ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Top-50 Educational Psychology Question Answers in Kannada for TET CTET and GPSTR Exams-01

Top-50 Educational Psychology Question Answers in  Kannada for TET CTET and GPSTR Exams-01

Top-50 Educational Psychology Question Answers in  Kannada for TET CTET and GPSTR Exams-01




ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ),ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ) ಹಾಗೂಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಶೈಕ್ಷಣಿಕ ಮನೋವಿಜ್ಞಾನ (ಶಿಶು ಮನೋವಿಜ್ಞಾನ) ಟಾಪ್-50 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-50 Educational Psychology and Pedagogy Multiple Choice Question Answers (Psychology MCQ's in Kannada) in Kannada For All Competitive Exams like Karnataka Teacher's Eligibility Test (TET), Central Teachers Eligibility Test (CTET) and Graduate Primary School Teachers Recruitment, and All Competitive Exams.


Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1. ವ್ಯಕ್ತಿ ಅಧ್ಯಯನದ ಪಿತಾಮಹ
(A) ಟಿಚ್ನರ್ 
(B) ಬ್ರಾನ್
(C) ಡಿ.ಎಫ್.ಡಿ. ಬುಕ್ಸ್
(D) ವ್ಯಾಟ್ಸನ್


ಸರಿಯಾದ ಉತ್ತರ: (C) ಡಿ.ಎಫ್.ಡಿ. ಬುಕ್ಸ್  

2. ಅವಲೋಕನ ಪದ್ಧತಿಯ ಪಿತಾಮಹ
(A) ಜೆ.ಬಿ. ವ್ಯಾಟ್ಸನ್
(B) ಥಾರನ್ ಡೈಕ್
(C) ಸ್ಕಿನ್ನರ್
(D) ಕ್ರೋ ಮತ್ತು ಕ್ರೋ


ಸರಿಯಾದ ಉತ್ತರ: (A) ಜೆ.ಬಿ. ವ್ಯಾಟ್ಸನ್ 

3. ಮಗು ಆಟವಾಡುವಾಗ ಅವನ ವರ್ತನೆಯನ್ನು ಅಧ್ಯಯನ ಮಾಡುವುದು
(A) ಸ್ವಾಭಾವಿಕ ಅವಲೋಕನ 
(B) ನಿಯಂತ್ರಿಕ ಅವಲೋಕನ 
(C) ಅವಲೋಕನ
(D) ಯಾವುದು ಅಲ್ಲ


ಸರಿಯಾದ ಉತ್ತರ : (A) ಸ್ವಾಭಾವಿಕ ಅವಲೋಕನ   

4. ಪ್ರಶಿಕ್ಷಣಾರ್ಥಿಯ ಪ್ರಯೋಗಿಕ ಪರೀಕ್ಷೆಯ ಬೋಧನೆಯನ್ನು ವೀಕ್ಷಿಸುವುದು
(A) ಸ್ವಾಭಾವಿಕ ಅವಲೋಕನ 
(B) ನಿಯಂತ್ರಿಕ ಅವಲೋಕನ ಪದ್ಧತಿ
(C) ಅಂತರಾವಲೋಕನ ಪದ್ಧತಿ 
(D) ಯಾವುದು ಅಲ್ಲ


ಸರಿಯಾದ ಉತ್ತರ : (B) ನಿಯಂತ್ರಿಕ ಅವಲೋಕನ ಪದ್ಧತಿ   

5. ಅವಲೋಕನ ಪದ್ಧತಿಯ ಉಪಯೋಗವೆಂದರೆ
(A) ಹಣದ ಉಳಿತಾಯ
(B) ವೈಯಕ್ತಿಕ ಮತ್ತು ಗುಂಪನ್ನು ಸರಳವಾಗಿ ವೀಕ್ಷಿಸಬಹುದು
(C) ವ್ಯಕ್ತಿತ್ವ ಪರೀಕ್ಷೆಯಲ್ಲಿ ಉತ್ತಮ ಸಹಕಾರಿ
(D) ಈ ಮೇಲಿನ ಎಲ್ಲವೂ 


ಸರಿಯಾದ ಉತ್ತರ : (D) ಈ ಮೇಲಿನ ಎಲ್ಲವೂ 

6. ಅವಲೋಕನ ಪದ್ಧತಿಯ ಪ್ರಮುಖ ಅವಗುಣವೆಂದರೆ
(A) ವ್ಯಕ್ತಿಗೆ ತಿಳಿದರೆ ಕೃತಕನಾಗಬಹುದು
(B) ವೀಕ್ಷಕನ ವೈಯಕ್ತಿಕ ದೃಷ್ಟಿ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ
(C) ಫಲಿತಾಂಶದ ಪುನರ್ ಪರಿಶೀಲನೆ ಅಸಾಧ್ಯ
(D) ಮೇಲಿನ ಎಲ್ಲವೂ 


