫಲಕ ಮತ್ತು Mirage.



3. ಸೂರ್ಯನ ಬೆಳಕಿನ ವರ್ಣಪಟಲದಲ್ಲಿ 7 ಬಣ್ಣಗಳಿವೆ. ಎನ್ನುವುದಾದರೇ ಮಧ್ಯದಲ್ಲಿರುವ ಬಣ್ಣ ಯಾವುದು?
ಎ) ನೀಲಿ
ಬಿ) ಹಸಿರು
ಸಿ) ಹಳದಿ
ಡಿ) ನೇರಳೆ


 ಸರಿಯಾದ ಉತ್ತರ : ಬಿ) ಹಸಿರು

ವಿವರಣೆ : VIBGYOR ಸೂರ್ಯನ ಬೆಳಕು ಏಳು ವರ್ಣಗಳು ಮಿಶ್ರಣಗೊಂಡು ಭೂಮಿಗೆ ಬರುತ್ತವೆ. ಈ ಬೆಳಕಿನಲ್ಲಿರುವ ವರ್ಣಗಳೆಂದರೆ ನೇರಳೆ ಇಂಡಿಗೊ, ನೀಲಿ, ಹಸಿರು, ಹಳದಿ, ಕಿತ್ತಳೆ, ಕೆಂಪು, ಈ ಬಣ್ಣಗಳ ಕ್ರಮದಲ್ಲಿ ಮದ್ಯದ ಬಣ್ಣವೆಂದರೆ ಹಸಿರು ಬಣ್ಣವಾಗಿದೆ.



4. ಆಕಾಶವು ನೀಲಿಯಾಗಿ ಕಂಡು ಬರಲು ಕಾರಣವೇನು?
ಎ) ಆಕಾಶವು ವಾಸ್ತವವಾಗಿ ನೀಲಿ ಬಣ್ಣವನ್ನು ಹೆಚ್ಚು ಚದುರಿಸುವುದರಿಂದ
ಬಿ) ಆಕಾಶವು ನೀಲಿಯಾಗಿರುವ ಸಾಗರದ ಬಣ್ಣವನ್ನು ಪ್ರತಿಬಿಂಬಿಸುವುದು.
ಸಿ) ಆದ್ದರಿಂದ ನೀಲಿ ಅಲೆಗಳಾಗಿದ್ದು ಇದನ್ನು ಧೂಳಿನ ಕಣ ಮತ್ತು ನೀರಿನ ಆವಿ ಚದುರಿಸುತ್ತದೆ. ಮತ್ತು ಉಳಿದ ಬಣ್ಣಗಳು ಈ ಪ್ರಭಾವಕ್ಕೆ ಒಳಗಾಗುವುದಿಲ್ಲ.
ಡಿ) ಯಾವುದೂ ಅಲ್ಲ.


ಸರಿಯಾದ ಉತ್ತರ : ಎ) ಆಕಾಶವು ವಾಸ್ತವವಾಗಿ ನೀಲಿ ಬಣ್ಣವನ್ನು ಹೆಚ್ಚು ಚದುರಿಸುವುದರಿಂದ

ವಿವರಣೆ :

ಬೆಳಕಿನ ಚದುರುವಿಕೆಯಿಂದ ಆಕಾಶವು ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. ವಾತಾವರಣದಲ್ಲಿ ಹೆಚ್ಚಾಗಿ ಬೆಳಕು ನೀಲಿ ಬಣ್ಣವನ್ನು ಚದುರಿಸುವುದರಿಂದ ಆಕಾಶ ನೀಲಿಯಾಗಿ ಕಾಣುತ್ತದೆ. ಇದನ್ನು “ರಾಮನ್ ಚದುರುವಿಕೆ” ಎನ್ನುತ್ತೇವೆ. C.V, ರಾಮನ್ ರವರು ರಾಮನ್ ಚದುರುವಿಕೆ ಪರಿಣಾಮವನ್ನು ವಿವರಿಸಿ 1930 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಭಾರತದಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪಡೆದ ಪ್ರಥಮ ವ್ಯಕ್ತಿ.



