ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

27 January 2022 Daily Top-10 General Knowledge Question Answers in Kannada for All Competitive Exams

27 January 2022 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com ​11 January 2022 Daily Top-10 General Knowledge Question Answers in Kannada for All Competitive Exams, ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



💥💥💥💥

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳ ಸಂಗ್ರಹ


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ  ಟಾಪ್ 10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ನಿಮಗಾಗಿ. ಸಾಮಾನ್ಯ ಜ್ಞಾನದ ಈ ಪ್ರಶ್ನೋತ್ತರಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿಯನ್ನು ಒದಗಿಸುತ್ತವೆ.  ಸಾಮಾನ್ಯ ಜ್ಞಾನದ ವಿಷಯಗಳಾದ ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಭೂಗೋಳಶಾಸ್ತ್ರ ವಿಜ್ಞಾನ ಇತ್ಯಾದಿ ಸೇರಿದಂತೆ ಎಲ್ಲಾ ವಿಷಯಗಳ ಪ್ರಶ್ನೋತ್ತರಗಳನ್ನು ವಿಭಾಗದಲ್ಲಿ ತಾವುಗಳು ಅಧ್ಯಯನ ಮಾಡಬಹುದು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ಸಾಮಾನ್ಯ ಜ್ಞಾನ ಅತಿ ಅವಶ್ಯವಾಗಿದೆ. ಕೆಪಿಎಸ್ಸಿ, ಎಫ್ಡಿಎ, ಎಸ್ಡಿಎ,    ಗ್ರೂಪ್-ಸಿ, ಹಾಸ್ಟೆಲ್ ವಾರ್ಡನ್, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಡೆಸುವ ಪಿಎಸ್ಐ ಪೊಲೀಸ್ ಕಾನ್ಸ್ಟೇಬಲ್, ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಅತಿ ಅವಶ್ಯವಾಗಿದೆ.

ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಸಂಗ್ರಹ:


ಇಲ್ಲಿ ಒದಗಿಸಿರುವ ಎಲ್ಲಾ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಹಿಂದಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳಿಂದ ಸಂಗ್ರಹಿಸಿ, ಇಲ್ಲಿ ನೀಡಲಾಗಿದೆ. ಇವುಗಳು ತಮ್ಮ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.


General Knowledge (GK) Question Answers in Kannada For All Competitive Exams:

General Knowledge (GK) is one of the major Subject in All Competitive Exams. General Knowledge deals with all aspects of common things and day-to-day important points. Here Edutube Kannada Provides General Knowledge (GK) Quiz for All Competitive Exams like UPSC IAS IPS, KPSC KAS, FDA SDA, Group-C, SSC, RRB, All state TET, CTET, and Karnataka Graduate Primary School Teachers Recruitment (GPSTR). If you have good knowledge of General Knowledge Then you will get succeeded in  Any Competitive Exams. Here we provide General Knowledge (GK) Question Answers in Kannada for Aspirants of Karnataka who seriously studied for their success. So please use these quizzes for your reference and Get a good score in your All Competitive Exams. Edutube Kannada wishes you all the very best for your Success.




01.  ಭಾರತದ ನಿರ್ಧರಿತ ವೇಳೆಯು ಗ್ರೀನ್‍ವಿಚ್ ವೇಳೆಗಿಂತ ಎಷ್ಟು ಗಂಟೆ ವ್ಯತ್ಯಾಸ ಹೊಂದಿದೆ,
ಎ) 5 ಗಂಟೆ ಮುಂದಿದೆ                
ಬಿ) 5 1/2 ಗಂಟೆ ಮುಂದಿದೆ 
ಸಿ) 5 ಗಂಟೆ ಹಿಂದಿದೆ                   
ಡಿ) 5 1/2 ಗಂಟೆ ಹಿಂದಿದೆ  

ಸರಿಯಾದ ಉತ್ತರ: ಬಿ) 5 1/2 ಗಂಟೆ ಮುಂದಿದೆ 



2.  ಭಾರತವು ಈ ಮಾದರಿಯ ವಾಯುಗುಣವನ್ನು ಹೊಂದಿದೆ,
ಎ) ಸಮಭಾಜಕ ವೃತ್ತ ವಾಯುಗುಣ
ಬಿ) ಮಾನ್ಸೂನ್ ವಾಯುಗುಣ 
ಸಿ) ಮೆಡಿಟರೇನಿಯನ್ ವಾಯುಗುಣ
ಡಿ) ತಂಪಾದ ಸಮಶೀತೊಷ್ಣ ವಾಯುಗುಣ

ಸರಿಯಾದ ಉತ್ತರ: ಬಿ) ಮಾನ್ಸೂನ್ ವಾಯುಗುಣ     



03.  ಮಹಮ್ಮದ್ ಗವಾನ್ ಕಟ್ಟಸಿರುವ ಮದ್ರಸಾ ಇರುವ ಸ್ಥಳ,
ಎ) ಬೀದರ್ 
ಬಿ) ಗುಲ್ಬರ್ಗಾ 
ಸಿ) ಬಿಜಾಪುರ
ಡಿ) ಗೋಲ್ಕಂಡ  

ಸರಿಯಾದ ಉತ್ತರ: ಎ) ಬೀದರ್ 




4. ಮೊಘಲ್ ಆಳ್ವಿಕೆಯ ಕಾಲದಲ್ಲಿ (1526-1857) ಆಫ್ಘನ್ ಸಂತತಿಯ ವ್ಯಕ್ತಿಯೊಬ್ಬ ಅಧಿಕಾರ ನಡೆಸಿದ. ಆತ,
ಎ) ಹುಮಾಯುನ್ 
ಬಿ) ಅಲಂಗೀರ್
ಸಿ) ಶೇರಷಾ 
ಡಿ) ಔರಂಗಜೇಬ್