ಸರಿಯಾದ ಉತ್ತರ: (D) ಮೇಲಿನ ಎಲ್ಲವೂ 

7. ಅಂತರಾವಲೋಕನ ಪದ್ಧತಿಯನ್ನು ಬೆಳಕಿಗೆ ತಂದವರು
(A) ಎಡ್ವರ್ಡ್ ಟಿಚ್ನರ್
(B) ಜೆ.ಬಿ. ವ್ಯಾಟ್ಸನ್
(C) ಕೊಹರ್
(D) ಆಲ್‌ಪೋರ್ಟ್


ಸರಿಯಾದ ಉತ್ತರ: (A) ಎಡ್ವರ್ಡ್ ಟಿಚ್ನರ್ 

 8, ಅಂತರಾವಲೋಕನ ಪದ್ಧತಿ ಎಂದರೆ
(A) ಅಂತರ ಬಿಟ್ಟು ಅವಲೋಕನ ಮಾಡುವುದು
(B) ತನ್ನನ್ನು ತಾನು ಅರಿಯುವುದು
(C) ಅಂತರ ಬಿಡದೆ ವೀಕ್ಷಣೆ ಮಾಡುವುದು
(D) ಯಾವುದೂ ಅಲ್ಲ


ಸರಿಯಾದ ಉತ್ತರ : (B) ತನ್ನನ್ನು ತಾನು ಅರಿಯುವುದು  

9. ಭೋಧಕ ತನ್ನ ಭೋದನೆಯ ಲೋಪದೋಷಗಳನ್ನು ತಾನೆ ವಿಮರ್ಶಿಸಿಕೊಂಡು ಸರಿಪಡಿಸಿ ಕೊಳ್ಳಲು ಸಹಾಯವಾಗುವ ಪದ್ಧತಿ
(A) ಅವಲೋಕನ ಪದ್ಧತಿ 
(B) ಅಂತರಾವಲೋಕನ ಪದ್ಧತಿ 
(C) ಸ್ವಾಭಾವಿಕ ಅವಲೋಕನ ಪದ್ಧತಿ
(D) ಯಾವುದೂ ಅಲ್ಲ


ಸರಿಯಾದ ಉತ್ತರ : (B) ಅಂತರಾವಲೋಕನ ಪದ್ಧತಿ   

10. ಎಲ್ಲಾ ಮನೋವಿಜ್ಞಾನ ಅಧ್ಯಯನಗಳ ತಳಹದಿ ಎಂದರೆ
(A) ಪ್ರಾಯೋಗಿಕ ಪದ್ಧತಿ 
(B) ಅವಲೋಕನ ಪದ್ಧತಿ 
(C) ವ್ಯಕ್ತಿಗತ ಪದ್ಧತಿ
(D) ಅಂತರಾವಲೋಕನ ಪದ್ಧತಿ


ಸರಿಯಾದ ಉತ್ತರ : (D) ಅಂತರಾವಲೋಕನ ಪದ್ಧತಿ 


11. ಮತ್ತೊಬ್ಬ ವ್ಯಕ್ತಿಯ ವರ್ತನೆಯನ್ನು ಕ್ರಮಬದ್ಧವಾಗಿ ಅಲವೋಕಿಸುವುದನ್ನು ಹೀಗೆನ್ನುವರು
(A) ವ್ಯಕ್ತಿ ಅಧ್ಯಯನ 
(B) ವ್ಯಕ್ತಿನಿಷ್ಟ ವೀಕ್ಷಣೆ 
(C) ವಸ್ತುನಿಷ್ಟ ವೀಕ್ಷಣೆ 
(D) ವೀಕ್ಷಣೆ


ಸರಿಯಾದ ಉತ್ತರ : (C) ವಸ್ತುನಿಷ್ಟ ವೀಕ್ಷಣೆ   

12. ಪ್ರಾರಂಭದ ಶಿಕ್ಷಕರ ವಿಪಲತೆ ಕಂಡು ಬರುವ ಪ್ರಮುಖ ಕ್ಷೇತ್ರ
(A) ಸಾಮಾನ್ಯ ಜ್ಞಾನ 
(B) ವಿಷಯದ ಹಿಡಿತ 
(C) ಅಂತರ್-ವ್ಯಕ್ತಿ ಸಂಬಂಧ
(D) ಯಾವುದೂ ಅಲ್ಲ


ಸರಿಯಾದ ಉತ್ತರ: (C) ಅಂತರ್-ವ್ಯಕ್ತಿ ಸಂಬಂಧ 

13. ಪ್ರಯೋಗದಲ್ಲಿ ಕಾರ್ಯ ಕಾರಣದ ಮೇಲೆ ಪರಿಣಾಮ ಬೀರುವ ಚಲಕ/ಚಲಾಂಶವೆಂದರೆ
(A) ಮಧ್ಯಂತರ ಚಲಕ
(B) ಅಸಂಗತ ಚಲಕ 
(C) ಪರತಂತ್ರ ಚಲಕ 
(D) ಸ್ವತಂತ್ರ ಚಲಕ