5. ಸೂರ್ಯನ ಕಿರಣ ನೀರಿನ ಹನಿಯ ಮೇಲೆ ಬಿದ್ದಾಗ ಕಾಮನ ಬಿಲ್ಲು ಉಂಟಾಗುತ್ತದೆ. ಇದಕ್ಕೆ ಯಾವ ಭೌತಿಕ ನೀತಿ ಕಾರಣ.
ಎ) ಸೂರ್ಯನ ಕಿರಣದ ಚದುರುವಿಕೆ ನೀರಿನ ಹನಿಯಿಂದಾಗಿ
ಬಿ) ನೀರಿನ ಮುಖಾಂತರ ಕಿರಣದ ಹರಡುವಿಕೆ
ಸಿ) ಕಿರಣಗಳ ಪ್ರತಿಬಿಂಬಿಸುವಿಕೆ ಹಾಗೂ ವಕ್ರೀಭವನ ನೀರಿನ ಹನಿಗಳಿಂದಾಗಿ
ಡಿ) ನೀರಿನ ಹನಿಗಳ ಐನೋಸ್ಯೆಶನ್‌ನಿಂದ


ಸರಿಯಾದ ಉತ್ತರ : ಸಿ) ಕಿರಣಗಳ ಪ್ರತಿಬಿಂಬಿಸುವಿಕೆ ಹಾಗೂ ವಕ್ರೀಭವನ ನೀರಿನ ಹನಿಗಳಿಂದಾಗಿ

ವಿವರಣೆ : ಸೂರ್ಯನ ಕಿರಣ ನೀರಿನ ಹನಿಯಿಂದ ಮೇಲೆ ಬಿದ್ದಾಗ ಕಾಮನ ಬಿಲ್ಲು ಉಂಟಾಗುತ್ತದೆ. ಇದು ಕಿರಣಗಳ ಪ್ರತಿ ಬಿಂಬಿಸುವಿಕೆ ಕಿರಣ ಹಾಗೂ ವಕ್ರೀಭವನ ನೀರಿನ ಹನಿಗಳಿಂದಾಗಿ ಉಂಟಾಗುತ್ತದೆ.



6. ಬಣ್ಣ ಕುರಡಿನ ವ್ಯಕ್ತಿಗೆ ಯಾವ ಬಣ್ಣ ಕಾಣುವುದಿಲ್ಲ
ಎ) ಹಸಿರು
ಬಿ) ಕೆಂಪು
ಸಿ) ಕಪ್ಪು
ಡಿ) ಕೆಲವು ಬಣ್ಣಗಳು


ಸರಿಯಾದ ಉತ್ತರ : ಎ) ಹಸಿರು

ವಿವರಣೆ : ಕೆಲವು ವ್ಯಕ್ತಿಗಳ ಸಂಕೇತ ದೀಪಗಳ ಬಣ್ಣಗಳನ್ನು ಗುರುತಿಸಲು ಅಸಮರ್ಥವಾಗಿರುತ್ತಾರೆ. ಇದಕ್ಕೆ ವರ್ಣಾಂಧತೆ (Colour blindness) ಎಂದು ಹೆಸರು. ಇವರು ಹಸಿರು ಬಣ್ಣಗಳನ್ನು ಗುರುತಿಸಲಾರರು. ಕಣ್ಣಿನಲ್ಲಿರುವ ಒಂದು ಅಥವಾ ಹೆಚ್ಚಿನ ಬೆಳಕು ಸೂಕ್ಷ ಕೋನ ಕೋಶಗಳ ಸಂವೇದನೆ ಬದಲಾವಣೆ ಅಥವಾ ಕಡಿಮೆಯಾಗುವುದರಿಂದ ಬಣ್ಣ ಕುರುಡುತನ ಉಂಟಾಗುತ್ತದೆ.