ಸರಿಯಾದ ಉತ್ತರ: ಸಿ) ಶೇರಷಾ 





5. ‘ಹೇಬಿಯಸ್ ಕಾರ್ಪಸ್’ ರಿಟ್ ಆದೇಶ ಹೊರಡಿಸುವ ಅಧಿಕಾರ ಹೊಂದಿರುವವರು/ವುದು,
ಎ) ಸುಪ್ರೀಂ ಕೋರ್ಟ್
ಬಿ) ಹೈಕೋರ್ಟ್ & ಸುಪ್ರೀಂ ಕೋರ್ಟ್ 
ಸಿ) ಹೈಕೋರ್ಟ್
ಡಿ) ಅಧೀನ ನ್ಯಾಯಾಲಯ

ಸರಿಯಾದ ಉತ್ತರ: ಬಿ) ಹೈಕೋರ್ಟ್ & ಸುಪ್ರೀಂ ಕೋರ್ಟ್ 




6. ಪ್ರಸ್ತುತ ಭಾರತದಲ್ಲಿ ಯಾವ ನೀರಾವರಿ ಪದ್ಧತಿ ಅತಿ ಹೆಚ್ಚು ಬಳಕೆಯಲ್ಲಿದೆ.
ಎ) ಬಾವಿ ನೀರಾವರಿ
ಬಿ) ಕೆರೆ ನೀರಾವರಿ
ಸಿ) ಕಾಲುವೆ ನೀರಾವರಿ
ಡಿ) ಹನಿ ನೀರಾವರಿ

ಸರಿಯಾದ ಉತ್ತರ: ಎ) ಬಾವಿ ನೀರಾವರಿ     




7.  ಸರ್ದಾರ್ ವಲ್ಲಭಭಾಯಿ ಪಟೇಲರು ‘ಪೊಲೀಸ್ ಕಾರ್ಯಾಚರಣೆ’ ಕೈಗೊಂಡು ಭಾರತದ ಒಕ್ಕೂಟಕ್ಕೆ ಸೇರಿಸಿಕೊಂಡ ಸಂಸ್ಥಾನ
ಎ) ಜುನಾಗಢ
ಬಿ) ಜಮ್ಮು ಮತ್ತು ಕಾಶ್ಮೀರ
ಸಿ) ಮೈಸೂರು
ಡಿ) ಹೈದರಾಬಾದ್   

ಸರಿಯಾದ ಉತ್ತರ: ಡಿ) ಹೈದರಾಬಾದ್       



8. ವಿಶಾಲ ಮೈಸೂರು ರಾಜ್ಯವು ಜನ್ಮ ತಾಳಿದ ದಿನ
ಎ) ನವೆಂಬರ್ 1, 1956 
ಬಿ) ಆಗಸ್ಟ್ 14, 1947
ಸಿ) ನವೆಂಬರ್ 1, 1973
ಡಿ) ಆಗಸ್ಟ 15, 1947

ಸರಿಯಾದ ಉತ್ತರ: ಎ) ನವೆಂಬರ್ 1, 1956



9. ಮೊದಲ ವಿಶ್ವ ಯುದ್ಧದ ನಂತರ ಖಾಯಂ ಆಗಿ ಶಾಂತಿಯನ್ನು ನೆಲೆಸುವಂತೆ ಯಾವ ಸಂಸ್ಥೆಯನ್ನು ಸ್ಥಾಪಿಸಲಾಯಿತು?
ಎ) ರೆಡ್ ಕ್ರಾಸ್ ಸಂಸ್ಥೆ
ಬಿ) ಆಮ್ನೆಸ್ಟಿ ಇಂಟರ್ ನ್ಯಾಷನಲ್
ಸಿ) ರಾಷ್ಟ್ರಗಳ ಸಂಘ 
ಡಿ) ವಿಶ್ವಸಂಸ್ಥೆ    

ಸರಿಯಾದ ಉತ್ತರ: ಸಿ) ರಾಷ್ಟ್ರಗಳ ಸಂಘ       




10.  ನದಿ ನಿರ್ವಹಣೆಯು ಕೇಂದ್ರ ಮತ್ತು ರಾಜ್ಯ ಪಟ್ಟಿಗಳೆರಡರಲ್ಲೂ ಇರುವುದು ಇಂದಿನ ಸಮಸ್ಯೆಯಾಗಿದೆ. ಇದರ ಸಂಖ್ಯೆ ಕ್ರಮವಾಗಿ,
ಎ) ಕೇಂದ್ರ ಪಟ್ಟಿ – 56, ರಾಜ್ಯ ಪಟ್ಟಿ – 17
ಬಿ) ಕೇಂದ್ರ ಪಟ್ಟಿ – 46, ರಾಜ್ಯ ಪಟ್ಟಿ – 37
ಸಿ) ಕೇಂದ್ರ ಪಟ್ಟಿ – 56, ರಾಜ್ಯ ಪಟ್ಟಿ – 27 
ಡಿ) ಕೇಂದ್ರ ಪಟ್ಟಿ – 17, ರಾಜ್ಯ ಪಟ್ಟಿ – 56  

ಸರಿಯಾದ ಉತ್ತರ: ಸಿ) ಕೇಂದ್ರ ಪಟ್ಟಿ – 56, ರಾಜ್ಯ ಪಟ್ಟಿ – 27



 ಇವುಗಳನ್ನೂ ಓದಿ January 2022  




























 ಇವುಗಳನ್ನೂ ಓದಿ December 2021  



























 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area