ಸರಿಯಾದ ಉತ್ತರ : (A) ಮಧ್ಯಂತರ ಚಲಕ   

14, ಬೇರೊಂದು ಚಲಕದಲ್ಲಿ ಆಗುವ ಬದಲಾವಣೆಯನ್ನು ಅವಲಂಬಿಸಿ ಬದಲಾಗುವ ಚರಾಂಶವೇ
(A) ಪರತಂತ್ರ ಚಲಕ
(B) ಮಧ್ಯಂತರ ಚಲಕ
(C) ಕೃತಕ ಚಲಕ
(D) ಸ್ವತಂತ್ರ ಚಲಕ


ಸರಿಯಾದ ಉತ್ತರ : (A) ಪರತಂತ್ರ ಚಲಕ 

15, ಕಾರ್ಯ ಕಾರಣ ಸಂಬಂಧಗಳನ್ನು ಅಧ್ಯಯನ ಮಾಡುವ ಮನೋವಿಜ್ಞಾನದ ಅಧ್ಯಯನವಿಧಾನ
(A) ಅಂತರಾವಲೋಕನ
(B) ಕಾರಣ ವಿಧಾನ 
(C) ಪ್ರಾಯೋಗಿಕ ವಿಧಾನ
(D) ಮೇಲಿನ ಎಲ್ಲವೂ ಹೌದು


ಸರಿಯಾದ ಉತ್ತರ : (C) ಪ್ರಾಯೋಗಿಕ ವಿಧಾನ  

16, ಚಲಕ ಅಥವಾ ಚರಾಂಶಗಳಲ್ಲಿನ ವಿಧಗಳ ಸಂಖ್ಯೆ
(A) 3
(B) 4
(C) 5
(D) 2


ಸರಿಯಾದ ಉತ್ತರ : (A) 3

17. ಒಂದು ನಿಯಂತ್ರಿತ ವಾತಾವರಣದಲ್ಲಿ ಜೀವಿಯ ಅನುಕ್ರಿಯೆ/ವರ್ತನೆಗಳನ್ನು ಅಧ್ಯಯನ ಮಾಡುವ ವಿಧಾನ
(A) ಅಂತರಾವಲೋಕನ
(B) ವಿರೀಕ್ಷಣಾ ವಿಧಾನ 
(C) ಚಟುವಟಿಕಾವಿಧಾನ 
(D) ಪ್ರಾಯೋಗಿಕ ವಿಧಾನ


ಸರಿಯಾದ ಉತ್ತರ: (D) ಪ್ರಾಯೋಗಿಕ ವಿಧಾನ 

 18. ಪ್ರಾಯೋಗಿಕ ವಿಧಾನಕ್ಕೆ ಈ ಕೆಳಗಿನ ಯಾವ ಹೇಳಿಕೆ ತುಂಬಾ ಹತ್ತಿರವಾಗಿದೆ
(A) ಈ ಚಟುವಟಿಕೆಯು ಸ್ವಾಭಾವಿಕ ಸನ್ನಿವೇಶದಲ್ಲಿ ಕೈಗೊಳ್ಳುವುದಾಗಿದೆ
(B) ಈ ಚಟುವಟಿಕೆಯು ಒಂದು ನಿಯಂತ್ರಿತ ಸನ್ನಿವೇಶದಲ್ಲಿ ಕೈಗೊಳ್ಳುವುದಾಗಿದೆ
(C) ಈ ಚಟುವಟಿಕೆಯು ಸ್ವಾಭಾವಿಕ ಹಾಗೂ ಕೃತಕ ಸನ್ನಿವೇಶದಲ್ಲಿ ಕೈಗೊಳ್ಳುವುದಾಗಿದೆ
(D) ಈ ಚಟುವಟಿಕೆ ಯಾವಾಗಲಾದರೂ, ಎಲ್ಲಾ ಸನ್ನಿವೇಶದಲ್ಲಿಯಾದರೂ ಕೈಗೊಳ್ಳಬಹುದಾಗಿದೆ


ಸರಿಯಾದ ಉತ್ತರ : (B) ಈ ಚಟುವಟಿಕೆಯು ಒಂದು ನಿಯಂತ್ರಿತ ಸನ್ನಿವೇಶದಲ್ಲಿ ಕೈಗೊಳ್ಳುವುದಾಗಿದೆ  

19, ಒಂದು ಪ್ರಯೋಗದ ಸನ್ನಿವೇಶದಲ್ಲಿ ಪ್ರಾಯೋಗಿಕ ಗುಂಪನ್ನು ಈ ಚರಾಂಶ ಉದ್ದೇಶ ಪೂರ್ವಕವಾಗಿ ಒಡ್ಡುತ್ತಾರೆ
(A) ಪರತಂತ್ರ ಚರಾಂಶ
(B) ಸ್ವತಂತ್ರ ಚರಾಂಶ 
(C) ಕೃತಕ ಸಮರ್ಥನೆ 
(D) ನಿರೋಧ