7. ಗುರುತ್ವಾಕರ್ಷಣ ನಿಯಮವನ್ನು ಕಂಡುಹಿಡಿದ ವಿಜ್ಞಾನಿ
ಎ) ಸರ್ ಐಸಾಕ್ ನ್ಯೂಟನ್ 
ಬಿ) ಮೇಡಂ ಕ್ಯೂರಿ
ಸಿ) ಗೆಲಿಲಿಯೋ
ಡಿ) ಡಾರ್ವಿನ್


ಸರಿಯಾದ ಉತ್ತರ : ಎ) ಸರ್ ಐಸಾಕ್ ನ್ಯೂಟನ್

ವಿವರಣೆ :  ಬೆಳಕಿನ ವಿಭಜನೆ, ಗುರುತ್ವಾಕರ್ಷಣ, ನಿಯಮವನ್ನು ಕಂಡು ಹಿಡಿದವರು ಸರ್, ಐಸಾಕ್ ನ್ಯೂಟನ್‌ರವರು, ಇವರ ಪುಸ್ತಕ ಪಿಲಾಸಫಿಯೊ ನ್ಯಾಚುರಲ್ ಪ್ರಿನ್ಸಿಪಿಯಾ ಮ್ಯಾಥಮೆಟಿಕಾ.

⏯ ರೇಡಿಯಂ ಧಾತುವಿನಲ್ಲಿ ವಿಕಿರಣಪಟುತ್ವ ಹಾಗೂ ಮೋಲೊನಿಯಂ ಧಾತುವನ್ನು ಆವಿಷ್ಕರಿಸಿದವರು ಮೇಡಂ ಕ್ಯೂರಿ.

⏯ ದೂರದರ್ಶಕ, ಗುರು ಗ್ರಹದ ಉಪಗ್ರಹಗಳು ಮತ್ತು ಸರಳ ಲೋಲಕವನ್ನು ಆವಿಷ್ಕರಿಸಿದ ವಿಜ್ಞಾನಿ ಗೆಲಿಲಿಯೋ.

⏯  ಜೀವ ವಿಕಾಸವಾದವನ್ನು ಪ್ರತಿಪಾದಿಸಿದ ವಿಜ್ಞಾನಿ ಡಾರ್ವಿನ್.




 8. ಮಳೆಯ ಹನಿಗಳು ಉಂಟಾಗಿರುವುದಕ್ಕೆ ಕಾರಣ?
ಎ) ನಿರಂತರ ರಾಷ್ಟ್ರೀಕರಣ (ಅನಿಯಾಗುವಿಕೆ)
ಬಿ) ನೀರಿನ ಅಂಟುಗುಣ
ಸಿ) ಗಾಳಿಯ ತಿಕ್ಕಾಟ
ಡಿ) ನೀರಿನ ಮೇಲ್ವೆ ಒತ್ತಡ


ಸರಿಯಾದ ಉತ್ತರ : ಡಿ) ನೀರಿನ ಮೇಲ್ವೆ ಒತ್ತಡ

ವಿವರಣೆ: 

⏭ ಅತಿ ಶುದ್ಧವಾದ ನೀರು ಮಳೆ ನೀರು

⏭ ಮಳೆ ಹನಿಯು ಕ್ರಿಸ್ಟಲ್ ಆಕಾರದಲ್ಲಿ ಬೀಳುವುದು.

⏭ ಕೃತಕ ಮಳೆ ತರಲು ಸಿಲ್ವರ್ ಐಯೋಡೈಡನ್ನು ಬಳಸುವರು.

⏭ ಮಳೆ ಬಿದ್ದ ಪ್ರಮಾಣ ತಿಳಿಯಲು ರೇನ್ ಗೇಜ್‌ನ ಮಾಪಕ ಬಳಸುವರು.

⏭ ಮಳೆ ಹನಿಯು ಭೂಮಿಗೆ ಸ್ಪರ್ಶಿಸಿದಾಗ ಮಣ್ಣು ವಾಸನೆ ಬರಲು ಕಾರಣ ಸ್ಪೆಕ್ಟೋಮೈಸಿನ ಬ್ಯಾಕ್ಟಿರಿಯಾ ಚಟುವಟಿಕೆ ಕಾರಣ.




9. ಈ ಕೆಳಗಿನ ಯಾವುದು ಟವಿ ರಿಮೋಟ್ ಕಂಟ್ರೋಲರ್ ಟಿವಿಯನ್ನು ಚಾಲನೆ ಮಾಡುವಂತೆ ಮಾಡುತ್ತದೆ.
ಎ) ಪ್ರಕಾಶ ತರಂಗ
ಬಿ) ಶಬ್ದ ತರಂಗ
ಸಿ) ಸೂಕ್ಷ್ಮ ತರಂಗ
ಡಿ) ರೇಡಿಯೋ ತರಂಗ


ಸರಿಯಾದ ಉತ್ತರ : ಡಿ) ನೀರಿನ ಮೇಲ್ವೆ ಒತ್ತಡ

ವಿವರಣೆ : ಟಿವಿ ರಿಮೋಟ್ ಕಂಟ್ರೋಲರ್‌ನಲ್ಲಿ ಬಳಸುವ ತರಂಗ ಸೂಕ್ಷ್ಮ ತರಂಗವಾಗಿದೆ. ಆದರೆ ನೈಜವಾಗಿ ನಾವು ರಿಮೋಟ್‌ಗಳಲ್ಲಿ ಇನ್‌ಫ್ರಾರೆಡ್ ಕಿರಣ ಅಥವಾ ಅವಗೆಂಪು ಕಿರಣಗಳನ್ನು ಬಳಸುತ್ತಾರೆ. 

⏭ ಮೇಲ್ಮೈ ಊತ, ಮೂಳೆಗಳ ಸ್ಥಾನ ಪಲ್ಲಟ ಮತ್ತು ಉಳುಕಿನ ಚಿಕಿತ್ಸೆ ಇವುಗಳ ವಿಧಾನಕ್ಕಾಗಿ (Diagnosis) ವೈದ್ಯಕೀಯ ಕ್ಷೇತ್ರದಲ್ಲಿ ಅವಕೆಂಪು ಕಿರಣಗಳನ್ನು ಬಳಸುತ್ತಾರೆ.

⏭ ಸೂರ್ಯನಿಂದ ಹೊರಹೊಮ್ಮುವ ಅವಕೆಂಪು ಕಿರಣಗಳನ್ನು ಸೌರಶಕ್ತಿ ಸಾಧನದಲ್ಲಿ ಬಳಸುತ್ತಾರೆ.




10. ವೇಗಮಿತಿಯನ್ನು ಮೀರಿ ಚಲಿಸುವ ವಾಹನಗಳನ್ನು ಪತ್ತೆ ಹಚ್ಚಲು ಪೊಲೀಸರು ಇದನ್ನು ಉಪಯೋಗಿಸುತ್ತಾರೆ.
ಎ) ಕ್ಲೋಸ್ ಸರ್ಕ್ಯೂಟ್ ಟಿ.ವಿ.
ಬಿ) ಡಾಪ್ಲರ್ ರಾಡಾರ್ ಗನ್
ಸಿ) ವಾಕೀ ಟಾಕೀ
ಡಿ) ಕ್ಯಾಮೆರಾ


ಸರಿಯಾದ ಉತ್ತರ : ಡಿ) ನೀರಿನ ಮೇಲ್ವೆ ಒತ್ತಡ

ವಿವರಣೆ : ವೇಗ ಮಿತಿಯನ್ನು ಮೀರಿ ಚಲಿಸುವ ವಾಹನಗಳನ್ನು ಪತ್ತೆ ಹಚ್ಚುವ ಸಾಧನವೇ ರಾಡಾರ್‌ಗನ ರೇಡಿಯೋ ತರಂಗಗಳನ್ನು ಚಲಿಸುತ್ತಿರುವ ವಾಹನದ ದಿಕ್ಕಿನಲ್ಲಿ ಕಳಿಸಿ, ಪ್ರತಿಫಲಿತ ತರಂಗಗಳನ್ನು ಪಡೆಯಲಾಗುತ್ತದೆ. ತರಂಗಳ ಆವೃತ್ತಿಯಲ್ಲಿನ ಬದಲಾವಣೆಯನ್ನು ಕಂಡು ಹಿಡಿಯಲಾಗುತ್ತದೆ. ಇದರಿಂದ ವಾಹನದ ವೇಗ ಲೆಕ್ಕ ಹಾಕಬಹುದು. ಇದು ಡಾಪ್ಲರ್ ಪರಿಣಾಮದ ಅನ್ವಯ ಕಾರ್ಯನಿರ್ವಹಿಸುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area