ಸರಿಯಾದ ಉತ್ತರ : (B) ಸ್ವತಂತ್ರ ಚರಾಂಶ 

20. ಒಂದು ತರಗತಿಯ ಒಬ್ಬ ವಿದ್ಯಾರ್ಥಿಯ ಫಲಿತಾಂಶವು ನಿರಂತಕವಾಗಿ ಅಡಿ ಕಡಿಮೆ ಬರುತ್ತಿದೆ. ಇದಕ್ಕೆ ಕಾರಣವನ್ನು ತಿಳಿಯಲು ಸಹಾಯಕವಾಗುವ ವಿಧಾನ
(A) ವ್ಯಕ್ತಿ ಅಧ್ಯಯನ
(B) ಪ್ರಾಯೋಗಿಕ ಅಧ್ಯಯನ 
(C) ಅಂತರಾವಲೋಕನ 
(D) ವೀಕ್ಷಣೆ


ಸರಿಯಾದ ಉತ್ತರ : (A) ವ್ಯಕ್ತಿ ಅಧ್ಯಯನ   


21, ಚರಾಂಶಗಳ ಗಣನೆಗೆ ತೆಗೆದುಕೊಳ್ಳುವ ಶೈಮನೋವಿಜ್ಞಾನದ ಆಧ್ಯಯನ ವಿಧಾನ ಇದಾಗಿದೆ
(A) ವ್ಯಕ್ತಿ ಅಧ್ಯಯನ 
(B) ಪ್ರಾಯೋಗಿಕ ಅಧ್ಯಯನ
(C) ಅವಲೋಕನ ವಿಧಾನ 
(D) ಮೇಲಿನ ಎಲ್ಲಾ


ಸರಿಯಾದ ಉತ್ತರ : (B) ಪ್ರಾಯೋಗಿಕ ಅಧ್ಯಯನ  

22. ಈ ಕೆಳಗಿನ ಯಾವ ಹಂತವು ಪ್ರಾಯೋಗಿಕ ವಿಧಾನದಲ್ಲಿ ಹೆಚ್ಚು ಮಹತ್ವವನ್ನು ಹೊಂದಿದೆ
(A) ದತ್ತಾಂಶ ಸಂಗ್ರಹಣೆ
(B) ಉಪಕರಣಗಳನ್ನು ಜೋಡಿಸುವಿಕೆ
(C) ಪರಿಕಲ್ಪನೆಗಳನ್ನು ರೂಪಿಸುವಿಕೆ
(D) ದತ್ತಾಂಶಗಳ ವಿಶ್ಲೇಷಣೆ


ಸರಿಯಾದ ಉತ್ತರ: (C) ಪರಿಕಲ್ಪನೆಗಳನ್ನು ರೂಪಿಸುವಿಕೆ  

23. ಪ್ರಕಾಶನು ತನ್ನ ಮಾನಸಿಕ ಚಟುವಟಿಕೆಗಳನ್ನು ಮತ್ತು ಭಾವನೆಗಳನ್ನು ಸ್ವತಃ ತಾನೇ ಈ ಅಧ್ಯಯನ ಮಾಡುವ ವಿಧಾನ
(A) ಅಂತರಾವಲೋಕನ ವಿಧಾನ
(B) ಅವಲೋಕನ ವಿಧಾನ 
(C) ಅಂತರಮುಖ ವಿಧಾನ 
(D) ಬಹಿರ್ಮುಖ ವಿಧಾನ


ಸರಿಯಾದ ಉತ್ತರ : (A) ಅಂತರಾವಲೋಕನ ವಿಧಾನ  

24. ನಡವಳಿಕೆ ವಿಜ್ಞಾನವೆನಿಸಿಕೊಂಡಿರುವುದು
(A) ಪಳೆಯುಳಿಕೆ ವಿಜ್ಞಾನ 
(B) ಮನಃಶಾಸ್ತ್ರ
(C) ರಾಸಾಯನ ಶಾಸ್ತ್ರ 
(D) ಜೀವಶಾಸ್ತ್ರ


ಸರಿಯಾದ ಉತ್ತರ : (B) ಮನಃಶಾಸ್ತ್ರ 

25. ವ್ಯಕ್ತಿ ಅಧ್ಯಯನ ವಿಧಾನದ ಪಿತಾಮಹ ಇವರು
(A) ಡಿ.ಎಫ್.ಡಿ. ಬುಕ್ಸ್
(B) ವೂಂಟ್
(C) ವೀರಪ್ಪ
(D) ಸ್ಕಿನ್ನರ್


ಸರಿಯಾದ ಉತ್ತರ : (A) ಡಿ.ಎಫ್.ಡಿ. ಬುಕ್ಸ್  

26. ಒಬ್ಬ ವಿದ್ಯಾರ್ಥಿ ಸತತವಾಗಿ ತಡವಾಗಿ ಬರುತ್ತಿದ್ದಾನೆ. ಈ ಸಮಸ್ಯೆಯನ್ನು ಹೋಗೂಡಿಸಲು ಯಾವ ವಿಧಾನದ ಮುಖಾಂತರ ಪರಿಹಾರ ಮಾಡಬಹುದು
(A) ಅವಲೋಕನ ವಿಧಾನ
(B) ವ್ಯಕ್ತಿಗತ ಅಧ್ಯಯನ 
(C) ಅಂತರಾವಲೋಕನ ವಿಧಾನ 
(D) ಪ್ರಯೋಗಿಕ ವಿಧಾನ


ಸರಿಯಾದ ಉತ್ತರ : (B) ವ್ಯಕ್ತಿಗತ ಅಧ್ಯಯನ  

27, ಪ್ರಯೋಗಿಕ ವಿಧಾನದ ಪಿತಾಮಹ
(A) ವಿಲ್‌ಹೆಲೆವೂಂಟ್
(B) ಸ್ಕಿನ್ನರ್
(C) ವಾಟ್ಸನ್
(D) ವುಡ್‌ವರ್ತ್


ಸರಿಯಾದ ಉತ್ತರ: (A) ವಿಲ್‌ಹೆಲೆವೂಂಟ್  

28, ಮನೋವಿಜ್ಞಾನದ ಅಧ್ಯಯನ ವಿಧಾನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವಿಧಾನ
(A) ಅವಲೋಕನ ವಿಧಾನ 
(B) ಪ್ರಾಯೋಗಿಕ ವಿಧಾನ 
(C) ವ್ಯಕ್ತಿಗತ ಅಧ್ಯಯನ
(D) ಅಂತರಾವಲೋಕನ ವಿಧಾನ


ಸರಿಯಾದ ಉತ್ತರ : (B) ಪ್ರಾಯೋಗಿಕ ವಿಧಾನ   

29. ಪ್ರಾಯೋಗಿಕ ವಿಧಾನದ ಹೆಚ್ಚು ಪ್ರಚಲಿತಕ್ಕೆ ಕಾರಣ
(A) ಅನುಗುಣವಾದ ಬೋದನಾ ಪದ್ಧತಿ ಅಳವಡಿಸಿಕೊಳ್ಳಬಹುದು 
(B) ಹೆಚ್ಚು ವಸ್ತುನಿಷ್ಟ ಫಲಿತಾಂಶ ನೀಡಬಹುದು
(C) ಇದು ನೂತನ ಅನ್ವೇಷಣೆಗೆ ರಾಜ ಮಾರ್ಗವಾಗಿದೆ
(D) ಮೇಲಿನ ಎಲ್ಲವೂ


ಸರಿಯಾದ ಉತ್ತರ : (D) ಮೇಲಿನ ಎಲ್ಲವೂ  

30, ಮಾನವೀಯ ಮನೋವಿಜ್ಞಾನಿಗಳ ಅಂತಿಮ ಗುರಿ
(A) ಮಾನವ ವರ್ತನೆಯನ್ನು ವೀಕ್ಷಿಸಬಹುದು
(B) ಮಾನವ ವರ್ತನೆಯನ್ನು ತಿದ್ದುವುದು
(C) ಮಾನವ ವರ್ತನೆಯನ್ನು ಅರ್ಥಮಾಡಿಕೊಳ್ಳುವುದು 
(D) ಮಾನವ ವರ್ತನೆಯನ್ನು ನಿಯಂತ್ರಿಸುವುದು 


ಸರಿಯಾದ ಉತ್ತರ : (C) ಮಾನವ ವರ್ತನೆಯನ್ನು ಅರ್ಥಮಾಡಿಕೊಳ್ಳುವುದು   


31, ಒಂದು ಶಾಲೆಯ 10ನೇ ತರಗತಿಯ ಫಲಿತಾಂಶವು ಸತತವಾಗಿ ಅತೀ ಕಡಿಮೆ ಬರುತ್ತದೆ.ಇದಕ್ಕೆ ಕಾರಣವನ್ನು ಅರ್ಥಮಾಡಿಕೊಳ್ಳಲು ಯಾವ ವಿಧಾನ ಅತ್ಯಂತ ಸೂಕ್ತ
(A) ವ್ಯಕ್ತಿ ಅಧ್ಯಯನ 
(B) ಪ್ರಾಯೋಗಿಕರಣ
(C) ಅಂತರಾವಲೋಕನ
(D) ವೀಕ್ಷಣೆ


ಸರಿಯಾದ ಉತ್ತರ : (B) ಪ್ರಾಯೋಗಿಕರಣ  

32, ಸಹಭಾಗೀ ಅವಲೋಕನದ ಪ್ರಮುಖ ಮಿತಿ ಎಂದರೆ
(A) ಎಲ್ಲಾ ಬಾಹ್ಯ ವರ್ತನೆಗಳನ್ನು ವೀಕ್ಷಿಸಲು ಸಾಧ್ಯವಾಗದಿರುವುದು
(B) ಅನುರೂಪ ಸನ್ನಿವೇಶದಲ್ಲಿ ವಿವಿಧ ವ್ಯಕ್ತಿಗಳು ಅವಿವಿಧ ರೀತಿಯ ವರ್ತನೆಗಳನ್ನು ತೋರ್ಪಡಿಸುವುದು.
(C) ವೀಕ್ಷಕರ ವ್ಯಕ್ತಿಸಿಷ್ಟ ಅವಲೋಕನ
(D) ಅವಲೋಕನಕ್ಕೊಳಪಟ್ಟ ವ್ಯಕ್ತಿ ಸ್ವಾಭಾವಿಕ ವರ್ತನೆ ತೋರದಿರುವುದು


ಸರಿಯಾದ ಉತ್ತರ: (D) ಅವಲೋಕನಕ್ಕೊಳಪಟ್ಟ ವ್ಯಕ್ತಿ ಸ್ವಾಭಾವಿಕ ವರ್ತನೆ ತೋರದಿರುವುದು 

33, ಒಂದು ಪ್ರಯೋಗ ಸನ್ನಿವೇಶದಲ್ಲಿ ಪ್ರಯೋಗಿಕ ಗುಂಪನ್ನು ಯಾವ ಚರಾಂಶಕ್ಕೆ ಉದ್ದೇಶ ಪೂರ್ವಕವಾಗಿ ಒಡ್ಡುತ್ತಾರೆ.
(A) ಪರತಂತ್ರ ಚರಾಂಶ 
(B) ಸ್ವತಂತ್ರ ಚರಾಂಶ
(C) ಕೃತಕ ಸಮರ್ಥನೆ 
(D) ನಿರೋಧ


ಸರಿಯಾದ ಉತ್ತರ : (B) ಸ್ವತಂತ್ರ ಚರಾಂಶ  

34, ಬಾಹ್ಯವಾಗಿ ಅಭಿಪ್ರೇರಿಸಲ್ಪಟ್ಟ ವ್ಯಕ್ತಿಯು ಚಟುವಟಿಕೆಗಳಲ್ಲಿ ತೊಡಗಿರುವುದು
(A) ಹೊರಗಿನ ಪರಿಣಾಮಕ್ಕಾಗಿ
(B) ಚಟುವಟಿಕೆಯಿಂದಿರಲು
(C) ವೈಯುಕ್ತಿಕ ತೃಪ್ತಿಗಾಗಿ 
(D) ಕಾರ್ಯದಕ್ಷತೆ ಹೆಚ್ಚಿಸಿಕೊಳ್ಳಲು


ಸರಿಯಾದ ಉತ್ತರ : (A) ಹೊರಗಿನ ಪರಿಣಾಮಕ್ಕಾಗಿ  

35. ಈ ಹೇಳಿಕೆಗಳಲ್ಲಿ ಸರಿಯಾದುದು
(A) ಶಿಕ್ಷೆ ವಿದ್ಯಾರ್ಥಿಗಳನ್ನು ಸಾಧನೆಯತ್ತ ಪ್ರೋತ್ಸಾಹಿಸುತ್ತದೆ
(B) ಎಲ್ಲಾ ಪ್ರತಿಭಾನ್ವಿತರೂ ಸೃಜನಶೀಲರಾಗಿರುತ್ತಾರೆ
(C) ಸಮುದ್ರದ ಪರಿಕಲ್ಪನೆಯ ಒಂದು ಪ್ರಮುಖ ಗುಣ ಅದರ ಗಾತ್ರ
(D) ವ್ಯಕ್ತಿಯ ವಿಕಾಸಕ್ಕೆ ಪರಿಸರ ಮೇಲಿನ ಮಿತಿಯನ್ನು ನಿರ್ಧರಿಸುತ್ತದೆ 


ಸರಿಯಾದ ಉತ್ತರ : (D) ವ್ಯಕ್ತಿಯ ವಿಕಾಸಕ್ಕೆ ಪರಿಸರ ಮೇಲಿನ ಮಿತಿಯನ್ನು ನಿರ್ಧರಿಸುತ್ತದೆ  

36. ಮನೋವಿಜ್ಞಾನದಲ್ಲಿ ಪ್ರಥಮ ಪ್ರಯೋಗ ಮಾಡಿದವರು
(A) ವಿಲ್‌ಹೆಲ್ಫ್ವೂಂಟ್ 
(B) ಥಾರನ್ ಡೈಕ್
(C) ಸಿನ್ನರ್
(D) ವ್ಯಾಟ್ಸನ್


ಸರಿಯಾದ ಉತ್ತರ : (A) ವಿಲ್‌ಹೆಲ್ಫ್ವೂಂಟ್   

37. ಮೊದಲು ಮನೋವಿಜ್ಞಾನದ ಪ್ರಯೋಗಾಲಯವನ್ನು ಇಲ್ಲಿ ಸ್ಥಾಪಿಸಲಾಯಿತು
(A) ಪ್ಯಾರಿಸ್
(B) ಗ್ರೀಕ್
(C) ಫ್ರಾಂಕ್‌ಪರ್ಟ್
(D) ಲಿಪ್ ಜಿಗ್ 


ಸರಿಯಾದ ಉತ್ತರ: (D) ಲಿಪ್ ಜಿಗ್  

 38. ಕೆಳಕಂಡ ಯಾವುದು ವ್ಯಕ್ತಿನಿಷ್ಟ ಪ್ರಧಾನವಾದುದ್ದಾಗಿದೆ?
(A) ಸಮೀಕ್ಷೆ
(B) ಪ್ರಾಯೋಗಿಕ ವಿಧಾನ 
(C) ಪ್ರಯೋಗಗಳು 
(D) ಅಂತರ್‌ ವೀಕ್ಷಣೆ 


ಸರಿಯಾದ ಉತ್ತರ : (D) ಅಂತರ್‌ ವೀಕ್ಷಣೆ  

39. ವ್ಯಕ್ತಿ ಅಧ್ಯಯನ ವಿಧಾನದ ಪ್ರಮುಖ ಉದ್ದೇಶವೆಂದರೆ
(A) ವರ್ತನಾ ಸಮಸ್ಯೆಗಳ ಕಾರಣಗಳನ್ನು ಪತ್ತೆ ಹಚ್ಚುವುದು 
(B) ಸಮಸ್ಯೆಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದು
(C) ವರ್ತನಾ ಸಮಸ್ಯೆಗಳ ಕಾರಣಗಳನ್ನು ಪತ್ತೆ ಹಚ್ಚುವುದು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು
(D) ಯಾವುದೂ ಅಲ್ಲ


ಸರಿಯಾದ ಉತ್ತರ : (C) ವರ್ತನಾ ಸಮಸ್ಯೆಗಳ ಕಾರಣಗಳನ್ನು ಪತ್ತೆ ಹಚ್ಚುವುದು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು  

40. ಪ್ರಾಯೋಗಿಕ ವಿಧಾನದ ಯಶಸ್ಸಿಗೆ ಕಾರಣವಾಗುವ ಪ್ರಮುಖ ಅಂಶವೆಂದರೆ
(A) ಪರತಂತ್ರ ಚರಾಂಶದ ನಿಯಂತ್ರಣ
(B) ಸ್ವತಂತ್ರ ಚರಾಂಶದ ನಿಯಂತ್ರಣಪ್ರಜ್ಞಾನಾ ವಿಜ್ಞಾನ
(C) ಮಧ್ಯವರ್ತಿ ಚರಾಂಶದ ನಿಯಂತ್ರಣ
(D) A ಮತ್ತು B


ಸರಿಯಾದ ಉತ್ತರ : (C) ಮಧ್ಯವರ್ತಿ ಚರಾಂಶದ ನಿಯಂತ್ರಣ  


41. ಶೈಕ್ಷಣಿಕ ಮನೋವಿಜ್ಞಾನದ ಈ ಕೆಳಗಿನ ಯಾವ ವಿಧಾನ ಶೈಕ್ಷಣಿಕ ಮನೋವಿಜ್ಞಾನದ ಸ್ಥಾನಮಾನವನ್ನು ತಂದುಕೊಟ್ಟಿದೆ
(A) ವ್ಯಕ್ತಿಗತ ಅಧ್ಯಯನ
(B) ಅವಲೋಕನ ವಿಧಾನ 
(C) ಪ್ರಯೋಗಿಕ ವಿಧಾನ 
(D) ಯಾವುದೂ ಅಲ್ಲ


ಸರಿಯಾದ ಉತ್ತರ : (C) ಪ್ರಯೋಗಿಕ ವಿಧಾನ  

42, ಒಬ್ಬ ವ್ಯಕ್ತಿಯ ಚಟುವಟಿಕೆಗಳನ್ನು ಬಹಿರಂಗವಾಗಿ ಕಂಡು ಅವುಗಳ ಕಾರಣ ಮತ್ತು ಪರಿಣಾಮಗಳನ್ನು ಕಲ್ಪಿಸು ವಿಕೆಯನ್ನು.....ಎನ್ನುವರು
(A) ವೀಕ್ಷಣೆ
(B) ಪ್ರಯೋಗ
(C) ಅಂತರಾವಲೋಕನ 
(D) ಅನುಗಮನ


ಸರಿಯಾದ ಉತ್ತರ: (A) ವೀಕ್ಷಣೆ  

43, ಮನೋವಿಜ್ಞಾನದ ಈ ಕೆಳಗಿನ ಯಾವ ಶಾಖೆ ಮಾನಸಿಕ ತೊಂದರೆಗಳ ಕಾರಣಗಳನ್ನು ಪತ್ತೆ ಹಚ್ಚುವ ಬಗ್ಗೆ ಚರ್ಚಿಸುತ್ತದೆ.
(A) ಸಲಹಾ ಮನೋವಿಜ್ಞಾನ 
(B) ಶೈಕ್ಷಣಿಕ ಮನೋವಿಜ್ಞಾನ. 
(C) ಸಾಮಾನ್ಯ ಮನೋವಿಜ್ಞಾನ 
(D) ಚಿಕಿತ್ಸಾ ಮನೋವಿಜ್ಞಾನ 


ಸರಿಯಾದ ಉತ್ತರ : (D) ಚಿಕಿತ್ಸಾ ಮನೋವಿಜ್ಞಾನ 

44 ಪ್ರಯೋಗಿಕ ವಿಧಾನದ ಪ್ರಮುಖ ಮಿತಿಯೆಂದರೆ
(A) ಫಲಿತಾಂಶಗಳನ್ನು ಸ್ವಾಭಾವಿಕ ಸನ್ನಿವೇಶದಲ್ಲಿ ಪಡೆಯಲಾಗುತ್ತದೆ 
(B) ಪುನರಾವರ್ತನೆಯಿಂದ ಫಲಿತಾಂಶಗಳನ್ನು ಪರಿಷ್ಕರಿಸಬಹುದು
(C) ಫಲಿತಾಂಶಗಳನ್ನು ಕೃತಕ ಸನ್ನಿವೇಶದಲ್ಲಿ ಪಡೆಯಲಾಗುತ್ತದೆ
(D) ಫಲಿತಾಂಶಗಳು ವೈಜ್ಞಾನಿಕವಾದುದು


ಸರಿಯಾದ ಉತ್ತರ : (C) ಫಲಿತಾಂಶಗಳನ್ನು ಕೃತಕ ಸನ್ನಿವೇಶದಲ್ಲಿ ಪಡೆಯಲಾಗುತ್ತದೆ   

45. ರಚನಾ ವಾದದ ಪಿತಾಮಹ
(A) ಜೆ.ಬಿ. ವ್ಯಾಟ್ಸನ್
(B) ಸಿಗ್ಮಂಡ್ ಫ್ರಾಯ್ಡ್
(C) ಟಿಷ್ಕರ್ ಇ.ಬಿ.
(D) ಸಿನ್ನರ್


ಸರಿಯಾದ ಉತ್ತರ : (C) ಟಿಷ್ಕರ್ ಇ.ಬಿ. 

46, ನೈದಾನಿಕ ಅನುಭವಗಳ ಆಧಾರದ ಮೇಲೆ ಮನಸ್ಸಿನ ನಕ್ಷೆಯನ್ನು ಚಿತ್ರೀಕರಿಸಿದ ಮನೋವಿಜ್ಞಾನಿ
(A) ಪಾವಲೋ
(B) ಕೋಹ್ಲರ್
(C) ಸಿಗ್ಮಂಡ್ ಫ್ರಾಯ್ಡ್
(D) ಸ್ಕಿನ್ನರ್


ಸರಿಯಾದ ಉತ್ತರ : (C) ಸಿಗ್ಮಂಡ್ ಫ್ರಾಯ್ಡ್  

47, ಪ್ರಾಣಿ ಮನೋವಿಜ್ಞಾನದ ಮತ್ತೊಂದು ಹೆಸರು
(A) ತೌಲನಿಕ ಮನೋವಿಜ್ಞಾನ
(B) ಜೀವ ಮನೋವಿಜ್ಞಾನ 
(C) A ಮತ್ತು B ಎರಡೂ ಸರಿ 
(D) A ಮತ್ತು B ಎರಡೂ ತಪ್ಪು


ಸರಿಯಾದ ಉತ್ತರ: (A) ತೌಲನಿಕ ಮನೋವಿಜ್ಞಾನ   

 48, ಜಾಗ್ರತಾವಸ್ಥೆಯ ಹೊಸ್ತಿಲನ್ನು ಮೀರಿರುವ ಮಾನವ ವ್ಯಕ್ತಿತ್ವದ ಅಧ್ಯಯನ ಮಾಡುವ ವಿಭಾಗ
(A) ಪ್ಯಾರಾ ಸೈಕಾಲಜಿ
(B) ಅಸಾಮಾನ್ಯ ಮನೋವಿಜ್ಞಾನ 
(C) A ಮತ್ತು B
(D) ನಾರ್ಮಲ್ ಸೈಕಾಲಜಿ


ಸರಿಯಾದ ಉತ್ತರ : (A) ಪ್ಯಾರಾ ಸೈಕಾಲಜಿ  

49, ಗೆಸ್ಟಾಲ್ಪನ ವಿಧಾನ ಇದಾಗಿದೆ
(A) ಅಂತರಾವಲೋಕನ 
(B) ವರ್ತನೆಯ ವೀಕ್ಷಣೆ
(C) A ಮತ್ತು B
(D) ವ್ಯಕ್ತಿಗತ ಅಧ್ಯಯನ


ಸರಿಯಾದ ಉತ್ತರ: (B) ವರ್ತನೆಯ ವೀಕ್ಷಣೆ

50. ಈ ಕೆಳಗಿನ ಯಾವ ತಂತ್ರವನ್ನು ಬಳಸಿ ಬಂದ ಮಾಹಿತಿಯ ಆಧಾರದ ಮೇಲೆ ಒಂದು ಹಿಂದುಳಿದ ಮಗುವು ಎದುರಿಸುತ್ತಿರುವ ತೊಂದರೆಗಳನ್ನು ಅತ್ಯಂತ ಸಮರ್ಪಕವಾಗಿ ನೈದಾನೀಕರಣಿಸಬಹುದು
(A) ವೀಕ್ಷಣೆ
(B) ವ್ಯಕ್ತಿ ಅಧ್ಯಯನ
(C) ಸಮೂಹ ಚರ್ಚೆ 
(D) ಸಂದರ್ಶನ


ಸರಿಯಾದ ಉತ್ತರ : (B) ವ್ಯಕ್ತಿ ಅಧ್ಯಯನ  

Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area